ಮಡಿಕೇರಿ : ಕಾಳುಮೆಣಸಿನ ದರ ಮುಂದಿನ ಕೆಲವು ದಿನಗಳಲ್ಲಿಯೇ ಹೆಚ್ಚಳವಾಗಲಿದ್ದು, ರೈತರು ಯಾವುದೇ ಕಾರಣಕ್ಕೂ ಹತಾಶರಾಗಬಾರದೆಂದು ಕ್ಯಾಂಪ್ಕೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪ್ಕೊ ಸಂಚಾಲಕ ಕೊಂಕೋಡಿ ಪದ್ಮನಾಭ, ಕಾಳು ಮೆಣಸು ದರ ಸದ್ಯ ಕೆ.ಜಿ.ಗೆ ರೂ.350ರ ಆಸುಪಾಸಿನಲ್ಲಿದ್ದು ,ಯಥೇಚ್ಚವಾಗಿ ಕಾಳುಮೆಣಸು ಮಾರುಕಟ್ಟೆಗೆ ಬರುತ್ತಿರುವುದು ಕುಸಿತಕ್ಕೆ ತಾತ್ಕಾಲಿಕ ಕಾರಣವಾಗಿದೆ.  ಕರ್ನಾಟಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಣ ಚಲಾವಣೆ ಬಿಗಿಯಾಗಿರುವುದು ಕೂಡಾ ಕರಿಮೆಣಸು ದರ ಕುಸಿತಕ್ಕೆ ಒಂದು  ಕಾರಣ  ಎಂದು ಹೇಳಿದ್ದಾರೆ.

ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ದರ ಏರಿಕೆ ಆಗುತ್ತಿದ್ದು, ವಿಯೆಟ್ನಾಂ ಕಾಳುಮೆಣಸನ್ನು ಆಮದು ಮಾಡಿಕೊಳ್ಳುವಲ್ಲಿ ಚೀನಾ ಬಹಳ ಉತ್ಸುಕವಾಗಿದೆ. ಕ್ಯಾಂಪ್ಕೊದ ನಿರಂತರ ಪ್ರಯತ್ನದಿಂದ ಕಾಳುಮೆಣಸು ಆಮದು ವಹಿವಾಟಿನಲ್ಲಿ ಸಾಕಷ್ಟು  ಅವ್ಯವಹಾರ ಮಾಡಿದ್ದ  ಆಮದುದಾರರ ಮೇಲೆ ಕೇಂದ್ರ ಜಾರಿ ನಿರ್ದೇಶನಾಲಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ. ಇದಕ್ಕಾಗಿ ಎಲ್ಲಾ ಕಾಳುಮೆಣಸು ಬೆಳೆಗಾರರ ಪರವಾಗಿ ಕ್ಯಾಂಪ್ಕೊ ಸಂಸ್ಥೆಯು ಜಾರಿ ನಿರ್ದೇಶನಾಲಯದ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸಿದೆ. ಇದೀಗ  ಕಳಪೆ ಗುಣಮಟ್ಟದ ಕಾಳುಮೆಣಸು ಆಮದು ಬಹುತೇಕ ಕಡಿಮೆಯಾಗಿದೆ ಎಂದರು.

ಈ ಎಲ್ಲಾ ಕಾರಣಗಳಿಂದ ಕಾಳುಮೆಣಸಿನ ದರ ಮುಂದಿನ ಕೆಲವು ದಿನಗಳಲ್ಲಿ ಏರಿಕೆಯಾಗುವ ಸಂಭವವಿದ್ದು , ರೈತರು ಹತಾಶರಾಗದೆ ತಮ್ಮ ಉಪಯೋಗಕ್ಕೆ ಬೇಕಾದಷ್ಟೇ ಕಾಳುಮೆಣಸು ಮಾರಾಟ ಮಾಡಬೇಕಾಗಿ ವಿನಂತಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಳುಮೆಣಸಿನ ದರದಲ್ಲಿ ಏರಿಕೆ ಕಂಡುಬರಬಹುದೆಂದು ಕೊಂಕೋಡಿ ಪದ್ಮನಾಭ ಹೇಳಿದ್ದಾರೆ.

 

 

 

Please follow and like us:
0
http://bp9news.com/wp-content/uploads/2018/05/Black_Pepper-1-1.jpghttp://bp9news.com/wp-content/uploads/2018/05/Black_Pepper-1-1-150x150.jpgBP9 Bureauಕೃಷಿಕೊಡಗುಪ್ರಮುಖಮಡಿಕೇರಿ : ಕಾಳುಮೆಣಸಿನ ದರ ಮುಂದಿನ ಕೆಲವು ದಿನಗಳಲ್ಲಿಯೇ ಹೆಚ್ಚಳವಾಗಲಿದ್ದು, ರೈತರು ಯಾವುದೇ ಕಾರಣಕ್ಕೂ ಹತಾಶರಾಗಬಾರದೆಂದು ಕ್ಯಾಂಪ್ಕೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪ್ಕೊ ಸಂಚಾಲಕ ಕೊಂಕೋಡಿ ಪದ್ಮನಾಭ, ಕಾಳು ಮೆಣಸು ದರ ಸದ್ಯ ಕೆ.ಜಿ.ಗೆ ರೂ.350ರ ಆಸುಪಾಸಿನಲ್ಲಿದ್ದು ,ಯಥೇಚ್ಚವಾಗಿ ಕಾಳುಮೆಣಸು ಮಾರುಕಟ್ಟೆಗೆ ಬರುತ್ತಿರುವುದು ಕುಸಿತಕ್ಕೆ ತಾತ್ಕಾಲಿಕ ಕಾರಣವಾಗಿದೆ.  ಕರ್ನಾಟಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಣ ಚಲಾವಣೆ ಬಿಗಿಯಾಗಿರುವುದು ಕೂಡಾ ಕರಿಮೆಣಸು ದರ ಕುಸಿತಕ್ಕೆ ಒಂದು ...Kannada News Portal