ಮಡಿಕೇರಿ : ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಆ.19ರಂದು ವಿಶ್ವ ಛಾಯಾಗ್ರಾಹಕರ ದಿನವನ್ನು ಆಚರಿಸಲು ನಿರ್ಧರಿಸಿದೆ. ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಕ್ಲಬ್‍ನ ಆಡಳಿತ ಮಂಡಳಿ ಸಭೆಯಲ್ಲಿ ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು ಅವರನ್ನು ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಕಾರ್ಯಕ್ರಮದ ಸಂಚಾಲಕರಾಗಿ, ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್ ಅವರನ್ನು ಸಹ ಸಂಚಾಲಕರಾಗಿ ನೇಮಕ ಮಾಡಲಾಯಿತು.

ಆ.19ರಂದು ಮಡಿಕೇರಿಯಲ್ಲಿ ವಿಶ್ವಛಾಯಾಗ್ರಾಹಕರ ದಿನಾಚರಣೆ ನಡೆಯಲಿದೆ. ಪ್ರೆಸ್‍ಕ್ಲಬ್‍ನ ಸದಸ್ಯರಿಗೆ ಹಾರಂಗಿ ಜಲಾಶಯದಲ್ಲಿ ಒಂದು ದಿನ ಸ್ಥಳದಲ್ಲೇ ವಿಷಯ ನೀಡಿ ಛಾಯಾಚಿತ್ರ ಹಾಗೂ ವೀಡಿಯೋಗ್ರಫಿ ಸ್ಪರ್ಧೆ ಏರ್ಪಡಿಸುವಂತೆ ತೀರ್ಮಾನಿಸಲಾಯಿತು. ಛಾಯಾಗ್ರಾಹಕರ ದಿನದ ಅಂಗವಾಗಿ ಛಾಯಾಗ್ರಾಹಕರಿಗೆ ವಿಶೇಷ ಮನರಂಜನಾ ಕ್ರೀಡೆಗಳನ್ನು ಆಯೋಜಿಸುವಂತೆ ಚರ್ಚಿಸಲಾಯಿತು. ಕ್ಲಬ್ ವತಿಯಿಂದ ಜು.29ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ, ಹಿರಿಯ ಉಪಾಧ್ಯಕ್ಷ ಲೋಕೇಶ್ ಸಾಗರ್, ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು, ಖಜಾಂಚಿ ರೆಜಿತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್, ನಿರ್ದೇಶಕರಾದ ಬಿ.ಎನ್. ಮನುಶೆಣೈ, ಕೇಶವಕಾಮತ್, ಎಸ್.ಎಂ. ಮುಬಾರಕ್, ತೇಜಸ್ ಪಾಪಯ್ಯ ಹಾಜರಿದ್ದರು.

ನಿರ್ದೇಶಕರಾಗಿ ಕಿಶೋರ್ ಆಯ್ಕೆ

ಕೊಡಗು ಪ್ರೆಸ್‍ಕ್ಲಬ್‍ನ ನಿರ್ದೇಶಕರಾಗಿ ಬಿ.ಜಿ.ಅನಂತಶಯನ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಫಸ್ಟ್​​​ನ್ಯೂಸ್​​​ನ  ಜಿಲ್ಲಾ ವರದಿಗಾರ ಕಿಶೋರ್ ರೈ ಕತ್ತಲೆಕಾಡು ಅವರನ್ನು ನೂತನ ನಿರ್ದೇಶಕರಾಗಿ ಕ್ಲಬ್‍ನ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

 

 

 

Please follow and like us:
0
http://bp9news.com/wp-content/uploads/2018/06/Z-KISHORE-1.jpghttp://bp9news.com/wp-content/uploads/2018/06/Z-KISHORE-1-150x150.jpgBP9 Bureauಕೊಡಗುಮಡಿಕೇರಿ : ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಆ.19ರಂದು ವಿಶ್ವ ಛಾಯಾಗ್ರಾಹಕರ ದಿನವನ್ನು ಆಚರಿಸಲು ನಿರ್ಧರಿಸಿದೆ. ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಕ್ಲಬ್‍ನ ಆಡಳಿತ ಮಂಡಳಿ ಸಭೆಯಲ್ಲಿ ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು ಅವರನ್ನು ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಕಾರ್ಯಕ್ರಮದ ಸಂಚಾಲಕರಾಗಿ, ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್ ಅವರನ್ನು ಸಹ ಸಂಚಾಲಕರಾಗಿ ನೇಮಕ ಮಾಡಲಾಯಿತು. ಆ.19ರಂದು ಮಡಿಕೇರಿಯಲ್ಲಿ ವಿಶ್ವಛಾಯಾಗ್ರಾಹಕರ ದಿನಾಚರಣೆ ನಡೆಯಲಿದೆ. ಪ್ರೆಸ್‍ಕ್ಲಬ್‍ನ ಸದಸ್ಯರಿಗೆ...Kannada News Portal