ಮಡಿಕೇರಿ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಬಂಧಿಸಿದ ಪ್ರಕರಣ ಸುಂಟಿಕೊಪ್ಪ ಪಟ್ಟಣದಲ್ಲಿ ನಡೆದಿದೆ. ಸುಂಟಿಕೊಪ್ಪದ ನಿವಾಸಿ ಪ್ರಕಾಶ್ (20) ಎಂಬಾತ ಆರೋಪಿಯಾಗಿದ್ದು, 169 ಗ್ರಾಂ ತೂಕದ ಗಾಂಜಾ ಮತ್ತು ರೂ. 6050 ನಗದು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ ಪಣ್ಣೇಕರ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‍ಪೆಕ್ಟರ್ ಎಂ. ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ನೇತೃತ್ವದಲ್ಲಿ ಸ್ಥಳೀಯ ನಾಡಕಛೇರಿ ಹಿಂದೆ ಪಾಳುಬಿದ್ದ ಕಟ್ಟಡವೊಂದರಲ್ಲಿ ಗಾಂಜಾ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆದಿದೆ. ಆರೋಪಿಯನ್ನು ಬಂಧಿಸಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಹಮೀದ್, ತಮ್ಮಯ್ಯ, ಯೋಗೇಶ್, ಅನಿಲ್, ವೆಂಕಟೇಶ್, ವಸಂತ ಮತ್ತು ಸುಂಟಿಕೊಪ್ಪ ಠಾಣೆಯ ವಿಜಯಕುಮಾರ್, ರೆಹಮಾನ್ ಪಾಲ್ಗೊಂಡಿದ್ದರು.
Please follow and like us:
0
http://bp9news.com/wp-content/uploads/2018/09/10ea2bfd-ff77-489b-a964-d87c0bb8f071-1.jpghttp://bp9news.com/wp-content/uploads/2018/09/10ea2bfd-ff77-489b-a964-d87c0bb8f071-1-150x150.jpgBP9 Bureauಕೊಡಗುಪ್ರಮುಖಮಡಿಕೇರಿ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಬಂಧಿಸಿದ ಪ್ರಕರಣ ಸುಂಟಿಕೊಪ್ಪ ಪಟ್ಟಣದಲ್ಲಿ ನಡೆದಿದೆ. ಸುಂಟಿಕೊಪ್ಪದ ನಿವಾಸಿ ಪ್ರಕಾಶ್ (20) ಎಂಬಾತ ಆರೋಪಿಯಾಗಿದ್ದು, 169 ಗ್ರಾಂ ತೂಕದ ಗಾಂಜಾ ಮತ್ತು ರೂ. 6050 ನಗದು ವಶಪಡಿಸಿಕೊಳ್ಳಲಾಗಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal