ಮಡಿಕೇರಿ: ಮಡಿಕೇರಿಯಲ್ಲಿರುವ ಕೋಟೆಗೆ ತಾನೇ ವಾರಸುದಾರ ಎಂದು ಹೇಳಿಕೊಂಡು ಈ ಹಿಂದೆ ಕೋಟೆ ಆವರಣದೊಳಗಿರುವ ಮುಖ್ಯ ದ್ವಾರಕ್ಕೆ ಬೀಗಹಾಕಿ ವಿವಾದ ಸೃಷ್ಟಿಸಿದ್ದ ಮೈಸೂರಿನ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ಇದೀಗ ಮತ್ತೆ ಕಿರಿಕ್ ಶುರು ಮಾಡಿದ್ದಾರೆ.

ತಮ್ಮ ದ್ವಿಚಕ್ರ ವಾಹನದಲ್ಲಿ ದಾಖಲಾತಿಗಳ ಸಹಿತ ಗಂಟುಮೂಟೆಯೊಂದಿಗೆ ಮೈಸೂರಿನಿಂದ ಮಡಿಕೇರಿಗೆ ಆಗಮಿಸಿರುವ ಹಾಲೇರಿ ನಾಗರಾಜು ಒಡೆಯರ್ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಸತೀಶ್ ಅವರಿಗೆ ಮಡಿಕೇರಿ ಕೋಟೆ ಪ್ರದೇಶ ತನಗೆ ಸೇರಬೇಕೆಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ಪುರಾತತ್ವ ಇಲಾಖೆ ಮತ್ತು ವಂಶವೃಕ್ಷದಲ್ಲೂ ತನ್ನ ಹೆಸರಿನ ದಾಖಲೆಗಳಿವೆ ಎಂದು ಅಪರ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಬಳಿಕ ಮಡಿಕೇರಿ ಕೋಟೆಗೆ ತೆರಳಿದ ನಾಗರಾಜು ಒಡೆಯರ್, ಜಿಲ್ಲಾ ಪಂಚಾಯ್ತಿ ಇಂಜಿನಿಯರಿಂಗ್ ವಿಭಾಗದ ಕಚೇರಿ ಆವರಣದಲ್ಲಿ ಹಾಸಿಗೆ ಹಾಸಿ ಮಲಗುವ ಮೂಲಕ ಗಮನ ಸೆಳೆದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್, ತಾನು ದೊಡ್ಡವೀರರಾಜ ಅವರ ಮಗಳು ಮಹಾರಾಣಿ ದೇವಮ್ಮಾಜಿ ಮತ್ತು ಮಲ್ಲಪ್ಪ ದಂಪತಿಗಳ ಮರಿಮಗನಾಗಿದ್ದೇನೆ. ಹಾಲೇರಿ ವಂಶಸ್ಥರ ವಂಶವೃಕ್ಷದಲ್ಲೂ ನನ್ನ ಹೆಸರಿದ್ದು, ವಿವಿಧ ನ್ಯಾಯಾಲಯಗಳು ಕೂಡಾ ಅದನ್ನು ಮಾನ್ಯ ಮಾಡಿವೆ. ನನ್ನ ಬಳಿ ಮಡಿಕೇರಿ ಕೋಟೆ ತನಗೆ ಸೇರಬೇಕೆಂಬುದಕ್ಕೆ 400 ಬಗೆಯ ದಾಖಲೆಗಳಿವೆ. ಇಂಗ್ಲೆಂಡ್‍ನ ರಾಜಮನೆತನದಿಂದ ಈ ದಾಖಲೆಗಳನ್ನು ಪಡೆಯಲಾಗಿದೆ. ಕೇಂದ್ರ ಹಾಗೂ ಮದ್ರಾಸ್, ಮೈಸೂರು ಪುರಾತತ್ವ ಇಲಾಖೆ ಮತ್ತು ಬೆಂಗಳೂರು ವಿಧಾನಸೌಧದಿಂದಲೂ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದು, ಹಾಲೇರಿ ವಂಶಸ್ಥರ ಕುಡಿಗಳು ಇಂದಿಗೂ ಪಿರಿಯಾಪಟ್ಟಣ ಭಾಗದಲ್ಲಿ ನೆಲೆಸಿದ್ದಾರೆಂದು ವಿವರಿಸಿದರು.

