ಬೆಂಗಳೂರು : ವಿಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ರಚಿಸಲು ಉದ್ದೇಶಿಸಿದ್ದ ಮಹಾಮೈತ್ರಿಕೂಟ ಒಂದು ವಿಫ‌ಲ ಐಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.

ಪರಸ್ಪರ ಜಗಳವಾಡುವ ಪಕ್ಷಗಳು ಅಧಿಕಾರ ಸಿಗುತ್ತದೆ ಎಂದಾದರೆ ಒಂದಾಗುತ್ತವೆ. ಅದಕ್ಕೆ ಕರ್ನಾಟಕದಲ್ಲಿ ರಚನೆಯಾಗಿರುವ ಸರಕಾರವೇ ಸಾಕ್ಷಿ ಎಂದು ಹೇಳಿದರು. ಈ ಮೂಲಕ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ ರಚನೆಯಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವನ್ನು ಪರೋಕ್ಷವಾಗಿ ಟೀಕಿಸಿದರು. ಇಂಥ ಮೈತ್ರಿಯ ಯತ್ನಗಳು ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲಿ ಮಾಡಿಕೊಳ್ಳಲು ಪ್ರಯತ್ನಗಳು ಮುಂದು ವರಿದಿವೆ. ಅದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಜನರಿಗೆ ಅರಿವು ಮಾಡಿಕೊಡಬೇಕು ಎಂದು ಹೇಳಿದರು.

ಬುಧವಾರ ಮೋದಿ ಆ್ಯಪ್‌ ಮೂಲಕ ಮೈಸೂರು, ಆಗ್ರಾ, ದಾಮೋಹ್‌, ಕರೌಲಿ-ಧೋಲ್ಪುರ್‌, ರಾಯ್‌ಪುರದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್‌ ವಿರುದ್ಧ ಟೀಕೆ ಗುಜರಾತ್‌ನಿಂದ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳ ಕಾರ್ಮಿಕರನ್ನು ಬಡಿದು ಅಟ್ಟಲಾಗುತ್ತದೆ ಎಂಬ ಕಾಂಗ್ರೆಸ್‌ ಆರೋಪವನ್ನು ಪರೋಕ್ಷ ವಾಗಿ ಪ್ರಸ್ತಾವಿಸಿದ ಪ್ರಧಾನಿ ಮೋದಿ, ಬಿಜೆಪಿ ಎಲ್ಲರನ್ನೂ ಒಟ್ಟುಗೂಡಿಸಿ ಮುಂದುವರಿಯುವ ಬಗ್ಗೆ ಮಾತನಾಡುತ್ತಿದ್ದರೆ, ಕಾಂಗ್ರೆಸ್‌ ಸಮಾಜವನ್ನು ಒಡೆಯುವ ಮಾತುಗಳನ್ನಾಡುತ್ತಿದೆ. ಐದು ರಾಜ್ಯ ಗಳಲ್ಲಿ ಶೀಘ್ರವೇ ಚುನಾವಣೆ ನಡೆಯಲಿದೆ. ಅದಕ್ಕೆ ಅನುಸಾರವಾಗಿ ಸಣ್ಣ-ಸಣ್ಣ ವಿಚಾರಗಳಿಗೆ ಸಂಬಂಧಿಸಿ ದಂತೆ ಕಾಂಗ್ರೆಸ್‌ ಜನರ ನಡುವೆ ಜಗಳ ತಂದಿಡಲಿದೆ ಎಂದು ಆರೋಪಿಸಿದರು.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಮೂರು ರಾಜ್ಯಗಳನ್ನು ರಚಿಸಿದರು. ಆದರೆ ಕಾಂಗ್ರೆಸ್‌ ಆಂಧ್ರ ಪ್ರದೇಶವನ್ನು ವಿಭಜಿಸಿ, ಒಂದೇ ಭಾಷೆ ಮಾತನಾಡುವ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಪರಸ್ಪರ ಕಚ್ಚಾಡುವಂತೆ ಮಾಡಿತು ಎಂದು ವಾಗ್ಧಾಳಿ ನಡೆಸಿದರು.

Please follow and like us:
0
http://bp9news.com/wp-content/uploads/2018/10/modi2.jpghttp://bp9news.com/wp-content/uploads/2018/10/modi2-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯKarnataka witness to opportunistic alliance: Modiಬೆಂಗಳೂರು : ವಿಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ರಚಿಸಲು ಉದ್ದೇಶಿಸಿದ್ದ ಮಹಾಮೈತ್ರಿಕೂಟ ಒಂದು ವಿಫ‌ಲ ಐಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು. ಪರಸ್ಪರ ಜಗಳವಾಡುವ ಪಕ್ಷಗಳು ಅಧಿಕಾರ ಸಿಗುತ್ತದೆ ಎಂದಾದರೆ ಒಂದಾಗುತ್ತವೆ. ಅದಕ್ಕೆ ಕರ್ನಾಟಕದಲ್ಲಿ ರಚನೆಯಾಗಿರುವ ಸರಕಾರವೇ ಸಾಕ್ಷಿ ಎಂದು ಹೇಳಿದರು. ಈ ಮೂಲಕ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ ರಚನೆಯಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವನ್ನು ಪರೋಕ್ಷವಾಗಿ ಟೀಕಿಸಿದರು. ಇಂಥ ಮೈತ್ರಿಯ ಯತ್ನಗಳು ಉತ್ತರ...Kannada News Portal