ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷತ,ಭರ್ಜರಿ ಬಜೆಟ್ ನ, ರಾಕಿಂಗ್  ಸ್ಟಾರ್ ಯಶ್ ಅಭಿನಯದ ನೈಜ ಘಟನೆ ಆದರಿತ ಚಿತ್ರ “ಕೆಜಿಎಫ್” ನ  ಬಿಡುಗಡೆಯ ದಿನ ನಿಗಧಿಯಾಗಿದೆ. “ಕೆಜಿಎಫ್” ಸೆಟ್ ಏರಿದಾಗಿನಿಂದಲೂ ಹಿಡಿದು, ಮೇಕಿಂಗ್, ಶೂಟಿಂಗ್ ಲೋಕೆಷನ್, ತಾರಗಣ, ಫಸ್ಟ್ ಲುಕ್ ಸೇರಿದಂತೆ  ಹೆಚ್ಚು ಸದ್ದು ಮಾಡಿತ್ತಿದ್ದ ಚಿತ್ರ ಇದಾಗಿದ್ದು, ಬಿಡುಗಡೆಯ ದಿನಕ್ಕಾಗಿ ಯಶ್ ಅಭಿಮಾನಿಗಳೂ ಸೇರಿದಂತೆ  ಚಿತ್ರರಸಿಕರು  ಕುತೂಹಲದಿಂದ ಕಾಯುತ್ತಿದ್ದರು. ಆದರೇ ಚಿತ್ರ ತಂಡ ಈಗ ಕೂತಹಲಕ್ಕೆ ತರೆ ಎಳೆದಿದ್ದು, ಚಿತ್ರದ ಬಿಡುಗಡೆಯ ದಿನವನ್ನ ಬಹಿರಂಗ ಗೊಳಿಸಿದೆ.

ಚಿತ್ರದ ನಾಯಕ ಯಶ್ ಗೆ ಯಾವುದೇ ಕಾರ್ಯಕ್ರಮದಲ್ಲಿ ಅಥವ ಸಂದರ್ಶನದಲ್ಲಿ  ಕೇಳಲಾಗುತ್ತಿದ್ದ ಮೊದಲ ಪ್ರಶ್ನೆಯೇ  “ಕೆಜಿಎಫ್”  ಯಾವಾಗ ರಿಲೀಸ್ ಆಗುತ್ತೆ ಅಂತ.  ಇನ್ನು ಮುಂದೆ  ಯಾರು ಕೂಡ ಈ ಪ್ರಶ್ನೆ ಕೇಳುವ ಅಗತ್ಯವಿಲ್ಲ . ಏಕೆಂದರೆ ಕೆಜಿಎಫ್ ಟೀಂ ಚಿತ್ರದ ಬಿಡುಗಡೆ ಡೇಟ್​ನ್ನು ಫಿಕ್ಸ್ ಮಾಡಿದ್ದು,  ನವೆಂಬರ್ 16 ಕ್ಕೆ ‘ಕೆಜಿಎಫ್’ ಸಿನಿಮಾ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ.

ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ “ಕೆಜಿಎಫ್” ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಸುದೀರ್ಘವಾಗಿ  ಅಂದರೇ  ಸುಮಾರು ಎರಡು ವರ್ಷಗಳ ಕಾಲ ನಿರಂತರವಾಗಿ ಚಿತ್ರೀಕರಣ ನಡೆಸಿಕೊಂಡಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತೆ ಎಂಬ ನಿರೀಕ್ಷೆಯೂ ಗಾಂಧಿನಗರದಲ್ಲಿದೆ.

