ಬೀದರ್ : ತಾಲ್ಲೂಕಿನ ಜನವಾಡ, ಇಸ್ಲಾಂಪುರ, ಮರಕಲ್ ಹಾಗೂ ಚಿಕ್ಕಪೇಟೆಯ ಅನೇಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾದರು. ಇಸ್ಲಾಂಪುರದ ಮುಖಂಡ ಜಗನ್ನಾಥರಾವ್ ಮೂಲಗೆ, ಮರಕಲ್‌ನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈಜಿನಾಥ ಕಾಂಬಳೆ, ಸದಸ್ಯರಾದ ರಾಜಪ್ಪ ಓಂಕಾರೆ, ಅಶೋಕ ಕೈಕಾಡಿ, ವೈಜಿನಾಥ ಕೋಳಿ, ಚಿಕ್ಕಪೇಟೆಯ ವೈಜಿನಾಥ ಶಂಕರ ಕಾಂಬಳೆ ಅವರಿಗೆ ಬೀದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಬೀದರ್‌ನಲ್ಲಿ ಸೋಮವಾರ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

ನಂತರ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕಾಗಿ ಮತದಾರರು ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹತ್ತು ಹಲವು ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ನೆರವಾಗಿದೆ. ಇಡೀ ವಿಶ್ವದ ಮನ್ನಣೆ ಗಳಿಸಿದೆ. ಬೀದರ್ ಕ್ಷೇತ್ರದ ಅಭಿವೃದ್ಧಿಗಾಗಿ ಮತದಾರರು ತಮ್ಮನ್ನು ಆಶೀರ್ವದಿಸಬೇಕು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಕುಮಾರ , ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಎಸ್. ಪಾಟೀಲ ಗಾದಗಿ, ಕಲ್ಯಾಣರಾವ್ ಬಿರಾದಾರ, ಗುರುನಾಥ ರಾಜಗೀರಾ ಇದ್ದರು.

Please follow and like us:
0
http://bp9news.com/wp-content/uploads/2018/04/WhatsApp-Image-2018-04-28-at-4.34.11-PM.jpeghttp://bp9news.com/wp-content/uploads/2018/04/WhatsApp-Image-2018-04-28-at-4.34.11-PM-150x150.jpegBP9 Bureauಬೀದರ್ರಾಜಕೀಯಬೀದರ್ : ತಾಲ್ಲೂಕಿನ ಜನವಾಡ, ಇಸ್ಲಾಂಪುರ, ಮರಕಲ್ ಹಾಗೂ ಚಿಕ್ಕಪೇಟೆಯ ಅನೇಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾದರು. ಇಸ್ಲಾಂಪುರದ ಮುಖಂಡ ಜಗನ್ನಾಥರಾವ್ ಮೂಲಗೆ, ಮರಕಲ್‌ನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈಜಿನಾಥ ಕಾಂಬಳೆ, ಸದಸ್ಯರಾದ ರಾಜಪ್ಪ ಓಂಕಾರೆ, ಅಶೋಕ ಕೈಕಾಡಿ, ವೈಜಿನಾಥ ಕೋಳಿ, ಚಿಕ್ಕಪೇಟೆಯ ವೈಜಿನಾಥ ಶಂಕರ ಕಾಂಬಳೆ ಅವರಿಗೆ ಬೀದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಬೀದರ್‌ನಲ್ಲಿ ಸೋಮವಾರ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ನಂತರ...Kannada News Portal