ಕೊಡಗು: ಬಿಲ್ ಇಲ್ಲದ ಲಾರಿಯನ್ನು ಬಿಟ್ಟು ಬರುವಂತೆ ಸಿಬ್ಬಂದಿಗೆ ಒತ್ತಡ ಹಾಕಿದ ಮೇಲಾಧಿಕಾರಿಗೆ ಪೋನಿನಲ್ಲೆ ಪಿಎಸ್ಐ ಒಬ್ಬರು ಚಳಿ ಬಿಡಿಸಿದ್ದಾರೆ. ಅಕ್ರಮ ದಂಧೆಕೋರರ ಪರ ಮಾತನಾಡಿದ ವಿಜಯಪುರ ಸಿಪಿಐ ಮಂಜುನಾಥ್​​​​ಗೆ ವಿಶ್ವನಾಥಪುರ ಪಿಎಸ್ಐ ಶ್ರೀನಿವಾಸ್ ಖಡಕ್ ಆಗಿ ಬಿಸಿ ಮುಟ್ಟಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ. ಅಕ್ರಮವಾಗಿ ಗ್ರಾನೈಟ್ ಸಾಗಾಟದ ಬಗ್ಗೆ ಖಚಿತ‌ ಮಾಹಿತಿ ಮೇರೆಗೆ ವಿಶ್ವನಾಥಪುರ ಪೊಲೀಸರು ದಾಳಿ ನಡೆಸಿದ್ದರು.


ಈ ವೇಳೆ ಗ್ರಾನೈಟ್ ಸಾಗಿಸಲು ಅನುಮತಿ ಇಲ್ಲದಿದ್ದರು ಹಿರಿಯ ಅಧಿಕಾರಿಗಳ ಹೆಸರು ಹೇಳಿ ಸಿಬ್ಬಂದಿಗೆ ದಂಧೆಕೋರರು ಧಮ್ಕಿ ಹಾಕಿದ ಆರೋಪ ಹಿನ್ನೆಲೆಯಲ್ಲಿ  ಸ್ಥಳಕ್ಕೆ ಬಂದ ಪಿಎಸ್ಐ ಶ್ರೀನಿವಾಸ್ ಗರಂ ಆಗಿದ್ದಾರೆ. ಆಗ ಹಿರಿಯ ಪೊಲೀಸ್ ಅಧಿಕಾರಿ ಮುಖಾಂತರ ಅವರಿಗೂ ಒತ್ತಡ ಹೇರಲು ದೇವನಹಳ್ಳಿ ಮಾಜಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಎನ್.ಕೃಷ್ಣಮೂರ್ತಿ ಮತ್ತು ಬೆಂಬಲಿಗರು ಪ್ರಯತ್ನಿಸಿದ್ದಾರೆ.

ಸಿಪಿಐ ಮಂಜುನಾಥ್​​​​ ಪೋನ್​​​ನಲ್ಲಿ ಶ್ರೀನಿವಾಸ್​​ಗೆ   ದಾಖಲಾತಿ ಇಲ್ಲದೆ  ಗ್ರಾನೈಟ್ ಸಾಗಿಸುತ್ತಿದ್ದ 2 ಲಾರಿಗಳನ್ನ ಬಿಟ್ಟು ಕಳಿಸುವಂತೆ ಒತ್ತಡ ಹಾಕಿದ್ದಾರೆ. ಆದರೆ ಒತ್ತಡಕ್ಕೆ ಮಣಿಯದ ಪಿಎಸ್ ಐ  ಸಿಂಗಂ ಸ್ಟೈಲ್ ನಲ್ಲಿ ಪೋನ್ ನಲ್ಲಿಯೇ ಸಿಪಿಐ ಗೆ ಬಿಸಿ ಮುಟ್ಟಿಸಿದ್ದಾರೆ.

ಸಿಪಿಐ ವರ್ತನೆಗೆ ಗರಂ ಆಗಿ ಪೋನಿನಲ್ಲೆ  ವಿಶ್ವನಾಥಪುರ ಠಾಣೆ ಪಿಎಸ್ಐ ಶ್ರೀನಿವಾಸ್​​​​ ಲೆಪ್ಟ್ ಅಂಡ್ ರೈಟ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ಅವಾಜ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಎಸ್ಐ ಶ್ರೀನಿವಾಸ್ ದಕ್ಷತೆಗೆ ಸಾರ್ವಜನಿಕರು ಮೆಚ್ವುಗೆ ವ್ಯಕ್ತಪಡಿಸುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/06/vairal-video-Karnatakada-Miditha.jpeghttp://bp9news.com/wp-content/uploads/2018/06/vairal-video-Karnatakada-Miditha-150x150.jpegBP9 Bureauಕೊಡಗುಟೈಮ್ ಪಾಸ್ಕೊಡಗು: ಬಿಲ್ ಇಲ್ಲದ ಲಾರಿಯನ್ನು ಬಿಟ್ಟು ಬರುವಂತೆ ಸಿಬ್ಬಂದಿಗೆ ಒತ್ತಡ ಹಾಕಿದ ಮೇಲಾಧಿಕಾರಿಗೆ ಪೋನಿನಲ್ಲೆ ಪಿಎಸ್ಐ ಒಬ್ಬರು ಚಳಿ ಬಿಡಿಸಿದ್ದಾರೆ. ಅಕ್ರಮ ದಂಧೆಕೋರರ ಪರ ಮಾತನಾಡಿದ ವಿಜಯಪುರ ಸಿಪಿಐ ಮಂಜುನಾಥ್​​​​ಗೆ ವಿಶ್ವನಾಥಪುರ ಪಿಎಸ್ಐ ಶ್ರೀನಿವಾಸ್ ಖಡಕ್ ಆಗಿ ಬಿಸಿ ಮುಟ್ಟಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ. ಅಕ್ರಮವಾಗಿ ಗ್ರಾನೈಟ್ ಸಾಗಾಟದ ಬಗ್ಗೆ ಖಚಿತ‌ ಮಾಹಿತಿ ಮೇರೆಗೆ ವಿಶ್ವನಾಥಪುರ ಪೊಲೀಸರು ದಾಳಿ ನಡೆಸಿದ್ದರು. var domain...Kannada News Portal