ಇನ್ನು ಈ ಚಿತ್ರದಲ್ಲಿ ಬಹತುತಾರಂಗಣ ಒಳಗೊಂಡಿರುವ ಚಿತ್ರದಲ್ಲಿ ವಸಿಷ್ಠ ಎನ್ ಸಿಂಹಾ, ಅಚ್ಯುತ್ ಕುಮಾರ್,  ರಮ್ಯ ಕೃಷ್ಣ, ಮಾಳವಿಕ ಅವಿನಾಶ್ ಸೇರಿದಂತೆ ಇನ್ನು ಪ್ರಸಿದ್ಧಿ ಪಡೆದ  ಅನೇಕ ಸಹ ಕಲಾವಿದರು ಚಿತ್ರಕ್ಕೆ ಮೇರುಗುತಂದಿದ್ದಾರೆ ಎಂದು ಚಿತ್ರದಂಡ ಹೇಳಿದೆ.ಇನ್ನು ಚಿತ್ರಕ್ಕೆ ಅನಂತ್ ನಾಗ್ ಹಿನ್ನಲ್ಲೆ ಧ್ವನಿ ನೀಡಿದ್ದು ಕೆಜಿಎಫ್ ಚಿತ್ರದ  ದೊಡ್ಡ ಹೈಲೈಟ್ ಆಗಿದೆ.

ಇನ್ನು  ಚಿತ್ರವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರವ ಚಿತ್ರಕ್ಕೆ  ವಿಜಯ್ ಕಿರಗಂದೂರು  ಹಣ ಹೊಡಿಕೆ ಮಾಡಿದ್ದಾರೆ,  ಚಿತ್ರಕ್ಕೆ  ರವಿ ಬಸ್ರೂರು ಸಂಗೀತ ನೀಡಿದ್ದಾರೆ.ಇದೇ ಮೊದಲು ಬಾರಿಗೆ ಈ ಸಿನಿಮಾದಲ್ಲಿ ಯಶ್ ಜೊತೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದು, ತರೆ ಮೇಲೆ ಇವರಿಬ್ಬರ ಕೆಮಿಸ್ಟ್ರೀ  ಹೇಗೆ ಮೂಡಿ ಬಂದಿದೆ ಎಂದು ನೋಡಲು ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  ಸಿನಿಮಾದಲ್ಲಿನ ಐಟಂ ಹಾಡೊಂದಕ್ಕೆ ಯಶ್ ಜೊತೆ ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಭಾಟಿಯಾ ಅವರು ಹೆಜ್ಜೆ ಹಾಕಿದ್ದು ಚಿತ್ರ ರಸಿಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

Please follow and like us:
0
http://bp9news.com/wp-content/uploads/2018/09/kgf-3.pnghttp://bp9news.com/wp-content/uploads/2018/09/kgf-3-150x150.pngBP9 Bureauಪ್ರಮುಖಬೆಂಗಳೂರುಸಿನಿಮಾಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷತ,ಭರ್ಜರಿ ಬಜೆಟ್ ನ, ರಾಕಿಂಗ್  ಸ್ಟಾರ್ ಯಶ್ ಅಭಿನಯದ ನೈಜ ಘಟನೆ ಆದರಿತ ಚಿತ್ರ 'ಕೆಜಿಎಫ್' ನ  ಬಿಡುಗಡೆಯ ದಿನ ನಿಗಧಿಯಾಗಿದೆ. 'ಕೆಜಿಎಫ್' ಸೆಟ್ ಏರಿದಾಗಿನಿಂದಲೂ ಹಿಡಿದು, ಮೇಕಿಂಗ್, ಶೂಟಿಂಗ್ ಲೋಕೆಷನ್, ತಾರಗಣ, ಫಸ್ಟ್ ಲುಕ್ ಸೇರಿದಂತೆ  ಹೆಚ್ಚು ಸದ್ದು ಮಾಡಿತ್ತಿದ್ದ ಚಿತ್ರ ಇದಾಗಿದ್ದು, ಬಿಡುಗಡೆಯ ದಿನಕ್ಕಾಗಿ ಯಶ್ ಅಭಿಮಾನಿಗಳೂ ಸೇರಿದಂತೆ  ಚಿತ್ರರಸಿಕರು  ಕುತೂಹಲದಿಂದ ಕಾಯುತ್ತಿದ್ದರು. ಆದರೇ ಚಿತ್ರ ತಂಡ ಈಗ ಕೂತಹಲಕ್ಕೆ...Kannada News Portal