ಮಡಿಕೇರಿ : ಸುಮಾರು 16 ಕೋಟಿ ರೂ.ಗಳಷ್ಟು ನಷ್ಟದಲ್ಲಿರುವ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 58.92 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಷ್ಟದಲ್ಲಿರುವ ಸಂಘವು ಕಾಫಿ ಮಂಡಳಿಗೆ ಸುಮಾರು 1.55 ಕೋಟಿ ರೂ.ಗಳ ಅಸಲನ್ನು ಒಂದೇ ಕಂತಿನಲ್ಲಿ ಪಾವತಿಸಿದ್ದು, ಉಳಿಕೆ ಇರುವ ಸುಮಾರು 5 ಕೋಟಿ ರೂ. ಬಡ್ಡಿ ಮನ್ನಾ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.  ಈ ಕುರಿತು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಮೂಲಕ ಕೇಂದ್ರ ಕೈಗಾರಿಕಾ ಹಾಗೂ ವಾಣಿಜ್ಯ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಕೇಂದ್ರ ಸರಕಾರ ಸಂಘದ ನೆರವಿಗೆ ಬಂದು ಬಡ್ಡಿ ಮನ್ನಾ ಮಾಡುವ ವಿಶ್ವಾಸವಿದೆ ಎಂದು ದೇವಯ್ಯ ಹೇಳಿದರು.

ಬೆಳೆಗಾರರಿಂದ ಕಾಫಿ ಶೇಖರಣೆ, ಸಂಸ್ಕರಣೆ ಹಾಗೂ ಮಾರಾಟ ವ್ಯವಸ್ಥೆಯಡಿ 360 ಟನ್ ಕಾಫಿ ಶೇಖರಿಸಿದ್ದು, ಕಾಫಿ ಸಂಸ್ಕರಣೆ ಮತ್ತು ಕಾಫಿ ಹೊಟ್ಟು ಮಾರಾಟದಿಂದ 2.18 ಲಕ್ಷ, 6 ಟನ್ ಕಾಫಿ ಪುಡಿ ಮಾರಾಟದಿಂದ ಈ ಬಾರಿ 1.38 ಲಕ್ಷ ರೂ.ಗಳ ನಿವ್ವಳ ಆದಾಯ ಗಳಿಸಿದ್ದು, ಕಾಫಿ ಪುಡಿ, ಜೇನು ಮಾರಾಟ ಹಾಗೂ ಪೆಟ್ರೋಲ್ ಬಂಕ್ ವ್ಯವಹಾರದಿಂದ ಹುಣಸೂರು ಉದ್ದಿಮೆಯಿಂದ 67.16 ಲಕ್ಷ ವ್ಯಾಪಾರ ಲಾಭ ಗಳಿಸಿದೆ. ಅಲ್ಲದೆ ಹೆಬ್ಬಾಲೆ ಉದ್ದಿಮೆಯ ಪೆಟ್ರೋಲ್ ಬಂಕ್‍ನಿಂದ 7.81 ಲಕ್ಷ ವ್ಯಾಪಾರ ಲಾಭ ಗಳಿಸಿದ್ದು, ಹುಣಸೂರು ಉದ್ದಿಮೆ ವ್ಯವಹಾರದಿಂದ ಒಟ್ಟಾಗಿ 97.40 ಲಕ್ಷ ಹಾಗೂ ಹೆಬ್ಬಾಲೆ ಉದ್ದಿಮೆಯಿಂದ 20 ಲಕ್ಷ ನಿವ್ವಳ ಲಾಭ ಬಂದಿದೆ. ಮುಖ್ಯ ಕಚೇರಿಯ ನಿವ್ವಳ ನಷ್ಟ ಕಳೆದು ಸಂಘವು ಒಟ್ಟಾಗಿ 58.92 ಲಕ್ಷ ರೂ.ಗಳ ನಿವ್ವಳ ಲಾಭಗಳಿಸಿದಂತಾಗಿದೆ ಎಂದರು.

