ಕಲಬುರಗಿ:  ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ್ ಮೂಲಗಿ ಅವರ ಮನೆ ಮೇಲೆ ಇಂದು ಐಟಿ ಇಲಾಖೆ ದಾಳಿ ನಡೆಸಿದೆ.

ಇಂದು  ಮುಂಜಾನೆ ಏಳು ಗಂಟೆಯಿಂದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಲಬುರಗಿ, ಬಳ್ಳಾರಿ ಐಟಿ ಅಧಿಕಾರಿಗಳ ತಂಡ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದು, ನೀಲಕಂಠಾವ್ ಮೂಲಗೆ ಮನೆಯಲ್ಲಿಯೇ ಇದ್ದು ಐಟಿ ಅಧಿಕಾರಿಗಳಿಗೆ ದಾಖಲಾತಿಗಳನ್ನು ತೋರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ರಾತ್ರಿವರೆಗೂ ದಾಖಲಾತಿಗಳ ಪರಿಶೀಲನೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಮೂಲಗಿ ಅವರ ಮನೆ ಮೇಲೆ ಐಟಿ ದಾಳಿಯಾಗುತ್ತಿದ್ದಂತೆ ಅವರ ಬೆಂಬಲಿಗರು ಮನೆಯ ಮುಂದೆ ಜಮಾವಣೆಗೊಂಡಿದ್ದರು. ಇನ್ನು ಐಟಿ ದಾಳಿ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ದ ಮೂಲಗಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಉದ್ಯಮಿಯಾಗಿರುವ ನೀಲಕಂಠರಾವ್ ಮೂಲಗಿ ಮನೆ ಮೇಲೆ ಚುನಾವಣೆಯ ಸಮಯದಲ್ಲಿ ಐಟಿ ರೇಡ್ ಆಗಿರುವದು ತೀವ್ರ ಕುತೂಹಲ ಮೂಡಿಸಿದೆ.

 

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-03-at-6.45.46-PM.jpeghttp://bp9news.com/wp-content/uploads/2018/05/WhatsApp-Image-2018-05-03-at-6.45.46-PM-150x150.jpegBP9 Bureauಕಲಬುರ್ಗಿಪ್ರಮುಖಕಲಬುರಗಿ:  ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ್ ಮೂಲಗಿ ಅವರ ಮನೆ ಮೇಲೆ ಇಂದು ಐಟಿ ಇಲಾಖೆ ದಾಳಿ ನಡೆಸಿದೆ. ಇಂದು  ಮುಂಜಾನೆ ಏಳು ಗಂಟೆಯಿಂದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಲಬುರಗಿ, ಬಳ್ಳಾರಿ ಐಟಿ ಅಧಿಕಾರಿಗಳ ತಂಡ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದು, ನೀಲಕಂಠಾವ್ ಮೂಲಗೆ ಮನೆಯಲ್ಲಿಯೇ ಇದ್ದು ಐಟಿ ಅಧಿಕಾರಿಗಳಿಗೆ ದಾಖಲಾತಿಗಳನ್ನು ತೋರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ರಾತ್ರಿವರೆಗೂ ದಾಖಲಾತಿಗಳ ಪರಿಶೀಲನೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಮೂಲಗಿ...Kannada News Portal