ಭಾಲ್ಕಿ: ಜೀವ ಹೋದರು ಪರ್ವಾಗಿಲ್ಲ ನುಡಿದಂತೆ ನಡೆಯುತ್ತೇವೆ, ನಡೆದಿದ್ದೇವೆ ಕೂಡಾ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಬಾಳುರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಹಿಂದಿನ ಚುನಾವಣೆಯಲ್ಲಿ ನೀವು ಮತ ನೀಡಿದ್ದಕ್ಕೆ 100% ಕಾರ್ಯ ನಿಮ್ಮ ಸಲುವಾಗಿ ಮಾಡಿದ್ದೇನೆ.

ಬಾಳುರು ಗ್ರಾಮದಲ್ಲಿ 400 ಮನೆ , ರಸ್ತೆ, ಬ್ರಿಡ್ಜ್ ಮಂದಿರ, ಸಮುದಾಯ ಭವನಗಳು ನಿರ್ಮಿಸಿದ್ದು ಅದು ನಿಮ್ಮ ಕಣ್ಣೆದುರಿಗೆ ಇದ್ದು, ಮತ ಹಾಕುವ ತೀರ್ಮಾನ ನಿಮ್ಮದು ಎಂದಿದ್ದಾರೆ.

ಬಿಜೆಪಿಯವರಿಗೆ ನಿಮ್ಮ ಮನೆಯ ಮೇಲೆ ಕಣ್ಣು ಬಿದ್ದಿದೆ, ನಾನು ಕೊಟ್ಟಿರುವ ಮನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳುತ್ತಿದ್ದಾರೆ,ಅದಕ್ಕೆ ನಾನು ಅವ್ಯವಹಾರ ನಡೆದಿದ್ದು ಸತ್ಯವಾದರೆ ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ಖಡಕ್ ತಿರುಗೇಟು ನೀಡಿದ್ದಾರೆ. ನಿಮ್ಮ ಮನೆಯನ್ನು ಯಾರೇ ಬಂದರು ವಾಪಸ್ ಪಡೆಯೊಕೆ ಆಗಲ್ಲ, ನಿಮ್ಮ ಹಿಂದೆ ನಾನು ಇದ್ದೀನಿ ಕಳೆದ 10 ವರ್ಷ  ಇಟ್ಟಿರುವ ಭರವಸೆ ಮುಂದೇನು ಇಡಿ ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಕುಮಾರ್ ದೇಶಮುಖ್. ಸಿದ್ರಾಮ ದೇಶಮುಖ್, ಜಗನ್ನಾಥ್ ಕರಂಜೆ, ರವಿ ಚಲ್ವಾ, ಯುವ ಮುಖಂಡರು ಇತರರು ಉಪಸ್ಥಿತರಿದ್ದರು.

ವರದಿ :ಮನೋಹರ ಪೂಜಾರಿ

Please follow and like us:
0
http://bp9news.com/wp-content/uploads/2018/04/WhatsApp-Image-2018-04-22-at-9.54.40-AM-1-1024x528.jpeghttp://bp9news.com/wp-content/uploads/2018/04/WhatsApp-Image-2018-04-22-at-9.54.40-AM-1-150x150.jpegBP9 Bureauಕಲಬುರ್ಗಿರಾಜಕೀಯಭಾಲ್ಕಿ: ಜೀವ ಹೋದರು ಪರ್ವಾಗಿಲ್ಲ ನುಡಿದಂತೆ ನಡೆಯುತ್ತೇವೆ, ನಡೆದಿದ್ದೇವೆ ಕೂಡಾ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಬಾಳುರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಹಿಂದಿನ ಚುನಾವಣೆಯಲ್ಲಿ ನೀವು ಮತ ನೀಡಿದ್ದಕ್ಕೆ 100% ಕಾರ್ಯ ನಿಮ್ಮ ಸಲುವಾಗಿ ಮಾಡಿದ್ದೇನೆ. ಬಾಳುರು ಗ್ರಾಮದಲ್ಲಿ 400 ಮನೆ , ರಸ್ತೆ, ಬ್ರಿಡ್ಜ್ ಮಂದಿರ, ಸಮುದಾಯ ಭವನಗಳು ನಿರ್ಮಿಸಿದ್ದು ಅದು ನಿಮ್ಮ ಕಣ್ಣೆದುರಿಗೆ ಇದ್ದು, ಮತ ಹಾಕುವ ತೀರ್ಮಾನ...Kannada News Portal