ಚಾಮರಾಜನಗರ :ಕರ್ನಾಟಕ ನಿಜ ಧ್ವನಿ ಸೇನಾ ಸಮಿತಿ ವತಿಯಿಂದ ಶುಕ್ರವಾರದಂದು ರಂಜಾನ್ ಹಬ್ಬದ ಪ್ರಯುಕ್ತ ಅಲ್ಪ ಸಂಖ್ಯಾತರ ಸಮಾಜಸೇವಕರಾದ ಎಂ.ಡಿ.ಕಿಫಾಯತ್ ಅವರನ್ನ ಸನ್ಮಾನಿಸಲಾಯಿತು.
ನಗರದ ದೇವಾಂಗ ಬೀದಿಯಲ್ಲಿ ಇರುವ ದೇವಾಂಗ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಜಧ್ವನಿ ಸೇನಾ ಸಮಿತಿಯ ಅಧ್ಯಕ್ಷರಾದ ನಿಜಧ್ವನಿ ಗೋವಿಂದರಾಜುರವರು ಮಾತನಾಡಿ, ನಮ್ಮ ಸಂಘವು ಸ್ಥಾಪನೆಯಾಗಿ ಸುಮಾರು 15 ವರ್ಷಗಳಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಮಾಡುತ್ತಿರುವವರನ್ನು ಪರಿಗಣಿಸಿ ನಮ್ಮ ಸಂಘದ ವತಿಯಿಂದ ಸನ್ಮಾನ ಹಾಗೂ ಅಭಿನಂದನೆ ಸಲ್ಲಿಸುವುದು ವಾಡಿಕೆ. ಅದೇ ರೀತಿ ಈ ದಿನ ರಂಜಾನ್ ಹಬ್ಬದ ಪ್ರಯುಕ್ತ ನಮ್ಮ ಸಂಘದ ವತಿಯಿಂದ ಅಲ್ಪ ಸಂಖ್ಯಾತರ ಸಮಾಜಸೇವಕರಾದ ಎಂ.ಡಿ.ಕಿಫಾಯತ್‍ರವರನ್ನು ಸನ್ಮಾನಿಸಲಾಗಿದೆ.
ಇವರು ಹಿಂದೂ ಮುಸ್ಲಿಮ್ ಎಂಬ ಭೇದ ಭಾವವಿಲ್ಲದೆ ಬಡಬಗ್ಗರಿಗೆ ಸೀರೆ, ಮದುವೆಯ ಖರ್ಚು, ರೋಗಿಗಳಿಗೆ ಔಷಧಿಗಳು ಬಡವರ ಮದುವೆಗೆ ಉಚಿತವಾಗಿ ಅಡುಗೆ ಮಾಡಿಕೊಡುವುದು ಇನ್ನೂ ಮುಂತಾದ ಸೇವೆಯನ್ನು ಸುಮಾರು 20 ವರ್ಷಗಳಿಂದ ಮಾಡಿಕೊಂಡು ಬಂದಿರುತ್ತಾರೆ. ಇಂತಹ ಸಮಾಜಸೇವಕರನ್ನು ಗುರುತಿಸಿ ನಮ್ಮ ಸಂಘಟನೆಯಿಂದ ಅವರನ್ನು ಗೌರವಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಕಾಡಳ್ಳಿ ನಾಗರಾಜು, ಜಿ.ಎಂ.ಮಹದೇವು, ವೈ.ಮಹದೇವಸ್ವಾಮಿ, ಎಂ.ಕುಮಾರ್, ಸಿದ್ದಪ್ಪ, ಶ್ರೀನಿವಾಸಾಚಾರಿ, ಉಡಿಗಾಲ ರಾಜು, ಕಾಳಪ್ಪಾಚಾರ್, ಸಿ.ಮಹೇಶ್, ಸೋಮ, ಶ್ರೀನಿವಾಸ ಜೆಟ್ಟಿ, ನಾರಾಯಣ ಇನ್ನೂ ಮುಂತಾದವರು ಹಾಜರಿದ್ದರು.

 

Please follow and like us:
0
http://bp9news.com/wp-content/uploads/2018/06/sanmana-ch.nagara-1024x658.jpghttp://bp9news.com/wp-content/uploads/2018/06/sanmana-ch.nagara-150x150.jpgBP9 Bureauಚಾಮರಾಜನಗರಪ್ರಮುಖkifayath-felicatated-in-chamaraja-nagaraಚಾಮರಾಜನಗರ :ಕರ್ನಾಟಕ ನಿಜ ಧ್ವನಿ ಸೇನಾ ಸಮಿತಿ ವತಿಯಿಂದ ಶುಕ್ರವಾರದಂದು ರಂಜಾನ್ ಹಬ್ಬದ ಪ್ರಯುಕ್ತ ಅಲ್ಪ ಸಂಖ್ಯಾತರ ಸಮಾಜಸೇವಕರಾದ ಎಂ.ಡಿ.ಕಿಫಾಯತ್ ಅವರನ್ನ ಸನ್ಮಾನಿಸಲಾಯಿತು. ನಗರದ ದೇವಾಂಗ ಬೀದಿಯಲ್ಲಿ ಇರುವ ದೇವಾಂಗ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಜಧ್ವನಿ ಸೇನಾ ಸಮಿತಿಯ ಅಧ್ಯಕ್ಷರಾದ ನಿಜಧ್ವನಿ ಗೋವಿಂದರಾಜುರವರು ಮಾತನಾಡಿ, ನಮ್ಮ ಸಂಘವು ಸ್ಥಾಪನೆಯಾಗಿ ಸುಮಾರು 15 ವರ್ಷಗಳಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಮಾಡುತ್ತಿರುವವರನ್ನು ಪರಿಗಣಿಸಿ ನಮ್ಮ ಸಂಘದ ವತಿಯಿಂದ ಸನ್ಮಾನ ಹಾಗೂ ಅಭಿನಂದನೆ ಸಲ್ಲಿಸುವುದು...Kannada News Portal