ಕೇರಳ : ಕೇರಳದಲ್ಲಿ ಮತ್ತೆ ಆರ್ಭಟಿಸುತ್ತಿದ್ದಾನೆ ಮಳೆರಾಯ, ಭಾರಿ ಮಳೆಯಿಂದಾಗಿ ಕೇರಳದ ಅನೇಕಭಾಗಗಳು ಮುಳುಗಡೆಯಾಗಿವೆ, ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ ಮತ್ತು 20 ಜನರು ಸಾವನ್ನಪ್ಪಿದ್ದಾರೆ. ಸಾಕಷ್ಟು ಮನೆಗಳು ಕೋಚ್ಚಿಹೋಗಿವೆ, ಸತತವಾಗಿ ನಿಲ್ಲದ ಮಳೆಯಿಂದಾಗಿ ಜನರಿಗೆ ತಮ್ಮ ದೈನಂದಿನ ಚಟುವಟಿಕೆ ಮೇಲೆ ಸಾಕಷ್ಟು ಪರಿಣಾಮ ಬಿರಿದೆ.

 ತಿರುವನಂತಪುರಂ ಜಿಲ್ಲೆಯಲ್ಲಿ ಮಳೆ ಸೃಷ್ಠಿಸಿದ ಅವಾಂತರದಿಂದಾಗಿ ಭೂಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ 18 ಜನರು ಸಾವಿಗೀಡಾಗಿದ್ದಾರೆ ಎಂದು ವಿಪತ್ತು ನಿರ್ವಾಹಣ ಅಧಿಕಾರಿಗಳು ತಿಳಿಸಿದ್ದು, ಇಡುಕ್ಕಿಯಲ್ಲಿ 10 ಜನ ಮೃತಪಟ್ಟರೆ,ಮಲ್ಲಾಪುರಂನಲ್ಲಿ 5, ಕಣ್ಣೂರು ಜಿಲ್ಲೆಯಲ್ಲಿ 2, ವೈನಾಡುವಿನಲ್ಲಿ ಓರ್ವ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ವೈನಾಡು, ಪಾಲಾಕಾಡ್, ಕೋಳಿಕೋಡ್ ಸೇರಿ ಓಟ್ಟು 3 ಜನರು ಕಾಣೆಯಾಗಿದ್ದಾರೆ. ಇನ್ನು ಇಡುಕ್ಕಿಯಲ್ಲಿ ಮೃತಪಟ್ಟ 10 ಜನರಲ್ಲಿ  ಒಂದೆ ಕುಟುಂಬದ 5 ಜನರು ಸೇರಿದ್ದಾರೆ. ಅಲ್ಲದೆ ಇದೆ ಊರಿನಲ್ಲಿ ನೀರನಲ್ಲಿ ಸಿಲುಕಿದ ಇಬ್ಬರನ್ನು ಊರಿನ ಜನರು ಮತ್ತು ಪೊಲೀಸರ ಸಹಾಯದಿಂದ  ರಕ್ಷಿಸಲಾಗಿದೆ .
ಈಭಾಗದ ಸುತ್ತ ಮುತ್ತಲಿನ ಜನರನ್ನು ಸುರಕ್ಷಿತೆಗಾಗಿ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಹಾಗೂ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

 

Please follow and like us:
0
http://bp9news.com/wp-content/uploads/2018/08/kerala-rain-3.jpeghttp://bp9news.com/wp-content/uploads/2018/08/kerala-rain-3-150x150.jpegBP9 Bureauಪ್ರಮುಖರಾಷ್ಟ್ರೀಯkerala: heavy rainsಕೇರಳ : ಕೇರಳದಲ್ಲಿ ಮತ್ತೆ ಆರ್ಭಟಿಸುತ್ತಿದ್ದಾನೆ ಮಳೆರಾಯ, ಭಾರಿ ಮಳೆಯಿಂದಾಗಿ ಕೇರಳದ ಅನೇಕಭಾಗಗಳು ಮುಳುಗಡೆಯಾಗಿವೆ, ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ ಮತ್ತು 20 ಜನರು ಸಾವನ್ನಪ್ಪಿದ್ದಾರೆ. ಸಾಕಷ್ಟು ಮನೆಗಳು ಕೋಚ್ಚಿಹೋಗಿವೆ, ಸತತವಾಗಿ ನಿಲ್ಲದ ಮಳೆಯಿಂದಾಗಿ ಜನರಿಗೆ ತಮ್ಮ ದೈನಂದಿನ ಚಟುವಟಿಕೆ ಮೇಲೆ ಸಾಕಷ್ಟು ಪರಿಣಾಮ ಬಿರಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute...Kannada News Portal