ಮಡಿಕೇರಿಯ ಕೋಟೆ ಒಳಗೆ ವಿವಿಧ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಬಾಡಿಗೆ ಪಾವತಿಸುತ್ತಿಲ್ಲ, ಇದರಿಂದ ತಮಗೆ ನಷ್ಟವಾಗಿದ್ದು, ಇಲಾಖೆಗಳು ತಕ್ಷಣ ತಮಗೆ ಬಾಡಿಗೆ ಪಾವತಿಸಬೇಕೆಂದು ಆಗ್ರಹಿಸಿದರು.

76 ವರ್ಷ ಪ್ರಾಯದ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ವರ್ಷಕ್ಕೆ ಎರಡು ಮೂರು ಬಾರಿ ಇದೇ ರೀತಿ ಮಡಿಕೇರಿ ಕೋಟೆ ಆವರಣಕ್ಕೆ ಬಂದು ಈ ಕೋಟೆ, ಅರಮನೆ ನನ್ನದೆ ಎಂದು ಹೇಳಿಕೆ ನೀಡುವುದರೊಂದಿಗೆ ಸಾರ್ವಜನಿಕರಿಗೆ ಪುಕ್ಕಟೆ ಮನೋರಂಜನೆ ನೀಡುತ್ತಿದ್ದಾರೆ. ಇವರ ಈ ವರ್ತನೆಗೆ ನಿರ್ಲಕ್ಷ್ಯವೇ ಮದ್ದು ಎಂದು ಜಿಲ್ಲಾಡಳಿತ ಸುಮ್ಮನಿದೆ. ಎರಡು ವರ್ಷಗಳ ಹಿಂದೆ ಕೋಟೆ ಹಳೇ ವಿಧಾನ ಸಭಾಂಗಣದ ಮುಖ್ಯದ್ವಾರಕ್ಕೆ ಬೀಗ ಜಡಿಯುವ ಮೂಲಕ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ಪೊಲೀಸರ ಅತಿಥಿಯೂ ಆಗಿದ್ದರು.

Please follow and like us:
0
http://bp9news.com/wp-content/uploads/2018/06/ODEYAR-1.pnghttp://bp9news.com/wp-content/uploads/2018/06/ODEYAR-1-150x150.pngBP9 Bureauಕೊಡಗುಪ್ರಮುಖಮಡಿಕೇರಿ: ಮಡಿಕೇರಿಯಲ್ಲಿರುವ ಕೋಟೆಗೆ ತಾನೇ ವಾರಸುದಾರ ಎಂದು ಹೇಳಿಕೊಂಡು ಈ ಹಿಂದೆ ಕೋಟೆ ಆವರಣದೊಳಗಿರುವ ಮುಖ್ಯ ದ್ವಾರಕ್ಕೆ ಬೀಗಹಾಕಿ ವಿವಾದ ಸೃಷ್ಟಿಸಿದ್ದ ಮೈಸೂರಿನ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ಇದೀಗ ಮತ್ತೆ ಕಿರಿಕ್ ಶುರು ಮಾಡಿದ್ದಾರೆ. ತಮ್ಮ ದ್ವಿಚಕ್ರ ವಾಹನದಲ್ಲಿ ದಾಖಲಾತಿಗಳ ಸಹಿತ ಗಂಟುಮೂಟೆಯೊಂದಿಗೆ ಮೈಸೂರಿನಿಂದ ಮಡಿಕೇರಿಗೆ ಆಗಮಿಸಿರುವ ಹಾಲೇರಿ ನಾಗರಾಜು ಒಡೆಯರ್ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಸತೀಶ್ ಅವರಿಗೆ ಮಡಿಕೇರಿ ಕೋಟೆ ಪ್ರದೇಶ ತನಗೆ ಸೇರಬೇಕೆಂದು...Kannada News Portal