ಗೋಣಿಕೊಪ್ಪಲು : ಮತ ಪ್ರಚಾರ ವೇಳೆ ಕಾಂಗ್ರೇಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಅತಿರೇಕಕ್ಕೇರಿ ಪರಸ್ಪರ ಹಲ್ಲೆ ನಡೆದು ಎರಡು ಪಕ್ಷದ ಕಾರ್ಯಕರ್ತರಿಗೆ ಗಂಭೀರ ಗಾಯಗಳಾದ ಘಟನೆ ಗೋಣಿಕೊಪ್ಪಲು ಎರಡನೇ ವಿಭಾಗದಲ್ಲಿ ಬುಧವಾರ ರಾತ್ರಿ ನಡೆದಿದೆ.

ಎರಡನೇ ವಿಭಾಗದಲ್ಲಿ ಒಂದೇ ಸಮಯದಲ್ಲಿ ಮತಯಾಚನೆ ನಡೆಸುತ್ತಿದ್ದ ಎರಡು ಪಕ್ಷದ ಕಾರ್ಯಕರ್ತರ ನಡುವಿನ ಮಾತಿನಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ನಡೆದಿದೆ. ಈ ಸಂದರ್ಭ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜೇಶ್, ಕಾರ್ಯಕರ್ತರುಗಳಾದ ಅಯ್ಯಪ್ಪ, ಪಳನಿ, ರವಿ, ಮಣಿ ಹಾಗೂ ಕಾಂಗ್ರೇಸ್ ಪಕ್ಷದ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ನಗರಧ್ಯಕ್ಷ ಕರ್ತಂಡ ಸೋಮಣ್ಣ ಹಾಗೂ ಗಾ.ಪಂ. ಸದಸ್ಯ ಮುರುಗ ಇವರುಗಳಿಗೂ ಗಂಭೀರ ಗಾಯಗಳಾಗಿದೆ. ಎರಡು ಗುಂಪಿನ ನಡುವಿನ ಹಲ್ಲೆ ಘರ್ಷಣೆಯಿಂದ ಉದ್ವಿಘ್ನತೆಗೆ ದಾರಿಯಾಗಿ ಶಾಂತಿ ಭಂಗವಾಗಿದೆ. ದುಂಬಿ ಗಲಭೆ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡುವ ಮೂಲಕ ಶಾಂತಿ ಕಾಪಾಡಲು ಮುಂದಾದರು. ಕಾಂಗ್ರೇಸಿನ ಇಬ್ಬರು, ಬಿ.ಜೆ.ಪಿಯ ಆರು ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 20 ಮಂದಿಯ ಮೇಲೆ ಪ್ರಕರಣ ದಾಖಲಾಗಿದ್ದು, ಉಳಿದವರ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಕರಣ:  ಬುಧವಾರ ರಾತ್ರಿ 10 ಗಂಟೆಗೆ ಗೋಣಿಕೊಪ್ಪಲುವಿನ ಎರಡನೇ ವಿಭಾಗದಲ್ಲಿ ಕಾಂಗ್ರೇಸ್, ಬಿ.ಜೆ.ಪಿ. ಕಾರ್ಯಕರ್ತರು ಮತಯಾಚನೆ ನಡೆಸುತ್ತಿದ್ದರು. ಈ ಸಂದರ್ಭ ಎರಡು ಗುಂಪುಗಳ ನಡುವೆ ಮಾತು ಗಂಭೀರ ಪರಿಸ್ಥಿತಿಯನ್ನು ಪಡೆದುಕೊಂಡಿತು. ಈ ಸಂದರ್ಭ ಗ್ರಾ.ಪಂ. ಸದಸ್ಯ ಮುರುಗ, ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜೇಶ್ ನಡುವೆ ಮಾತು ಅತಿರೇಖಕ್ಕೇರಿ ಪರಸ್ಪರ ಹಲ್ಲೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಪರಿಸ್ಥಿತಿ ಗಂಭೀರತೆಯನ್ನು ಪಡೆದುಕೊಂಡು ಉಳಿದ ಕಾರ್ಯಕರ್ತರ ನಡುವಿನಲ್ಲೂ ಪರಸ್ಪರ ಹಲ್ಲೆ ನಡೆದಿದೆ. ಹಲ್ಲೆಗೊಳಗಾದವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ ಸಂದರ್ಭ ಕಾಂಗ್ರೇಸಿನ ಕೆಲವು ಕಾರ್ಯಕರ್ತರುಗಳು ಮಾರಕ ಆಯುಧಗಳಿಂದ ಆರೋಗ್ಯ ಕೇಂದ್ರವನ್ನು ಪ್ರವೇಶಿಸಿ ಬಿ.ಜೆ.ಪಿ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಸಂದರ್ಭ ಆರೋಗ್ಯ ಕೇಂದ್ರದ ಕೆಲವು ಅಮೂಲ್ಯ ವಸ್ತುಗಳು ಹಾನಿಗೊಳಗಾಗಿ ನಷ್ಟ ಸಂಭವಿಸಿದೆ. ಘರ್ಷಣೆಯ ಸಂದರ್ಭ ಅಕ್ಕಪಕ್ಕದ ಮನೆಯ ಮೇಲೂ ಕಲ್ಲು ತೂರಾಟ ನಡೆದಿದ್ದು, ಹಾನಿ ಸಂಭವಿಸಿದೆ.ಈ ವೇಳೆ ಪೇದೆ ಗಣೇಶ್ ತಲೆಗೆ ಸಣ್ಣ ಗಾಯವಾಗಿದೆ.

