ಬೀದರ್‌ : ನಿರೀಕ್ಷೆಯಂತೆಯೇ ಔರಾದ್‌ನ ಹಾಲಿ ಶಾಸಕ ಪ್ರಭು ಚವ್ಹಾಣ್‌ಗೆ ಪಕ್ಷ ಮತ್ತೆ ಮಣೆ ಹಾಕಿದೆ.ಇದಕ್ಕೆ ನಾವೇನ್ ಕಮ್ಮಿ ಇಲ್ಲಾ ಎಂಬಂತೆ ಕಾಂಗ್ರೆಸ್​​ ನವರು ಕೂಡ ಮುಖ್ಯಮಂತ್ರಿಗಳ ಆಪ್ತ ಕಾರ‍್ಯದರ್ಶಿಯಾಗಿದ್ದ, ನಿವೃತ್ತ ಅಧಿಕಾರಿ ಭೀಮಸೇನರಾವ್‌ ಶಿಂಧೆ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಟಿಕೆಟ್ ನೀಡಿದ್ದು ಇವರಿಬ್ಬರ ನಡುವೆ ಟೈಟ್ ಫೈಟ್ ಆಗುತ್ತಾ ಅನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿರುವ ಪ್ರಶ್ನೆ.

ಎರಡು ಬಾರಿ ಗೆದ್ದಿರುವ ಪ್ರಭು ಚವ್ಹಾಣ್‌ಗೆ ಬಿಜೆಪಿ ಹೈ ಕಮಾಂಡ್‌ ಮತ್ತೆ ಟಿಕೆಟ್‌ ನೀಡುವ ಮೂಲಕ, ಪಕ್ಷದಲ್ಲಿ ಟಿಕೆಟ್‌ಗಾಗಿ ತಗಾದೆ ತೆಗೆದವರಿಗೆ ಹೈಕಮಾಂಡ್‌ ಚಾಟಿ ಬೀಸಿದೆ. ಪ್ರಭು ಚವ್ಹಾಣ್‌ಗೆ ಟಿಕೆಟ್‌ ತಪ್ಪಿಸಲು ಯತ್ನಿಸಿದ ಭಿನ್ನರ ಗುಂಪಿಗೆ ಇದೀಗ ಮುಖಭಂಗವಾದಂತಾಗಿದೆ.

ಔರಾದ್‌ ಬಿಜೆಪಿನಲ್ಲಿ ಪ್ರಭು ಚವ್ಹಾಣ್‌ ಹೊರತುಪಡಿಸಿ ಮತ್ಯಾರೂ ಗೆಲ್ಲುವ ಕುದರೆಗಳಿಲ್ಲದ ಕಾರಣ ಪಕ್ಷವು ಮೂರನೇ ಬಾರಿ ಸ್ಪರ್ಧಿಸಲು ಹಸಿರು ನಿಶಾನೆ ತೋರಿದೆ ಎನ್ನಲಾಗುತ್ತಿದೆ. 2008 ಹಾಗೂ 2013ರಲ್ಲಿ ಭಾರಿ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಸುಮಾರು ತಿಂಗಳ ಹಿಂದೆಯೇ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿರುವ ಪ್ರಭು ಚವ್ಹಾಣ್‌, ಇದೀಗ ಮತ್ತಷ್ಟು ಚುರುಕಾಗಿ ತಿರುಗಾಡುತ್ತಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಸಾಧನೆಗಳನ್ನು ಚವ್ಹಾಣ್‌ ಮಾಡಿದ್ದಾರೆ ಎಂಬುದು ಕ್ಷೇತ್ರದ ಮತದಾರರ ಮಾತು. ರಸ್ತೆ, ಕುಡಿಯುವ ನೀರು ಸೇರಿ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿದ್ದಾರೆ, ಜನರಿಗೆ ಸ್ಪಂದಿಸಿದ್ದಾರೆ ಎನ್ನುತ್ತಾರೆ ನಿಡೋದಾ ಗ್ರಾಮದ ಅನಿಲಕುಮಾರ ಪಾಟೀಲ್‌.

ಹೀಗಿರುವಾಗ ಇಬ್ಬರ ನಡುವೆ ಪ್ರಭಲ ಪೈಪುಟಿ ನಡೆಯುವ ಎಲ್ಲ ಲಕ್ಷಣಗಳು ಗೂಚರಿಸುತ್ತಿದ್ದು ಬೀದರ್ ನ್ 6ಕ್ಷೇತ್ರದಲ್ಲಿ  ಯಾವದೇ ಕ್ಷೇತ್ರ ಇನ್ನು ಕಾವು ಪಡೆದಿಲ್ಲ ಅದರೆ ಔರಾದ ಮಾತ್ರ ಫುಲ್ ಗರಂ ಆಗಿದ್ದು ಬಿರುಸಿನ ಪ್ರಚಾರ ಮಾತ್ರ ಎರಡೂ ರಾಜಕೀಯ ಪಕ್ಷಗಳು ಮಾಡುತ್ತಿರುವುದು ಕಾಣಬಹುದು.

ವರದಿ :ಮನೋಹರ ಪೂಜಾರಿ

Please follow and like us:
0
http://bp9news.com/wp-content/uploads/2018/04/collage-2-15.jpghttp://bp9news.com/wp-content/uploads/2018/04/collage-2-15-150x150.jpgBP9 Bureauಪ್ರಮುಖಬೀದರ್ಬೀದರ್‌ : ನಿರೀಕ್ಷೆಯಂತೆಯೇ ಔರಾದ್‌ನ ಹಾಲಿ ಶಾಸಕ ಪ್ರಭು ಚವ್ಹಾಣ್‌ಗೆ ಪಕ್ಷ ಮತ್ತೆ ಮಣೆ ಹಾಕಿದೆ.ಇದಕ್ಕೆ ನಾವೇನ್ ಕಮ್ಮಿ ಇಲ್ಲಾ ಎಂಬಂತೆ ಕಾಂಗ್ರೆಸ್​​ ನವರು ಕೂಡ ಮುಖ್ಯಮಂತ್ರಿಗಳ ಆಪ್ತ ಕಾರ‍್ಯದರ್ಶಿಯಾಗಿದ್ದ, ನಿವೃತ್ತ ಅಧಿಕಾರಿ ಭೀಮಸೇನರಾವ್‌ ಶಿಂಧೆ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಟಿಕೆಟ್ ನೀಡಿದ್ದು ಇವರಿಬ್ಬರ ನಡುವೆ ಟೈಟ್ ಫೈಟ್ ಆಗುತ್ತಾ ಅನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿರುವ ಪ್ರಶ್ನೆ. ಎರಡು ಬಾರಿ ಗೆದ್ದಿರುವ ಪ್ರಭು ಚವ್ಹಾಣ್‌ಗೆ ಬಿಜೆಪಿ ಹೈ ಕಮಾಂಡ್‌ ಮತ್ತೆ...Kannada News Portal