ಕಲಬುರ್ಗಿ:  ಚಿಂಚೋಳಿಯಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಶರಣಪ್ಪ ಶಂಕರ್, ಒಂದು ಊರಲ್ಲಿ ಒಬ್ಬ ವ್ಯಕ್ತಿಯನ್ನು ಇಟ್ಟುಕೊಂಡು ಉಳಿದೆಲ್ಲಾ ವರ್ಗದ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುತ್ತಿರುವ ಶಾಸಕ, ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಶರಣ ಪ್ರಕಾಶ್ ಪಾಟೀಲ್ ಅವರ ನಿರ್ಧಾರದಿಂದ ಬೇಸತ್ತು ಮಾಜಿ ತಾಲ್ಲೂಕು ಪಂಚಾಯತ ಸದಸ್ಯ ಮಾಣಿಕ ಗೌತಮ್ ಹಾಗೂ ವಿಎಸ್ಎಸ್ಎನ್​ನ ಮಾಜಿ ಸದಸ್ಯ ನಾಗೇಂದ್ರಪ್ಪ ಹಳ್ಳಿ ಅವರ ನೇತೃತ್ವದಲ್ಲಿ ನೂರಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್​​​​ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎಂದರು.

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಕೇಂದ್ರದಲ್ಲಿ ಬಿಜೆಪಿ ಇರುವುದರಿಂದ ಅನುದಾನವು ಸರಳವಾಗಿ ಜನತೆಗೆ ತಲುಪುತ್ತವೆ. ಬಿಜೆಪಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಆಶಯ ವ್ಯಕ್ತಪಡಿಸಿದರು. 35 ವರ್ಷಗಳಿಂದ ಕಾಂಗ್ರೆಸ್​​ನಲ್ಲಿ ಉಳಿದುಕೊಂಡು ಸೇವೆ ಸಲ್ಲಿಸಿದರು ಕೂಡ ಬೆಲೆ ಇಲ್ಲದ ಕಾರಣ ಬಿಜೆಪಿಗೆ ಸೇರ್ಪಡೆಗೊಂಡಿದ್ದೇವೆ ಎಂದು  ಮಾಜಿ ತಾಲ್ಲೂಕ ಪಂಚಾಯತ ಸದಸ್ಯರಾದ ಮಾಣಿಕ ಗೌತಮ್ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯ ಸಹೋದರ ಜಿಕೆ ಪಾಟೀಲ್, ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾದ ಮುಕುಂದ ದೇಶಪಾಂಡೆ, ಎಪಿಎಂಸಿ ಸದಸ್ಯ ಮಲ್ಲಿಕಾರ್ಜುನ ಕೊಡುದೂರ, ಗ್ರಾಮ ಪಂಚಾಯತ್​​​ ಸದಸ್ಯರಾದ ದೇವೀಂದ್ರಪ್ಪ ಖಂದರ, ಅರವಿಂದ ರೆಡ್ಡಿ ಸೇರಿದಂತೆ ಅನೇಕರು ಇದ್ದರು.

 

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-01-at-11.25.26-AM-1.jpeghttp://bp9news.com/wp-content/uploads/2018/05/WhatsApp-Image-2018-05-01-at-11.25.26-AM-1-150x150.jpegBP9 Bureauಕಲಬುರ್ಗಿರಾಜಕೀಯಕಲಬುರ್ಗಿ:  ಚಿಂಚೋಳಿಯಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಶರಣಪ್ಪ ಶಂಕರ್, ಒಂದು ಊರಲ್ಲಿ ಒಬ್ಬ ವ್ಯಕ್ತಿಯನ್ನು ಇಟ್ಟುಕೊಂಡು ಉಳಿದೆಲ್ಲಾ ವರ್ಗದ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುತ್ತಿರುವ ಶಾಸಕ, ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಶರಣ ಪ್ರಕಾಶ್ ಪಾಟೀಲ್ ಅವರ ನಿರ್ಧಾರದಿಂದ ಬೇಸತ್ತು ಮಾಜಿ ತಾಲ್ಲೂಕು ಪಂಚಾಯತ ಸದಸ್ಯ ಮಾಣಿಕ ಗೌತಮ್...Kannada News Portal