ಮಡಿಕೇರಿ : ಜನತೆಗೆ ಭಾರೀ ತೊಂದರೆ ಕೊಡುತಿದ್ದ ಒಂಟಿ ಸಲಗವೊಂದನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದು ದುಬಾರೆ ಆನೆ ಶಿಬಿರಕ್ಕೆ  ಸಾಗಿಸಿದ್ದಾರೆ. ಕುಶಾಲನಗರ ಬಳಿಯ ಸುಂಟಿಕೊಪ್ಪ, ಹೊರುರು, ಕಲ್ಲೂರು, 7 ನ ಹೊಸಕೋಟೆ ಮತ್ತು ಕೊಡಗರಳ್ಳಿಯ ಗ್ರಾಮಸ್ಥರಿಗೆ ಹಲವು ತಿಂಗಳುಗಳಿಂದ ಈ ಆನೆ ಉಪಟಳ ನೀಡುತಿತ್ತು. ದಿನವೂ ಹಗಲು ರಾತ್ರಿ ಎನ್ನದೆ ಗ್ರಾಮದೊಳಗೆ ನುಗ್ಗಿ ಕಾಫಿ, ತೆಂಗು ಮತ್ತು ಬಾಳೆ ಬೆಳೆಯನ್ನೆಲ್ಲಾ ನಾಶ ಮಾಡುತಿದ್ದ ಈ ಆನೆ ಸುಂಟಿಕೊಪ್ಪ -ಕುಶಾಲನಗರ ಹೆದ್ದಾರಿಯಲ್ಲಿ ಚಲಿಸುತಿದ್ದ ವಾಹನಗಳನ್ನೂ ಕೆಲವೊಮ್ಮೆ ಅಟ್ಟಿಸಿಕೊಂಡು ಬರುತಿತ್ತು.


ಇದರಿಂದ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಭಯ ಭಿತರಾಗಿದ್ದರು. ಕಳೆದ  15 ದಿನಗಳ ಹಿಂದಷ್ಟೇ ಬೈಕ್ ನಲ್ಲಿ ತೆರಳುತಿದ್ದ ಇಬ್ರಾಹಿಂ(64) ಎಂಬ ಕಾಫಿ ತೋಟದ ಮೇಲ್ವಿಚಾರಕರನ್ನು ಗಾಯಗೊಳಿಸಿತ್ತು ಆದರೆ ಸವಾರ ಅದೃಷ್ಟವತಾಶ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪ ಅರಣ್ಯಸಂರಕ್ಷಣಾಧಿಕಾರಿ ಮಂಜುನಾಥ್, ಅವರು ಒಂಟಿ ಸಲಗ ಧಾಳಿ ನಡೆಸುತ್ತಿರುವಕುರಿತು ಹಿರಿಯ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ರಾಜ್ಯದ ಹಿರಿಯ ಅರಣ್ಯಾಧಿಕಾರಿಗಳ ಆದೇಶದಂತೆ ಸಂಭವನೀಯ ಮಾನವ ಜೀವ ಹಾನಿ ತಪ್ಪಿಸಲು ಇದನ್ನು ಹೊರುರು ಬಳಿಯ ಲಲಿತಾದ್ರಿ ತೋಟದಲ್ಲಿ ಸೆರೆ ಹಿಡಿದು ದುಬಾರೆಗೆ ಲಾರಿಯ ಮೂಲಕ ಸಾಗಿಸಿ ಪಳಗಿಸಲಾಗುತ್ತಿದೆ ಎಂದರು. ಮಂಗಳವಾರ ಸೆರೆ ಹಿಡಿದ ಈ ಆನೆಗೆ 19 ರಿಂದ 20 ವರ್ಷ ಪ್ರಾಯವಾಗಿದ್ದು ಆರೋಗ್ಯವಾಗಿದೆ ಎಂದೂ ಅಧಿಕಾರಿ ತಿಳಿಸಿದರು .

Please follow and like us:
0
http://bp9news.com/wp-content/uploads/2018/05/elepent-video-1Karnatakada-Miditha.jpeghttp://bp9news.com/wp-content/uploads/2018/05/elepent-video-1Karnatakada-Miditha-150x150.jpegBP9 Bureauಕೊಡಗುಪ್ರಮುಖಮಡಿಕೇರಿ : ಜನತೆಗೆ ಭಾರೀ ತೊಂದರೆ ಕೊಡುತಿದ್ದ ಒಂಟಿ ಸಲಗವೊಂದನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದು ದುಬಾರೆ ಆನೆ ಶಿಬಿರಕ್ಕೆ  ಸಾಗಿಸಿದ್ದಾರೆ. ಕುಶಾಲನಗರ ಬಳಿಯ ಸುಂಟಿಕೊಪ್ಪ, ಹೊರುರು, ಕಲ್ಲೂರು, 7 ನ ಹೊಸಕೋಟೆ ಮತ್ತು ಕೊಡಗರಳ್ಳಿಯ ಗ್ರಾಮಸ್ಥರಿಗೆ ಹಲವು ತಿಂಗಳುಗಳಿಂದ ಈ ಆನೆ ಉಪಟಳ ನೀಡುತಿತ್ತು. ದಿನವೂ ಹಗಲು ರಾತ್ರಿ ಎನ್ನದೆ ಗ್ರಾಮದೊಳಗೆ ನುಗ್ಗಿ ಕಾಫಿ, ತೆಂಗು ಮತ್ತು ಬಾಳೆ ಬೆಳೆಯನ್ನೆಲ್ಲಾ ನಾಶ ಮಾಡುತಿದ್ದ ಈ ಆನೆ ಸುಂಟಿಕೊಪ್ಪ -ಕುಶಾಲನಗರ ಹೆದ್ದಾರಿಯಲ್ಲಿ...Kannada News Portal