ಕಲಬುರಗಿ: ಪ್ರತ್ಯೇಕ ಲಿಂಗಾಯಿತ ಧರ್ಮ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯ ಸಚಿವ ಸಂಪುಟದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವೀರಶೈವ ಮುಖಂಡರ ಮೇಲೆ ಲಿಂಗಾಯತ ಮುಖಂಡರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕಲಬುರಗಿ ನಗರದ ಸರದಾರ್ ವಲ್ಲಭಭಾಯಿ ಪಟೇಲ್  ವೃತ್ತದಲ್ಲಿ ವೀರಶೈವ ಸಮಾಜದವರಿಗೆ ಗೂಸಾ ನೀಡಿದ ಘಟನೆ ನಡೆದಿದೆ. ವೀರಶೈವ ಸಮಾಜದ ಮುಖಂಡ ಎಂ.ಎಸ್.ಪಾಟೀಲ್ ನರಿಬೋಳ ಹಾಗೂ ಇತರರ ಮೇಲೆ ಹಲ್ಲೆ ನಡೆದಿದೆ. ರಾಜ್ಯ ಸಚಿವ ಸಂಪುಟದ ತೀರ್ಮಾನ ಖಂಡಿಸಿ ವೀರಶೈವ ಮುಖಂಡರು ಸರದಾರ ವಲ್ಲಭಭಾಯ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗುತ್ತಾ ಚಪ್ಪಲಿ ತೋರಿಸುತ್ತಿದ್ದರು. ಈ ಸಂದರ್ಭದಲ್ಲಿಯೇ ಜಗತ್ ವೃತ್ತದಿಂದ ವಿಜಯೋತ್ಸವ ಆಚರಿಸಿಕೊಂಡು ಬರುತ್ತಿದ್ದ ಲಿಂಗಾಯತ ಸಮಾಜದವರು ವೀರಶೈವರು ನಡೆಸುತ್ತಿದ್ದ ಪ್ರತಿಭಟನೆಯಿಂದ ಕುಪಿತಗೊಂಡರು. ಹೀಗಾಗಿ ಪರಸ್ಪರ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿತು. ಈ ಘಟನೆಯನ್ನು ತಿಳಿಗೊಳಿಸಲ್ಲು ಪೋಲಿಸರು ಹರಸಾಹಸ ಪಟ್ಟರು.

Please follow and like us:
0
http://bp9news.com/wp-content/uploads/2018/03/WhatsApp-Image-2018-03-19-at-6.26.54-PM-1024x768.jpeghttp://bp9news.com/wp-content/uploads/2018/03/WhatsApp-Image-2018-03-19-at-6.26.54-PM-150x150.jpegBP9 Bureauಕಲಬುರ್ಗಿಕಲಬುರಗಿ: ಪ್ರತ್ಯೇಕ ಲಿಂಗಾಯಿತ ಧರ್ಮ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯ ಸಚಿವ ಸಂಪುಟದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವೀರಶೈವ ಮುಖಂಡರ ಮೇಲೆ ಲಿಂಗಾಯತ ಮುಖಂಡರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಕಲಬುರಗಿ ನಗರದ ಸರದಾರ್ ವಲ್ಲಭಭಾಯಿ ಪಟೇಲ್  ವೃತ್ತದಲ್ಲಿ ವೀರಶೈವ ಸಮಾಜದವರಿಗೆ ಗೂಸಾ ನೀಡಿದ ಘಟನೆ ನಡೆದಿದೆ. ವೀರಶೈವ ಸಮಾಜದ ಮುಖಂಡ ಎಂ.ಎಸ್.ಪಾಟೀಲ್ ನರಿಬೋಳ ಹಾಗೂ ಇತರರ ಮೇಲೆ ಹಲ್ಲೆ ನಡೆದಿದೆ. ರಾಜ್ಯ ಸಚಿವ ಸಂಪುಟದ...Kannada News Portal