ಕೋಲಾರ : ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸ್ಥಾನ ಕೇವಲ ವಿಸಿಟಿಂಗ್ ಕಾರ್ಡ್ ಗಳಿಗೆ ಸೀಮಿತವಾಗದೆ ಈ ನಾಡಿನ ಜ್ವಲಂತ ಸಮಸ್ಯೆಗಳ ನಿವಾರಣೆ ಮಾಡುವ  ನಿಟ್ಟಿನಲ್ಲಿ ಪದಾಧಿಕಾರಿಗಳು  ಹೆಚ್ಚು ಶ್ರಮ ವಹಿಸಬೇಕೆಂದು  ಕರ್ನಾಟಕ ಪ್ರಜಾ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಯತೀಶ್ ಗೌಡ  ಹೇಳಿದರು.

ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಸಾಗರ  ಗ್ರಾಮದಲ್ಲಿ  ಕರ್ನಾಟಕ ಪ್ರಜಾ ರಕ್ಷಣಾ ಸೇನೆಯ  ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು,

ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಹಲವು ತತ್ವ ಸಿದ್ದಾಂತಗಳ ಅಡಿಯಲ್ಲಿ ಈ ನಾಡಿನ ಭಾಷೆ, ನೆಲ, ಜಲ ಶೋಷಿತ ಸಮಾಜದವರ ಪರವಾಗಿ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕು ಜವಾಬ್ದಾರಿ ಹೊತ್ತ ನೂತನ ಪದಾಧಿಕಾರಿಗಳು ಅಲಂಕಾರಕ್ಕೆ ಸೀಮಿತವಾಗದೆ ಶೋಷಿತರ ಧ್ವನಿಯಾಗಿ ನಿಲ್ಲಬೇಕು ಎಂದು ಕರೆನೀಡಿದರು.

ನಮ್ಮ ಸೇನೆಯು ಯಾವುದೇ ವರ್ಗದ ಜಾತಿ ಧರ್ಮ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ,  ಹಲವಾರು ಕಟ್ಟಾಳುಗಳು ಈ ಸಂಘಟನೆಯಲ್ಲಿದ್ದಾರೆ.  ರಾಜ್ಯ ಮಟ್ಟದಲ್ಲಿ ತನ್ನದೆೇ ಆದ ಅಸ್ತಿತ್ವವನ್ನು ಕಾಪಾಡಿಕೊಂಡು ಬರುತ್ತಿದೆ, ಸಂಘಟನೆಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಜ್ವಲಂತ ಸಮಸ್ಯೆಗಳ ಬಗ್ಗೆ ಹೆಜ್ಜೆ ಹಾಕಬೇಕು, ಈ ಭಾಗದಲ್ಲಿ ನೀರಾವರಿ ಕೊರತೆ ಇದ್ದು, ಶಾಶ್ವತ ನೀರಾವರಿ ಜಾರಿ ಆಗಲು ನಮ್ಮ ಸಂಘಟನೆಯು ಹೆಚ್ಚು ಒತ್ತು ನೀಡಬೇಕಾಗಿದೆ.

ಕೆಲವು ಕಿಡಿಗೇಡಿಗಳು ಅಖಂಡ ಕರ್ನಾಟಕವನ್ನು ವಿಭಾಗ ಮಾಡಲು ಬೆಳಗಾಂ ಅನ್ನು ಪ್ರತ್ಯೇಕ ರಾಜ್ಯ ಮಾಡಲು ಹೊರಟಿರುವುದು ಖಂಡನೀಯವಾಗಿದ್ದು, ಅನೇಕ ಮಹನೀಯರು ಪ್ರಾಣ ತ್ಯಾಗ ಮಾಡಿ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ್ದಾರೆ. ಇದನ್ನು ಒಡೆದರೆ ಅಭಿವೃದ್ದಿ ಶೂನ್ಯವಾಗುತ್ತದೆ. ಇದಕ್ಕೆ ನಮ್ಮ ಸಂಘಟನೆ ಯಾವುದೆೇ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಹಸಿರು ಸೇನೆ ಮತ್ತು ರೈತ ಸಂಘದ ಕಾರ್ಯಾಧ್ಯಕ್ಷ  ಚಲ್ದಿಗಾನಹಳ್ಳಿ ಪ್ರಭಾಕರಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾವಿರಾರು ಸಂಘಟನಗಳು ಹುಟ್ಟಿ ಮಾಯವಾಗುತ್ತಿವೆ, ನಿಮ್ಮ ರಕ್ಷಣಾ ಸೇನೆಯು ಈ ಗಡಿ ಭಾಗದಲ್ಲಿ ಶಾಖೆ ಪ್ರಾರಂಭಿಸಿರುವುದು ಸ್ವಾಗತವಾಗಿದ್ದು, ಜೊತೆಗೆ ಈ ನಾಡಿನ ಭಾಷೆ, ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ರಿಯಾ ಶೀಲವಾಗಿ ಕೆಲಸ ಮಾಡಬೇಕಾಗಿದೆ.

ನಿಷ್ಟಾವಂತ ಅಧಿಕಾರಿ ಡಿ.ಕೆ. ರವಿ ಜಿಲ್ಲೆಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದು ಇಂತಹ ನಿಷ್ಟಾವಂತ ಅಧಿಕಾರಿಗಳ ಪರವಾಗಿ ನಿಮ್ಮ ಸಂಘಟನೆಯು ಬೆನ್ನೆಲುಬಾಗಿ ನಿಲ್ಲಬೇಕಾಗಿದೆ.  ಈ ಜಿಲ್ಲೆಗೆ ರವಿ ಅಂತಹ ಅಧಿಕಾರಿಗಳ ಅವಶ್ಯಕತೆ ಇದೆ, ಈ ನಿಟ್ಟಿನಲ್ಲಿ ನೀವು ಮುಂದೆ ಸಾಗಬೇಕೆಂದು ಎಂದರು.

ಈ ಸಂಧರ್ಭದಲ್ಲಿ ರಾಜ್ಯ ಮುಖಂಡರಾದ ಮುರಳಿ ಮೋಹನ್, ರಾಜ್ಯ ಮಹಿಳಾ ಕಾರ್ಮಿಕ ಘಟಕದ ಅಧ್ಯಕ್ಷೆ ರಾಧಾ ಉಮೇಶ್,  ಚಂದ್ರಾರೆಡ್ಡಿ, ಜ್ಯೋತಿ ಕುