ಮಡಿಕೇರಿ: ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ಅರಳಿಸುವ ಮೂಲಕ ಸರ್ವಸುಂದರವಾದ ಪರಿಪೂರ್ಣವಾದ ಬದುಕನ್ನು ಕಲ್ಪಿಸಿಕೊಡುವ ‘ಶಿಕ್ಷಣ’ಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕೆನ್ನುವುದು ಗುರುದೇವ ರವೀಂದ್ರನಾಥ ಠಾಗೂರ್ ಅವರ ಚಿಂತನೆಯಾಗಿತ್ತೆಂದು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ಪ್ರಾಧ್ಯಾಪಕರಾದ ಹೆಚ್. ಪಟ್ಟಾಭಿರಾಮ ಸೋಮಯಾಜಿ ತಿಳಿಸಿದರು.

ಸೌಹಾರ್ದ ಕೊಡಗು ವೇದಿಕೆ ವತಿಯಿಂದ ನಗರದ ಬಾಲಭವನದಲ್ಲಿ ರವೀಂದ್ರನಾಥ್ ಠಾಗೂರ್‍ರ ಜಯಂತಿಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿತ ರವೀಂದ್ರನಾಥ್ ಠಾಗೂರ್‍ರ ಚಿತ್ರ ರಚನಾ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಚಿತ್ರ ರಚನೆಯ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ ಸಂಸ್ಕೃತಿಯನ್ನು ಒಳಗೊಂಡ, ತತ್ತ್ವಾದರ್ಶಗಳು ಮೇಳೈಸಿದ ಶಿಕ್ಷಣದ ಬಗ್ಗೆ ರವೀಂದ್ರನಾಥ್ ಠಾಗೂರ್ ಚಿಂತಿಸಿದ್ದರಾದರೆ, ಪ್ರಸ್ತುತ ಇರುವ ಶಿಕ್ಷಣ ಯುರೋಪಿಯನ್ ಮಾದರಿಯ ಅನುಕರಣೆಯಾಗಿದೆಯೆಂದು ವಿಷಾದಿಸಿದರು.

ಸ್ವತಂತ್ರ ಭಾರತಕ್ಕೆ ತನ್ನದೇ ಆದ ರಾಷ್ಟ್ರಗೀತೆಯನ್ನು ಒದಗಿಸಿಕೊಡುವ ಮೂಲಕ ಗುರುದೇವ ರವೀಂದ್ರನಾಥ ಠಾಗೂರ್‍ರು ಪ್ರತಿಯೊಬ್ಬರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಇಂತಹ ಮಹಾನ್ ವ್ಯಕ್ತಿತ್ವದ ರವೀಂದ್ರನಾಥ ಠಾಗೂರ್ ಅವರು ಮೊಟ್ಟಮೊದಲ ಬಾರಿಗೆ ರಾಷ್ಟ್ರಪಿತ ಗಾಂಧೀಜಿಯವರಿಗೆ ‘ಮಹಾತ್ಮ’ ಎನ್ನುವ ಬಿರುದನ್ನು ನೀಡಿದವರಾಗಿದ್ದಾರೆಂದು ತಿಳಿಸಿದರು.

ವಿಜ್ಞಾನ, ಚಿತ್ರಕಲೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿದ್ದ ರವೀಂದ್ರನಾಥ ಠಾಗೂರ್‍ರು ನಿರಂತರವಾಗಿ ಸಮಾಜಕ್ಕೆ ಹಾಗೂ ಮನಸ್ಸಿನ ವಿಕಸನಕ್ಕೆ ಅತ್ಯುತ್ತಮವಾದುದು ಯಾವುದು ಎನ್ನುವುದರ ಶೋಧನೆಯಲ್ಲಿ ತೊಡಗಿಸಿಕೊಂಡವರಾಗಿದ್ದರೆಂದು ಹೇಳಿದರು.

ಚಿತ್ರಕಲಾ ಸ್ಪರ್ಧೆ-ವಿಶ್ವಕವಿ ಗುರುದೇವ ರವೀಂದ್ರನಾಥ್ ಠಾಗೂರ್ ಜಯಂತಿ ಪ್ರಯುಕ್ತ ಆಯೋಜಿತ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಹಲ ವಿದ್ಯಾರ್ಥಿಗಳು ಪಾಲ್ಗೊಂಡು ಅತ್ಯುತ್ಸಾಹದಿಂದ ರವೀಂದ್ರನಾಥ ಠಾಗೂರ್‍ರ ಚಿತ್ರವನ್ನು ರಚಿಸಿದರು. ಸ್ಪರ್ಧೆ 5ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳ  ಗುಂಪು, 8ನೇ ತರಗತಿಯಿಂದ 10 ನೇ ತರಗತಿವರೆಗಿನ  ಗುಂಪು ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಗುಂಪುಗಳಲ್ಲಿ ನಡೆಯಿತು. ಸ್ಪರ್ಧಾ ಕಾರ್ಯಕ್ರಮ ಖ್ಯಾತ ಚಿತ್ರಕಲಾವಿದ ಬಿ.ಆರ್. ಸತೀಶ್ ಮಾರ್ಗದರ್ಶನದಲ್ಲಿ  ನಡೆಯಿತು.

 

 

Please follow and like us:
0
http://bp9news.com/wp-content/uploads/2018/06/tagore_mainbanner-1.jpghttp://bp9news.com/wp-content/uploads/2018/06/tagore_mainbanner-1-150x150.jpgBP9 Bureauಕೊಡಗುಪ್ರಮುಖಮಡಿಕೇರಿ: ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ಅರಳಿಸುವ ಮೂಲಕ ಸರ್ವಸುಂದರವಾದ ಪರಿಪೂರ್ಣವಾದ ಬದುಕನ್ನು ಕಲ್ಪಿಸಿಕೊಡುವ ‘ಶಿಕ್ಷಣ’ಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕೆನ್ನುವುದು ಗುರುದೇವ ರವೀಂದ್ರನಾಥ ಠಾಗೂರ್ ಅವರ ಚಿಂತನೆಯಾಗಿತ್ತೆಂದು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ಪ್ರಾಧ್ಯಾಪಕರಾದ ಹೆಚ್. ಪಟ್ಟಾಭಿರಾಮ ಸೋಮಯಾಜಿ ತಿಳಿಸಿದರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಸೌಹಾರ್ದ ಕೊಡಗು ವೇದಿಕೆ ವತಿಯಿಂದ ನಗರದ ಬಾಲಭವನದಲ್ಲಿ...Kannada News Portal