ಕಲಬುರ್ಗಿ:ಬಿಸಿಲನಾಡು ಕಲಬುರಗಿ ಸೇರಿದಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ಜನರಿಗೆ ಪ್ರಕೃತಿ ಸೌಂದರ್ಯ ತಾಣಗಳಿಗೆ ಹೋಗಲು ಸೂಕ್ತ ರೈಲು ಸಂಪರ್ಕವಿಲ್ಲದೇ ಸಮಸ್ಯೆ ಎದುರಿಸಿದ್ದ ಜನರಿಗೆ ಕೇಂದ್ರ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ.

ಕೇಂದ್ರ ಸರ್ಕಾರ ಸದ್ಯ ಕಲಬುರಗಿಯಿಂದ ಹಾಸನ ಮಾರ್ಗದ  ರೈಲಿಗೆ ಹಸಿರು ನಿಶಾನೆ ತೋರಿದೆ. ಈ ಸುದ್ದಿ ಕಲಬುರಗಿಯ ಪ್ರವಾಸಿಗರಿಗೆ ಸಖತ್ ಖುಷಿ ತಂದಿದೆ. ಸಾಮಾನ್ಯವಾಗಿ ಹೈದ್ರಾಬಾದ್ ಕರ್ನಾಟಕದ ಜನ ಹಾಸನ-ಚಿಕ್ಕಮಂಗಳೂರು ಜಿಲ್ಲೆಗಳ ಪ್ರವಾಸಿ ತಾಣ ಹೋಗಲು ಕನಿಷ್ಠ ಎರಡು ದಿನ ಬೇಕಾಗುತ್ತಿತ್ತು. ಹೀಗಾಗಿ ವಾರಗಟ್ಟಲೆ ಪ್ರವಾಸ ಪ್ಲಾನ್ ಮಾಡಿದವರು ಮಾತ್ರ ಆ ಭಾಗಕ್ಕೆ ಹೋಗುತ್ತಿದ್ದರು. ಆದರೆ ಇದೀಗ ಬೆಂಗಳೂರವರೆಗೆ ಸೀಮಿತವಾಗಿದ್ದ ಸೊಲ್ಲಾಪುರ-ಯಶವಂತಪುರ ರೈಲನ್ನು ಹಾಸನದವರಗೆ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕಲಬುರಗಿಯಿಂದ ಪ್ರತಿನಿತ್ಯ ರಾತ್ರಿ 9 ಗಂಟೆಗೆ ಹೊರಡುವ ಸೊಲ್ಲಾಪುರ-ಯಶವಂತಪುರ ರೈಲು ಬೆಳಗ್ಗೆ 10.30ಕ್ಕೆ ಹಾಸನಕ್ಕೆ ತಲುಪುತ್ತದೆ. ಅಲ್ಲಿಂದ 2 ದಿನ ಪ್ರವಾಸಕ್ಕೆ ಹೋಗುವವರು 1 ದಿನ ಹಾಸನ ಮತ್ತೊಂದು ದಿನ ಚಿಕ್ಕಮಗಳೂರು ಜಿಲ್ಲೆಯ ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ. ಈ ಮೂಲಕ ವಾರಂತ್ಯದ ಪ್ರವಾಸಕ್ಕೆ ಹೋಗುವ ಕಲಬುರಗಿಯ ಜನರಿಗೆ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ನಮ್ಮ ಜಿಲ್ಲೆಯ ರೈಲ್ವೆ ಟಿಕೆಟ್ ಖೋಟಾಕ್ಕೆ ಮಾತ್ರ ಕಡಿತ ಮಾಡಬಾರದು ಎಂಬುದು ಎಲ್ಲರ ಮನವಿ.

Please follow and like us:
0
http://bp9news.com/wp-content/uploads/2018/06/2213322134suryprsursf15on1404153335764-e1528813412884-1024x518.jpghttp://bp9news.com/wp-content/uploads/2018/06/2213322134suryprsursf15on1404153335764-e1528813412884-150x150.jpgBP9 Bureauಕಲಬುರ್ಗಿಪ್ರಮುಖಕಲಬುರ್ಗಿ:ಬಿಸಿಲನಾಡು ಕಲಬುರಗಿ ಸೇರಿದಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ಜನರಿಗೆ ಪ್ರಕೃತಿ ಸೌಂದರ್ಯ ತಾಣಗಳಿಗೆ ಹೋಗಲು ಸೂಕ್ತ ರೈಲು ಸಂಪರ್ಕವಿಲ್ಲದೇ ಸಮಸ್ಯೆ ಎದುರಿಸಿದ್ದ ಜನರಿಗೆ ಕೇಂದ್ರ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರ ಸದ್ಯ ಕಲಬುರಗಿಯಿಂದ ಹಾಸನ ಮಾರ್ಗದ  ರೈಲಿಗೆ ಹಸಿರು ನಿಶಾನೆ ತೋರಿದೆ. ಈ ಸುದ್ದಿ ಕಲಬುರಗಿಯ ಪ್ರವಾಸಿಗರಿಗೆ ಸಖತ್ ಖುಷಿ ತಂದಿದೆ. ಸಾಮಾನ್ಯವಾಗಿ ಹೈದ್ರಾಬಾದ್ ಕರ್ನಾಟಕದ ಜನ ಹಾಸನ-ಚಿಕ್ಕಮಂಗಳೂರು ಜಿಲ್ಲೆಗಳ ಪ್ರವಾಸಿ ತಾಣ ಹೋಗಲು ಕನಿಷ್ಠ...Kannada News Portal