ಯಾದಗಿರಿ: ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯೋಜನೆಗಳಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಅವರನ್ನು ಕೋಡಲೆ ಅಮಾನತು ಮಾಡಬೇಕು, ಮತ್ತು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಾಕರ್ತರು ಮತ್ತು ಗ್ರಾಮಸ್ಥರು ಕಾಮನಟಗಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೇಯ ಮುಖಂಡ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ 14 ನೇ ಹಣಕಾಸು ಯೋಜನೆಯಯಡಿ ಅವ್ಯವಹಾರ ನಡೆದಿದ್ದು, ಕೆಲ ಕಾಮಗಾರಿಯನ್ನು ನಿರ್ವಹಿಸದೇ ದುಡ್ಡು ಒಡೆಯಲಾಗಿದೆ, ಹಾಗೂ ಸ್ವಚ್ಚ ಭಾರತ ಯೋಜನೆಯಡಿ ಶೌಚಾಲಯ ನಿರ್ಮಿಸದೇ ಬಿಲ್ ಮಾಡಲಾಗುತ್ತಿದೆ ಎಂದು ಗುಡುಗಿದರು. ಮತ್ತು ವಿವಿಧ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೇ ನಕಲಿ ಸಿಡಿ ತಯಾರಿಸಲಾಗಿದೆ. ಇದರಲ್ಲಿ ಅಧಿಕಾರಿಗಳು ಭಾಗಿಯಾಗ್ಗಿದಾರೆ’ ಎಂದು ಆರೋಪಿಸಿದರು.ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕು  ಇಲ್ಲವಾದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ದಲಿತ ಮುಖಂಡರಾದ ಶಿವಶಂಕರ ಹೊಸಮನಿ, ಮುತ್ತು ಕಾಮನಟಗಿ,ರೇವಣಸಿದ್ದಪ್ಪ, ಪರಶುರಾಮ ಬಲಶೆಟಅವರನ್ನು, ಹನುಮಂತ ಕಾಮನಟಗಿ,  ನೀಲಮ್ಮ, ಯಲ್ಲಮ್ಮ, ಗಂಗಮ್ಮ ಸೇರಿದಂತೆ ಅನೇಕ ಕಾರ್ಯಾಕರ್ತರು ಇದ್ದರು.

Please follow and like us:
0
http://bp9news.com/wp-content/uploads/2018/04/WhatsApp-Image-2018-04-04-at-4.20.24-PM-1024x611.jpeghttp://bp9news.com/wp-content/uploads/2018/04/WhatsApp-Image-2018-04-04-at-4.20.24-PM-150x150.jpegBP9 Bureauಯಾದಗಿರಿ  ಯಾದಗಿರಿ: ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯೋಜನೆಗಳಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಅವರನ್ನು ಕೋಡಲೆ ಅಮಾನತು ಮಾಡಬೇಕು, ಮತ್ತು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಾಕರ್ತರು ಮತ್ತು ಗ್ರಾಮಸ್ಥರು ಕಾಮನಟಗಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂಘಟನೇಯ ಮುಖಂಡ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ 14 ನೇ ಹಣಕಾಸು ಯೋಜನೆಯಯಡಿ ಅವ್ಯವಹಾರ ನಡೆದಿದ್ದು, ಕೆಲ ಕಾಮಗಾರಿಯನ್ನು ನಿರ್ವಹಿಸದೇ...Kannada News Portal