ಕಲಬುರಗಿ: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ 15 ದಿನಗಳು ಬಾಕಿ ಇದ್ದು, ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ದಿನ ಮೇ 12ರವರೆಗೆ ಕೌಂಟ್ ಡೌನ್ ಪ್ರಾರಂಭಿಸಿ ಪ್ರತಿದಿನ ಒಂದೊಂದು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.

ಶುಕ್ರವಾರ ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ನೌಕರರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಹಾಗೂ ಬೈಕ್ ಜಾಥಾ ಉದ್ಘಾಟಿಸಿ ಮಾತನಾಡಿ, ಕೌಂಟ್ ಡೌನ್ 15ರ ಅಂಗವಾಗಿ ಸೇಡಂನಿಂದ ಕಲಬುರಗಿವರೆಗೆ ವಿಶೇಷ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಬೈಕ್ ಜಾಥಾ ಮೂಲಕ ಸೇಡಂ, ಚಿತ್ತಾಪುರ, ಗುಲಬರ್ಗಾ ಗ್ರಾಮೀಣ, ಗುಲಬರ್ಗಾ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರಗಳಲ್ಲಿ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮತದಾನವು ಸಂವಿಧಾನ ನೀಡಿರುವ ಹಕ್ಕಾಗಿರುವುದರಿಂದ ಇದನ್ನು ಕಡ್ಡಾಯವಾಗಿ ಚಲಾಯಿಸಬೇಕು. ಸಾಮಾನ್ಯ, ಶ್ರೀಮಂತ, ಕೂಲಿ ಕಾರ್ಮಿಕರಿಗೂ ಸಹ ಒಂದೆ ಮತ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಮೇ 12ರಂದು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಸುಭದ್ರ ಭಾರತ ಕಟ್ಟಲು ಕಾರಣರಾಗಬೇಕು. ಮತವನ್ನು ಹಣದ ಆಮಿಷಕ್ಕೆ ಒಳಗಾಗಿ ಮಾರಿಕೊಳ್ಳದೇ ನೈತಿಕ ಮತದಾನ ಚಲಾಯಿಸಬೇಕೆಂದು ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ಕಲಬುರಗಿಯ ಬೇಸಿಗೆ ಕಾಲದ ಬಿಸಿಲಿನ ತಾಪಮಾನವನ್ನು ಲೆಕ್ಕಿಸದೇ ಸೇಡಂನಿಂದ ಕಲಬುರಗಿವರೆಗೆ ತಾವೇ ಸ್ವತ: ಬೈಕ್ ಓಡಿಸಿದ್ದು ಈ ಬೈಕ್ ಜಾಥ ವಿಶೇಷವಾಗಿತ್ತು. ಸೇಡಂನಲ್ಲಿ ಬೆಳಿಗ್ಗೆ 8.30 ಗಂಟೆಗೆ ಪ್ರಾರಂಭವಾದ ಬೈಕ್ ಜಾಥ ಮಧ್ಯಾಹ್ನ 3 ಗಂಟೆಗೆ ಕಲಬುರಗಿಯಲ್ಲಿ ಕೊನೆಗೊಂಡಿತು.

ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಡಾ. ಬಿ. ಸುಶೀಲಾ, ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮಿಥುನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮೈಸೂರು ಗಿರೀಶ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್, ಮುಖ್ಯ ಯೋಜನಾಧಿಕಾರಿ ಸುನೀಲ ಬಿಸ್ವಾಸ್, ಸಹ ಕಾರ್ಯದರ್ಶಿ ಸಂಪತ್ ಪಾಟೀಲ, ಯೋಜನಾ ನಿರ್ದೇಶಕ ಸೂರ್ಯಕಾಂತ, ಕಲಬುರಗಿ ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೋಡ, ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಸೇಡಂನ ವಾಸವದತ್ತ ಸಿಮೆಂಟ್ ಕಾರ್ಖಾನೆಯ ನೌಕರ ಹಾಗೂ ಸಿಬ್ಬಂದಿಗಳಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು.

Please follow and like us:
0
http://bp9news.com/wp-content/uploads/2018/04/4-2.jpghttp://bp9news.com/wp-content/uploads/2018/04/4-2-150x150.jpgBP9 Bureauಕಲಬುರ್ಗಿರಾಜಕೀಯಕಲಬುರಗಿ: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ 15 ದಿನಗಳು ಬಾಕಿ ಇದ್ದು, ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ದಿನ ಮೇ 12ರವರೆಗೆ ಕೌಂಟ್ ಡೌನ್ ಪ್ರಾರಂಭಿಸಿ ಪ್ರತಿದಿನ ಒಂದೊಂದು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು. ಶುಕ್ರವಾರ ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ನೌಕರರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಹಾಗೂ ಬೈಕ್...Kannada News Portal