ಸಂಘದ ಹುಣಸೂರು ಉದ್ದಿಮೆಯಲ್ಲಿ ಹಾಲಿ ಇರುವ ಕಾಫಿ ಸಂಸ್ಕರಣ ಯಂತ್ರ ಹಳೆಯದ್ದಾಗಿದ್ದು, ಇದರ ಸಂಸ್ಕರಣ ಸಾಮರ್ಥ್ಯವೂ ಕಡಿಮೆ ಇರುವುದರಿಂದ ವೆಚ್ಚಗಳು ಹೆಚ್ಚಾಗುತ್ತಿದೆ. ಈಗಿನ ಕಾಫಿ ಮಾರುಕಟ್ಟೆ ಧಾರಣೆಗೆ ಅನುಗುಣವಾಗಿ ನಿಗಧಿತ ಅವಧಿಯೊಳಗೆ ಬೆಳೆಗಾರರ ಕಾಫಿ ಸಂಸ್ಕರಣೆ ಮಾಡಲು ಸಾಧ್ಯವಾಗದಿರುವುದರಿಂದ ಬೆಳೆಗಾರರ ಬೇಡಿಕೆಗೆ ಅನುಗುಣವಾಗಿ ಹಾಗೂ ಖರ್ಚುವೆಚ್ಚಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಗಂಟೆಗೆ 3 ಟನ್ ಕಾಫಿ ಸಂಸ್ಕರಣೆ ಮಾಡುವ ಸಾಮರ್ಥ್ಯದ ಯಂತ್ರೋಪಕರಣ ಅಳವಡಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದ್ದು, ನ.18ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ದೇವಯ್ಯ ಹೇಳಿದರು. ಕಾಫಿ ವಹಿವಾಟನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬೆಳೆಗಾರರನ್ನೊಳಗೊಂಡ ಪೊನ್ನಂಪೇಟೆಯ ಪುತ್ತರಿ ಫಾರ್ಮರ್ಸ್ ಜೊತೆ ಮಾತುಕತೆ ನಡೆಸಲಾಗುತ್ತಿದ್ದು, ಕಾಫಿ ದಾಸ್ತಾನು ಹಾಗೂ ಸಂಸ್ಕರಣೆ ಮಾಡುವ ನಿಟ್ಟಿನಲ್ಲಿ ಹುಣಸೂರು ಉದ್ದಿಮೆಯ ಗೋದಾಮು ಹಾಗೂ ಸಂಸ್ಕರಣೆ ಸೌಲಭ್ಯವನ್ನು ಬೆಳೆಗಾರರು ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಸಂಘದ ವತಿಯಿಂದ ಕಕ್ಕಬ್ಬೆ ಹಾಗೂ ಹುಣಸೂರಿನಲ್ಲಿ ಹೆಚ್ಚುವರಿಯಾಗಿ ಎರಡು ಪೆಟ್ರೋಲ್ ಬಂಕ್‍ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈ ಸಂಬಂಧ ಬಿಪಿಸಿ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸಹಕಾರ ಇಲಾಖೆಯಿಂದ ಅನುಮತಿ ಪಡೆಯುವಲ್ಲಿ ವಿಳಂಬವಾಗುತ್ತಿದೆ ಎಂದು ಇಲಾಖೆಯ ಕಾರ್ಯವೈಖರಿ ಬಗ್ಗೆ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಪಿ.ಪೊನ್ನಪ್ಪ,  ನಿರ್ದೇಶಕರುಗಳಾದ ಹೊಸೂರು ರಮೇಶ್ ಜೋಯಪ್ಪ, ಎಂ.ಎಂ.ಧರ್ಮಾವತಿ, ನಾಯಕಂಡ ಅಯ್ಯಣ್ಣ ಹಾಗೂ ವ್ಯವಸ್ಥಾಪಕ ಎಂ.ಎ.ನಾಣಯ್ಯ ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/09/Z-COFFEE-SAHAKARA-1.jpghttp://bp9news.com/wp-content/uploads/2018/09/Z-COFFEE-SAHAKARA-1-150x150.jpgBP9 Bureauಕೊಡಗುಪ್ರಮುಖಮಡಿಕೇರಿ : ಸುಮಾರು 16 ಕೋಟಿ ರೂ.ಗಳಷ್ಟು ನಷ್ಟದಲ್ಲಿರುವ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 58.92 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಷ್ಟದಲ್ಲಿರುವ ಸಂಘವು ಕಾಫಿ ಮಂಡಳಿಗೆ ಸುಮಾರು 1.55 ಕೋಟಿ ರೂ.ಗಳ ಅಸಲನ್ನು ಒಂದೇ ಕಂತಿನಲ್ಲಿ ಪಾವತಿಸಿದ್ದು, ಉಳಿಕೆ ಇರುವ ಸುಮಾರು 5 ಕೋಟಿ ರೂ....Kannada News Portal