ಯಾದಗಿರಿ: ಚುನಾವಣೆ ನಿಮಿತ್ಯ ರಾಜ್ಯದಲ್ಲಿ ಮಂಗಳವಾರದಿಂದಲೇ ಚುನಾವಣಾ ನೀತಿ ಸಂಹಿತೆಯನ್ನು ರಾಜ್ಯ ಚುನಾವಣಾ ಆಯೋಗ ಜಾರಿಗೊಳಿಸದೆ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಚುನಾವಣಾ ಅಧಿಸೂಚನೆಯು  ಏಪ್ರಿಲ್‌ 17ರಂದು ಹೊರಬೀಳಲಿದೆ. ಏ. 24ರಂದು ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಜಿಲ್ಲೆಯಲ್ಲಿ ಸುರಪುರ, ಶಹಾಪುರ, ಯಾದಗಿರಿಯ ತಾಲ್ಲೂಕು ಕಚೇರಿಗಳಲ್ಲಿ ಮತ್ತು ಗುರುಮಠಕನಲ್ಲಿ ಮಾತ್ರ ಪುರಸಭೆಯಲ್ಲಿ ನಾಮಪತ್ರ ಸ್ವೀಕರಿಸಲು ಕಚೇರಿಗಳು ನೇಮಿಸಲಾಗಿದೆ,ಏ. 25ರಂದು ನಾಮಪತ್ರ ಪರಿಶೀಲನೆ. ಏ. 27 ನಾಮಪತ್ರ ಹಿಂಪಡೆಯಲು ಕೊನೆ ದಿನ,ಎಂದು ತಿಳಿಸಿದರು ತಕ್ಷಣ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ವಿವಿಧ ಜಾಹೀರಾತು ಫಲಕಗಳನ್ನು ತೆರೆವುಗೊಳಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಮೊದಲ ಹಂತದಲ್ಲಿ ಸರ್ಕಾರಿ ಕಟ್ಟಡದ ಸ್ಥಳಗಳಲ್ಲಿ ಇರುವ ಜನನಾಯಕರ ಫಲಕಗಳನ್ನು ತತಕ್ಷಣ ತೆರವುಗೊಳಿಸಬೇಕು. ನಂತರ 24 ಗಂಟೆಯಲ್ಲಿ ಖಾಸಗಿ ಆಸ್ತಿಪಾಸ್ತಿಗಳಲ್ಲಿ ಇರುವ ಪ್ರಚಾರದ ಫಲಕಗಳನ್ನು ತೆರವುಗೊಳಿಸಬೇಕು. ಮುಂದಿನ 48 ಗಂಟೆಗಳಲ್ಲಿ ಎಲ್ಲಾ  ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು ಎಂದ್ದರು

ಮೇ.12ರಂದು ಚುನಾವಣೆ ನಡೆಯಲಿದ್ದು, ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಸಿದ್ಧತೆಯನ್ನು ಈಗಾಗಲೇ ಪೂರೈಸಿದೆ. ಮೇ.15ರಂದು ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಮೇ 18ರ ಒಳಗಾಗಿ ಚುನಾವಣಾ ಪ್ರಕ್ರಿಯೆ ಸಂಪೂರ್ಣಗೊಳಲ್ಲಿದ್ದು ನೀತಿ ಸಂಹಿತೆ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

Please follow and like us:
0
http://bp9news.com/wp-content/uploads/2018/03/WhatsApp-Image-2018-03-28-at-2.46.09-PM.jpeghttp://bp9news.com/wp-content/uploads/2018/03/WhatsApp-Image-2018-03-28-at-2.46.09-PM-150x150.jpegBP9 Bureauಕಲಬುರ್ಗಿಯಾದಗಿರಿಯಾದಗಿರಿ: ಚುನಾವಣೆ ನಿಮಿತ್ಯ ರಾಜ್ಯದಲ್ಲಿ ಮಂಗಳವಾರದಿಂದಲೇ ಚುನಾವಣಾ ನೀತಿ ಸಂಹಿತೆಯನ್ನು ರಾಜ್ಯ ಚುನಾವಣಾ ಆಯೋಗ ಜಾರಿಗೊಳಿಸದೆ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು. ಚುನಾವಣಾ ಅಧಿಸೂಚನೆಯು  ಏಪ್ರಿಲ್‌ 17ರಂದು ಹೊರಬೀಳಲಿದೆ. ಏ. 24ರಂದು ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಜಿಲ್ಲೆಯಲ್ಲಿ ಸುರಪುರ, ಶಹಾಪುರ, ಯಾದಗಿರಿಯ ತಾಲ್ಲೂಕು ಕಚೇರಿಗಳಲ್ಲಿ ಮತ್ತು ಗುರುಮಠಕನಲ್ಲಿ ಮಾತ್ರ ಪುರಸಭೆಯಲ್ಲಿ ನಾಮಪತ್ರ ಸ್ವೀಕರಿಸಲು ಕಚೇರಿಗಳು ನೇಮಿಸಲಾಗಿದೆ,ಏ. 25ರಂದು ನಾಮಪತ್ರ ಪರಿಶೀಲನೆ. ಏ....Kannada News Portal