ಯಾದಗಿರಿ: ಖಾಸಗಿ,ಕುಟುಂಬ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಭಾಗವಹಿಸುತ್ತಿದ್ದರೆ, ನೀತಿ ಸಂಹಿತೆ ಸಾರ್ವಜನಿಕರಿಗೂ ಅನ್ವಯವಾಗುತ್ತದೆ ಎಂದು ಯಾದಗಿರಿ ಮತಕ್ಷೇತ್ರದ ಚುನಾವಣಾ ಅಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಎಚ್ಚರಿಸಿದರು.

ಸಾರ್ವಜನಿಕರು ನಮಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದು ತಿಳಿದ್ದಿದ್ದಾರೆ. ಮದುವೆ, ಹುಟ್ಟುಹಬ್ಬ, ನಿಶ್ಚಿತಾರ್ಥ, ನಾಮಕರಣದಂತಹ ಖಾಸಗಿ ಸಮಾರಂಭಗಳಲ್ಲಿ ರಾಜಕಾರಣಿಗಳು ಭಾಗವಹಿಸಿ  ಯಾವುದೆ ಪಕ್ಷದ ಪರ ಮಾತನಾಡಿದರೆ ಅಥವ ರಾಜಕಾರಣಿಗಳಲ್ಲದೇ ಒಬ್ಬ ಸಾಮಾನ್ಯ ವ್ಯಕ್ತಿ ನಿರ್ದಿಷ್ಟ ಪಕ್ಷ ಅಭ್ಯರ್ಥಿಯ ಪರ ಮತಯಾಚಿಸುವಂತಹ, ಹಾಗೂ ಓಲೈಸುವಂತ ಮಾತುಗಳನ್ನಾಡಿದರೂ ಅಲ್ಲಿ ನಡೆಯುವ ಸಮಾರಂಭದ ಅರ್ಧದಷ್ಟು ಖರ್ಚನ್ನು ಹೆಸರು ಪ್ರಸ್ತಾಪಗೊಂಡ ಅಭ್ಯರ್ಥಿಯ ಚುನಾವಣಾ ಲೆಕ್ಕಪತ್ರಕ್ಕೆ ಸೇರಿಸುವಂತೆ ನೀತಿ ಸಂಹಿತೆ ಸೂಚಿಸುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರವಾಗಿ ಅಲ್ಲದೆ ಕೆವಲ ಕುಟುಂಬ ಬಂಧು ಬಳಗ ಕೂಡಿಕೊಂಡು ಮಾಡಿಕೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ನೀತಿ ಸಂಹಿತೆಯಡಿ ಅನುಮತಿ ಪಡೆಯುವಂತಿಲ್ಲ. ಅದೇ ಸಮಾರಂಭ ಸಾರ್ವಜನಿಕವಾಗಿ ಮಾಡುವದಾದರೆ 24 ಗಂಟೆ ಮುಂಚಿತವಾಗಿ ಚುನಾವಣಾ ಅಧಿಕಾರಿ, ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪದೆಯಬೇಕು ಅನುಮತಿ ಪಡೆಯಬೇಕು ಎಂದು ಹೇಳಿದರು

ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣ, ಪ್ರಸಾರ, ಪ್ರದರ್ಶನ ಹಾಗೂ ಪತ್ರಿಕಾ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣಗಳಲ್ಲಿನ ಜಾಹೀರಾತುಗಳಿಗೆ ಎಂಸಿಸಿ ಹಾಗೂ ಎಂಸಿಎಂಸಿಎ ಸಮಿತಿಯ ಅನುಮತಿ ಕಡ್ಡಾಯ ಪಡೆಯಬೇಕು. ಅನುಮತಿ ರಹಿತವಾಗಿ ಪ್ರಕಟಿಸುವುದು  ಅಪರಾಧವಾಗಿದೆ ಎಂದರು.ಪ್ರಚಾರದ ಕಾರ್ಯಕ್ಕೆ 18 ವರ್ಷದ ಒಳಗಿರುವ ಮಕ್ಕಳನ್ನು ಬಳಸಿಕೊಂಡರೆ ಬಾಲಕಾರ್ಮಿಕ ಕಾಯ್ದೆ ಅನುಸಾರ ಕ್ರಮಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ರಾಜಕೀಯ ಪಕ್ಷಗಳು ಪರಿಸರ ಸ್ನೇಹಿ ಪ್ರಚಾರ ಸಾಮಗ್ರಿಗಳನ್ನು ಬಳಸುವುದು ಉತ್ತಮ ಎಂಬುದಾಗಿ ಮಾದರಿ ನೀತಿ ಸಂಹಿತೆ ಸೂಚಿಸಿದೆ ಎಂದು ತಿಳಿಸಿದರು.

ವರದಿ: ಮನೋಹರ ಪೂಜಾರಿ

Please follow and like us:
0
http://bp9news.com/wp-content/uploads/2018/03/WhatsApp-Image-2018-03-30-at-1.40.51-PM-1024x1024.jpeghttp://bp9news.com/wp-content/uploads/2018/03/WhatsApp-Image-2018-03-30-at-1.40.51-PM-150x150.jpegBP9 Bureauಯಾದಗಿರಿಯಾದಗಿರಿ: ಖಾಸಗಿ,ಕುಟುಂಬ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಭಾಗವಹಿಸುತ್ತಿದ್ದರೆ, ನೀತಿ ಸಂಹಿತೆ ಸಾರ್ವಜನಿಕರಿಗೂ ಅನ್ವಯವಾಗುತ್ತದೆ ಎಂದು ಯಾದಗಿರಿ ಮತಕ್ಷೇತ್ರದ ಚುನಾವಣಾ ಅಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಎಚ್ಚರಿಸಿದರು. ಸಾರ್ವಜನಿಕರು ನಮಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದು ತಿಳಿದ್ದಿದ್ದಾರೆ. ಮದುವೆ, ಹುಟ್ಟುಹಬ್ಬ, ನಿಶ್ಚಿತಾರ್ಥ, ನಾಮಕರಣದಂತಹ ಖಾಸಗಿ ಸಮಾರಂಭಗಳಲ್ಲಿ ರಾಜಕಾರಣಿಗಳು ಭಾಗವಹಿಸಿ  ಯಾವುದೆ ಪಕ್ಷದ ಪರ ಮಾತನಾಡಿದರೆ ಅಥವ ರಾಜಕಾರಣಿಗಳಲ್ಲದೇ ಒಬ್ಬ ಸಾಮಾನ್ಯ ವ್ಯಕ್ತಿ ನಿರ್ದಿಷ್ಟ ಪಕ್ಷ ಅಭ್ಯರ್ಥಿಯ ಪರ ಮತಯಾಚಿಸುವಂತಹ, ಹಾಗೂ ಓಲೈಸುವಂತ ಮಾತುಗಳನ್ನಾಡಿದರೂ ಅಲ್ಲಿ...Kannada News Portal