ಘರ್ಷಣೆಯಲ್ಲಿ ಗಂಭೀರ ಗಾಯಗಳಾದ ಕಾವೇರಿ ಕಾಲೇಜಿನ ಪ್ರಥಮ ಬಿ.ಎ. ವಿಧ್ಯಾರ್ಥಿ ಪುನೀತ್ ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ. ಪುನೀತ್ ಆರ್.ಎಸ್.ಎಸ್ ನ ಸಂಘದ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಖೆ ಮುಗಿಸಿ ಮನೆಗೆ ಬರುತ್ತಿದ್ದ ಸಂದರ್ಭ ಈತನ ಮೇಲೆ ಹಲ್ಲೆ ನಡೆಸಲಾಗಿದೆ. ಪುನೀತನ ಕುತ್ತಿಗೆ ಭಾಗ, ಕೆನ್ನೆಯ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಕಾಂಗ್ರೇಸಿನ ಜಮ್ಮಡ ಸೋಮಣ್ಣ ಹಾಗೂ ಕರ್ತಂಡ ಸೋಮಣ್ಣ ಅವರುಗಳಿಗೂ ಗಂಭೀರ ಗಾಯಗಳಾಗಿದ್ದು, ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಕರಣ ಗೋಣೀಕೊಪ್ಪಲು ಪೊಲೀಸ್​​ ಠಾಣೆಯಲ್ಲಿ ದಾಖಲಾಗಿದ್ದು, ಘಟನೆಗೆ ಕಾರಣವಾದ ಎರಡು ಪಕ್ಷದ ಕಾರ್ಯಕರ್ತರ ಮೇಲೆ ನಿರ್ದಾಕ್ಷೀಣ್ಯ ಕಾನೂನು ಕ್ರಮಕ್ಕೆ ಡಿ.ವೈ.ಎಸ್.ಪಿ. ನಾಗಪ್ಪ, ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಹರಿಶ್ಚಂದ್ರ, ಉಪನಿರೀಕ್ಷಕ ಸುಬ್ಬಯ್ಯ ಮುಂದಾಗಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಮಹದೇವಸ್ವಾಮಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಂಗ್ರೇಸಿನ ಗೂಂಡಾಗಿರಿ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಬಿ.ಜೆ.ಪಿಯ ಪ್ರಮುಖರು ಘಟನೆಗೆ ಮುಖ್ಯ ಕಾರಣರಾದವರನ್ನು ಬಂಧಿಸುವಂತೆ ಜಿಲ್ಲಾ ವರ್ತಕರ ಪ್ರಕೋಷ್ಟದ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ನಗರ ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಗಾಂಧಿ ದೇವಯ್ಯ, ಕುಲ್ಲಚಂಡ ಬೋಪಣ್ಣ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/10-shaskthi-01-1024x397.jpghttp://bp9news.com/wp-content/uploads/2018/05/10-shaskthi-01-150x150.jpgBP9 Bureauಕೊಡಗುಪ್ರಮುಖರಾಜಕೀಯಗೋಣಿಕೊಪ್ಪಲು : ಮತ ಪ್ರಚಾರ ವೇಳೆ ಕಾಂಗ್ರೇಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಅತಿರೇಕಕ್ಕೇರಿ ಪರಸ್ಪರ ಹಲ್ಲೆ ನಡೆದು ಎರಡು ಪಕ್ಷದ ಕಾರ್ಯಕರ್ತರಿಗೆ ಗಂಭೀರ ಗಾಯಗಳಾದ ಘಟನೆ ಗೋಣಿಕೊಪ್ಪಲು ಎರಡನೇ ವಿಭಾಗದಲ್ಲಿ ಬುಧವಾರ ರಾತ್ರಿ ನಡೆದಿದೆ. ಎರಡನೇ ವಿಭಾಗದಲ್ಲಿ ಒಂದೇ ಸಮಯದಲ್ಲಿ ಮತಯಾಚನೆ ನಡೆಸುತ್ತಿದ್ದ ಎರಡು ಪಕ್ಷದ ಕಾರ್ಯಕರ್ತರ ನಡುವಿನ ಮಾತಿನಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ನಡೆದಿದೆ. ಈ ಸಂದರ್ಭ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ...Kannada News Portal