ಯಾದಗಿರಿ  : ಜಿಲ್ಲೆಯ ಸೂರಪೂರ  ತಾಲ್ಲೂಕಿನ ವಿವಿಧ ಇಲಾಖೆಯಗಳ ಸಹಯೋಗದಲ್ಲಿ ಅಂಗವಿಕಲರಿಂದ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ಗಾಂಧಿವೃತ್ತದಿಂದ ಅರಮನೆ ಮಾರ್ಗವಾಗಿ ನಗರದ ಸತ್ತಲಿಬ ಪ್ರಮುಖ ಬೀದಿಗಳಲ್ಲಿ ತ್ರಿಚಕ್ರವಾಹನ ಜಾಥಾ ನಡೆಸಿದರು. ಜಾಥವನ್ನ ಉದ್ದೇಶಿಸಿ ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ಶರಣಗೌಡ ಕ್ಯಾತನಾಳ ಮಾತನಾಡಿ, ‘18 ವರ್ಷ ತುಂಬಿದ ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕು. ಅಂಗವಿಕಲರಿಗೆ ತೊಂದರೆಯಾಗದಂತೆ ಎಲ್ಲಾ ಮತಗಟ್ಟೆಗಳಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಹೇಳಿದರು,ಇದೇ 8ರಂದು ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ನೋಂದಣಿ ಅಭಿಯಾನ ಆರಂಭವಾಗಲಿದ್ದು ಪ್ರತಿ ಒಬ್ಬರು ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕು, ಜನ್ಮ ದಿನದ ಪ್ರಮಾಣ ಪತ್ರ ಮತ್ತು ಆಧಾರ್ ಸಂಖ್ಯೆ ನೀಡಿ ಹೆಸರು ನೋಂದಾಯಿಸಿಕೊಳ್ಳಲ್ಲು ತಿಳಿಸಿದರು.

Please follow and like us:
0
http://bp9news.com/wp-content/uploads/2018/04/WhatsApp-Image-2018-04-07-at-3.23.39-PM.jpeghttp://bp9news.com/wp-content/uploads/2018/04/WhatsApp-Image-2018-04-07-at-3.23.39-PM-150x150.jpegBP9 Bureauಯಾದಗಿರಿಯಾದಗಿರಿ  : ಜಿಲ್ಲೆಯ ಸೂರಪೂರ  ತಾಲ್ಲೂಕಿನ ವಿವಿಧ ಇಲಾಖೆಯಗಳ ಸಹಯೋಗದಲ್ಲಿ ಅಂಗವಿಕಲರಿಂದ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ಗಾಂಧಿವೃತ್ತದಿಂದ ಅರಮನೆ ಮಾರ್ಗವಾಗಿ ನಗರದ ಸತ್ತಲಿಬ ಪ್ರಮುಖ ಬೀದಿಗಳಲ್ಲಿ ತ್ರಿಚಕ್ರವಾಹನ ಜಾಥಾ ನಡೆಸಿದರು. ಜಾಥವನ್ನ ಉದ್ದೇಶಿಸಿ ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ಶರಣಗೌಡ ಕ್ಯಾತನಾಳ ಮಾತನಾಡಿ, ‘18 ವರ್ಷ ತುಂಬಿದ ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕು. ಅಂಗವಿಕಲರಿಗೆ ತೊಂದರೆಯಾಗದಂತೆ ಎಲ್ಲಾ ಮತಗಟ್ಟೆಗಳಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಹೇಳಿದರು,ಇದೇ 8ರಂದು...Kannada News Portal