ಮಡಿಕೇರಿ  : ಯಾರದೋ ಕೃಪಾಕಟಾಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಬಂದ ಸಂಸದ ಪ್ರತಾಪಸಿಂಹ ಅವರು, ನನ್ನ ವಿರುದ್ಧದ ಆರೋಪಗಳನ್ನು ಕೈಬಿಟ್ಟಲ್ಲಿ ಪಕ್ಷಕ್ಕು ಒಳ್ಳೆಯದು, ದೇಶಕ್ಕೂ ಒಳ್ಳೆಯದೆಂದು ಜಿಲ್ಲಾ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಸಂಸದರ ಸಾಮಾಜಿಕ ಜಾಲತಾಣದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ತಂಡ ಜಿಲ್ಲೆಯ ಹೆಬ್ಬೆಟ್ಟಗೇರಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಅವರಿಗೆ ತಪ್ಪು ಮಾಹಿತಿ ನೀಡಿದರೆನ್ನುವ ಕಾರಣದಿಂದ ಎಂ.ಬಿ. ದೇವಯ್ಯ, ಸ್ಥಳದಲ್ಲೆ ಸಂಸದರ ಮೇಲೆ ಹರಿಹಾಯ್ದಿದ್ದರು. ಇದಕ್ಕೆ ಸಂಸದರು ಸಾಮಾಜಿಕ ಜಾಲ ತಾಣದಲ್ಲಿ, ವೃದ್ಧರೆನ್ನುವ ಕಾರಣದಿಂದ ಪ್ರತಿಕ್ರಿಯೆ ನೀಡಿಲ್ಲ ಎನ್ನುವ ರೀತಿಯಲ್ಲಿ  ಹೇಳಿಕೆ ನೀಡಿದ್ದರು.

ನನಗೀಗ ಅರವತ್ತೆಂಟು ವರ್ಷ, ಸಂಸದ ಪ್ರತಾಪ ಸಿಂಹ ಅವರು ನನ್ನ ಮಗನ ಪ್ರಾಯದವರು. ನಾನು ಸಾಕಷ್ಟು ಸಾರ್ವಜನಿಕ ಹೋರಾಟಗಳಲ್ಲಿ ವಿದ್ಯಾರ್ಥಿಯಾಗಿದ್ದ ಅವಧಿಯಿಂದಲೇ ಪಾಲ್ಗೊಂಡು ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ನನ್ನ ಸಾರ್ವಜನಿಕ ಸೇವೆಗೆ ನಾಲ್ಕರಿಂದ ಐದು ದಶಕಗಳು ಸಂದಿದೆ. ಸಂಸದ ಪ್ರತಾಪಸಿಂಹನವರ ಸಾಮಾಜಿಕ ಸೇವೆ ಏನು ಎನ್ನುವುದರ ಬಗ್ಗೆ ಕುಳಿತು ಚರ್ಚಿಸೋಣ ಬೇಕಾದರೆ ಎಂದು ಖಾರವಾಗಿ ನುಡಿದರು.

ಸಂಸದರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ನಾಲಿಗೆ ಕುಲವನ್ನು ಹೇಳಿತು’ ಎನ್ನುವಂತೆ ಸಂಸದ ಪ್ರತಾಪಸಿಂಹ ವರ್ತಿಸಿದ್ದಾರೆ. ಅವರಿಗೆ ಸಾಮಥ್ರ್ಯವಿದ್ದರೆ ನನ್ನನ್ನೊಮ್ಮೆ ಮುಟ್ಟಿ ನೋಡಲಿ ಎಂದು ಸವಾಲೆಸೆದ ಎಂ.ಬಿ.ದೇವಯ್ಯ, ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಂತ್ವನ ಹೇಳಿ, ಅಭಯವನ್ನು ನೀಡುವುದರೊಂದಿಗೆ ಅವರಿಗೆ ಅನ್ಯಾಯವಾಗದಂತೆ ನೊಡಿಕೊಳ್ಳುವ ನಿಟ್ಟಿನಲ್ಲಿ ಸಂಸದರನ್ನು ಅಂದು ನಾನು ಕಟುವಾಗಿ ಪ್ರಶ್ನಿಸಿದ್ದೇನೆ ಹೊರತು ಅಸಂವಿಧಾನಿಕವಾದ ಯಾವುದೇ ಪದಪ್ರಯೋಗ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.

 

 

 

Please follow and like us:
0
http://bp9news.com/wp-content/uploads/2018/09/collage-2-4.jpghttp://bp9news.com/wp-content/uploads/2018/09/collage-2-4-150x150.jpgBP9 Bureauಕೊಡಗುಪ್ರಮುಖರಾಜಕೀಯಮಡಿಕೇರಿ  : ಯಾರದೋ ಕೃಪಾಕಟಾಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಬಂದ ಸಂಸದ ಪ್ರತಾಪಸಿಂಹ ಅವರು, ನನ್ನ ವಿರುದ್ಧದ ಆರೋಪಗಳನ್ನು ಕೈಬಿಟ್ಟಲ್ಲಿ ಪಕ್ಷಕ್ಕು ಒಳ್ಳೆಯದು, ದೇಶಕ್ಕೂ ಒಳ್ಳೆಯದೆಂದು ಜಿಲ್ಲಾ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಸಂಸದರ ಸಾಮಾಜಿಕ ಜಾಲತಾಣದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random()...Kannada News Portal