ಕಲಬುರಗಿ: ಅಕ್ಕನ ಮೇಲಿನ ಕೋಪಕ್ಕೆ ಭಾವನ ಮನೆಗೆ ಬೆಂಕಿ ಹಚ್ಚಿ ಎಸ್ಕೇಪ್​ ಆಗುತ್ತಿದ್ದ ವೇಳೆ ಆರೋಪಿ ಮೇಲೆ ಪೊಲೀಸರು ಫೈರಿಂಗ್​ ಮಾಡಿದ್ದಾರೆ. ಜಿಲ್ಲೆಯ ಹೊರವಲಯದ ಸೇಡಂ ರಸ್ತೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದಾಗ, ಆತ್ಮರಕ್ಷಣೆಗಾಗಿ ಆರೋಪಿ ಮಹ್ಮದ್ ಮುಸ್ತಫಾ ಮೇಲೆ ಫೈರಿಂಗ್​ ನಡೆಸಿದ್ದಾರೆ.

ಜು.4 ರಂದು ತನ್ನ ಅಕ್ಕನೊಂದಿಗೆ ಜಗಳವಾಡಿ ಆಕೆಯ ಮನೆಗೆ ಬೆಂಕಿ ಇಟ್ಟಿದ್ದ. ಘಟನೆಯಲ್ಲಿ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದರು. ಜು. 10 ರಂದು ಹೈದರಾಬಾದ್‌ನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಮುಸ್ತಫಾ ಎಸ್ಕೇಪ್ ಆಗಿದ್ದ. ಆದರೆ ನಿನ್ನೆ ಪೊಲೀಸರು ಮುಸ್ತಫಾನನ್ನು ಬಂಧಿಸಿ, ಇಂದು ವಿಚಾರಣೆ ವೇಳೆ ಮಾರಕಾಸ್ತ್ರಗಳ ಜಪ್ತಿಗೆ ಕರೆದೊಯ್ದಾಗ ಈ ಘಟನೆ ನಡೆದಿದೆ. ಮುಸ್ತಫಾ ಮಾಡಿರುವ ಹಲ್ಲೆಯಿಂದ ಇಬ್ಬರು ಎಎಸ್​ಐ ಮತ್ತು ಇಬ್ಬರು ಹೆಡ್​ ಕಾನ್ಸ್​ಟೆಬಲ್​ಗೆ ಗಾಯಗಳಾಗಿವೆ.ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Please follow and like us:
0
http://bp9news.com/wp-content/uploads/2018/07/WhatsApp-Image-2018-07-12-at-9.14.41-AM-e1531379708789.jpeghttp://bp9news.com/wp-content/uploads/2018/07/WhatsApp-Image-2018-07-12-at-9.14.41-AM-e1531379708789-150x150.jpegBP9 Bureauಕಲಬುರ್ಗಿಪ್ರಮುಖಕಲಬುರಗಿ: ಅಕ್ಕನ ಮೇಲಿನ ಕೋಪಕ್ಕೆ ಭಾವನ ಮನೆಗೆ ಬೆಂಕಿ ಹಚ್ಚಿ ಎಸ್ಕೇಪ್​ ಆಗುತ್ತಿದ್ದ ವೇಳೆ ಆರೋಪಿ ಮೇಲೆ ಪೊಲೀಸರು ಫೈರಿಂಗ್​ ಮಾಡಿದ್ದಾರೆ. ಜಿಲ್ಲೆಯ ಹೊರವಲಯದ ಸೇಡಂ ರಸ್ತೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದಾಗ, ಆತ್ಮರಕ್ಷಣೆಗಾಗಿ ಆರೋಪಿ ಮಹ್ಮದ್ ಮುಸ್ತಫಾ ಮೇಲೆ ಫೈರಿಂಗ್​ ನಡೆಸಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute =...Kannada News Portal