ಮಡಿಕೇರಿ : ಮಾಲ್ದಾರೆಯ ಮೀಸಲು ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟು ಅನಾಥವಾಗಿದ್ದ ಸುಮಾರು 6 ರಿಂದ 7 ತಿಂಗಳ ಪುಟ್ಟ ಗಂಡಾನೆ ಮರಿಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಆಶ್ರಯ ನೀಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಅನಾಥ ಆನೆಮರಿಯನ್ನು ತಾಯಿಯೊಂದಿಗೆ ಸೇರಿಸಲು ಎರಡು ದಿನಗಳಿಂದ ಪ್ರಯತ್ನಿಸಿದರಾದರೂ ತಾಯಿ ಆನೆ ಸುಳಿಯದ ಕಾರಣ ದುಬಾರೆ ಶಿಬಿರಕ್ಕೆ ಕರೆ ತರಲಾಗಿದೆ.

ಅನ್ನವನ್ನು ತಿನ್ನಿಸಲಾಗುತ್ತಿದ್ದು, ಹಸಿಸೊಪ್ಪು, ಹುಲ್ಲು, ನೀರನ್ನು ಮರಿಯಾನೆ ಸೇವಿಸುತ್ತಿದೆ ಎಂದು ಉಪ ಅರಣ್ಯ ಸಂರಕ್ಷಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.ಮಾವುತ ಜಯಣ್ಣ ಗಂಡಾನೆ ಮರಿಯ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/05/Z-ELEPHENT-2-1.jpghttp://bp9news.com/wp-content/uploads/2018/05/Z-ELEPHENT-2-1-150x150.jpgBP9 Bureauಕೊಡಗುಮಡಿಕೇರಿ : ಮಾಲ್ದಾರೆಯ ಮೀಸಲು ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟು ಅನಾಥವಾಗಿದ್ದ ಸುಮಾರು 6 ರಿಂದ 7 ತಿಂಗಳ ಪುಟ್ಟ ಗಂಡಾನೆ ಮರಿಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಆಶ್ರಯ ನೀಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಅನಾಥ ಆನೆಮರಿಯನ್ನು ತಾಯಿಯೊಂದಿಗೆ ಸೇರಿಸಲು ಎರಡು ದಿನಗಳಿಂದ ಪ್ರಯತ್ನಿಸಿದರಾದರೂ ತಾಯಿ ಆನೆ ಸುಳಿಯದ ಕಾರಣ ದುಬಾರೆ ಶಿಬಿರಕ್ಕೆ ಕರೆ ತರಲಾಗಿದೆ. ಅನ್ನವನ್ನು ತಿನ್ನಿಸಲಾಗುತ್ತಿದ್ದು, ಹಸಿಸೊಪ್ಪು, ಹುಲ್ಲು, ನೀರನ್ನು ಮರಿಯಾನೆ ಸೇವಿಸುತ್ತಿದೆ ಎಂದು ಉಪ ಅರಣ್ಯ...Kannada News Portal