ಕಲಬುರಗಿ: ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಇತ್ಯರ್ಥವಾಗಿರುವ ಕಲಬುರಗಿ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಮೂಲಕ ಸ್ಥಾನಗಳ ಭರ್ತಿಗಾಗಿ ಕರ್ನಾಟಕ ಪಂಚಾಯತ್‍ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದನ್ವಯ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಜೂನ್ 2 ಕೊನೆಯ ದಿನವಾಗಿದ್ದು, ಜೂನ್ 4 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 6 ಅಂತಿಮ ದಿನವಾಗಿರುತ್ತದೆ. ಅವಶ್ಯವಿದ್ದಲ್ಲಿ ಮತದಾನವು ಜೂನ್ 14 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನದ ಅವಶ್ಯವಿದ್ದಲ್ಲಿ ಮತದಾನವನ್ನು ಜೂನ್ 15ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಜೂನ್ 17ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.

ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವಿವರ ಇಂತಿದೆ

ಕಲಬುರಗಿ ತಾಲೂಕು: ಮರಗುತ್ತಿ ಗ್ರಾಮ ಪಂಚಾಯಿತಿಯ 18 ಸದಸ್ಯ ಸ್ಥಾನ. ಆಳಂದ ತಾಲೂಕು: ದಣ್ಣೂರ ಗ್ರಾಮ ಪಂಚಾಯಿತಿಯ 12 ಸದಸ್ಯ ಸ್ಥಾನ, ನಿರಗುಡಿ ಗ್ರಾಮ ಪಂಚಾಯಿತಿಯ 23 ಸ್ಥಾನ, ಭೂಸನೂರ ಗ್ರಾಮ ಪಂಚಾಯಿತಿಯ 15 ಸ್ಥಾನ, ಹಿತ್ತಲಶಿರೂರ ಗ್ರಾಮ ಪಂಚಾಯಿತಿಯ 17 ಸ್ಥಾನ, ಧುತ್ತರಗಾಂವ ಗ್ರಾಮ ಪಂಚಾಯಿತಿಯ 21 ಸ್ಥಾನ. ಚಿತ್ತಾಪುರ ತಾಲೂಕು: ಶಳ್ಳಗಿ ಗ್ರಾಮ ಪಂಚಾಯಿತಿಯ 9 ಸ್ಥಾನ, ಕೊಲ್ಲೂರ ಗ್ರಾಮ ಪಂಚಾಯಿತಿಯ 15 ಸ್ಥಾನ, ರಾಂಪೂರಹಳ್ಳಿಯ ಗ್ರಾಮ ಪಂಚಾಯಿತಿಯ 11 ಸ್ಥಾನ. ಜೇವರ್ಗಿ ತಾಲೂಕು: ಮದರಿ ಗ್ರಾಮ ಪಂಚಾಯಿತಿಯ 14 ಸ್ಥಾನ, ಕರಕಿಹಳ್ಳಿ ಗ್ರಾಮ ಪಂಚಾಯಿತಿಯ 17 ಸ್ಥಾನ, ರಂಜಣಗಿ ಗ್ರಾಮ ಪಂಚಾಯಿತಿಯ 21 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರ ಹಾಗೂ ರಾಂಪೂರಹಳ್ಳಿ ಗ್ರಾಮ ಪಂಚಾಯಿತಿಗಳು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಈ ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ

ಕಲಬುರಗಿ ಜಿಲ್ಲೆಯ ಕಲಬುರಗಿ, ಆಳಂದ, ಚಿತ್ತಾಪುರ, ಸೇಡಂ ಹಾಗೂ ಚಿಂಚೋಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ಸದಸ್ಯರ ಹುದ್ದೆಯ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಕರ್ನಾಟಕ ಪಂಚಾಯತ್‍ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದನ್ವಯ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ವೇಳಾಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಜೂನ್ 2ರಂದು ಕೊನೆಯ ದಿನವಾಗಿದ್ದು, ಜೂನ್ 4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 6ರಂದು ಅಂತಿಮ ದಿನವಾಗಿರುತ್ತದೆ. ಅವಶ್ಯವಿದ್ದಲ್ಲಿ ಮತದಾನವು ಜೂನ್ 14 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮರುಮತದಾನದ ಅವಶ್ಯವಿದ್ದಲ್ಲಿ ಮತದಾನವನ್ನು ಜೂನ್ 15ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು ಜೂನ್ 17ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.

ತಾಲೂಕಿನ ಹೆಸರು, ಗ್ರಾಮ ಪಂಚಾಯಿತಿ ಹೆಸರು, ತೆರವಾಗಿರುವ ಕ್ಷೇತ್ರದ ಹೆಸರು, ಸದಸ್ಯ ಸ್ಥಾನಗಳ ಸಂಖ್ಯೆ ವಿವರ ಇಂತಿದೆ. ಕಲಬುರಗಿ ತಾಲೂಕು: ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿಯ ಶ್ರೀನಿವಾಸ ಸರಡಗಿ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ಸಣ್ಣೂರ ಗ್ರಾಮ ಪಂಚಾಯಿತಿಯ ಪಾಳಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ತಾಜಸುಲ್ತಾನಪುರ ಗ್ರಾಮ ಪಂಚಾಯಿತಿಯ ತಾಜಸುಲ್ತಾನಪುರ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ಬಸವಪಟ್ಟಣ ಗ್ರಾಮ ಪಂಚಾಯಿತಿಯ ಜೋಗುರ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ಮಹಾಗಾಂವ ಗ್ರಾಮ ಪಂಚಾಯಿತಿಯ ಮಹಾಗಾಂವ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.

ಆಳಂದ ತಾಲೂಕು: ರುದ್ರವಾಡಿ ಗ್ರಾಮ ಪಂಚಾಯಿತಿಯ ಬಂಗರಗಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ ಹಾಗೂ ಮಾದನಹಿಪ್ಪರಗಾ ಗ್ರಾಮ ಪಂಚಾಯಿತಿಯ ಮಾದನಹಿಪ್ಪರಗಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ. ಸೇಡಂ ತಾಲೂಕು: ನೀಲಹಳ್ಳಿ ಗ್ರಾಮ ಪಂಚಾಯಿತಿಯ ಅರೆಬೊಮ್ಮನಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ ಹಾಗೂ ಕೋಡ್ಲಾ ಗ್ರಾಮ ಪಂಚಾಯಿತಿಯ ಕೋಡ್ಲಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ. ಚಿತ್ತಾಪುರ ತಾಲೂಕು: ರಾವೂರ ಗ್ರಾಮ ಪಂಚಾಯಿತಿಯ ರಾವೂರ ಕ್ಷೇತ್ರದ 1 ಸ್ಥಾನಕ್ಕೆ, ಹಲಕಟ್ಟಾ ಗ್ರಾಮ ಪಂಚಾಯಿತಿಯ ಹಲಕಟ್ಟಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ಆಲ್ಲೂರ(ಬಿ) ಗ್ರಾಮ ಪಂಚಾಯಿತಿಯ ಆಲೂರ (ಕೆ) ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ. ಚಿಂಚೋಳಿ ತಾಲೂಕು: ವೆಂಕಟಾಪುರ ಗ್ರಾಮ ಪಂಚಾಯಿತಿಯ ವೆಂಕಟಾಪುರ ಕ್ಷೇತ್ರದ 1 ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.

Please follow and like us:
0
http://bp9news.com/wp-content/uploads/2018/06/75444192df666106435a6afcb2a14039.jpghttp://bp9news.com/wp-content/uploads/2018/06/75444192df666106435a6afcb2a14039-150x150.jpgBP9 Bureauಕಲಬುರ್ಗಿರಾಜಕೀಯಕಲಬುರಗಿ: ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಇತ್ಯರ್ಥವಾಗಿರುವ ಕಲಬುರಗಿ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಮೂಲಕ ಸ್ಥಾನಗಳ ಭರ್ತಿಗಾಗಿ ಕರ್ನಾಟಕ ಪಂಚಾಯತ್‍ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದನ್ವಯ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದಾರೆ. ನಾಮಪತ್ರ ಸಲ್ಲಿಸಲು ಜೂನ್ 2 ಕೊನೆಯ ದಿನವಾಗಿದ್ದು, ಜೂನ್ 4 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 6 ಅಂತಿಮ...Kannada News Portal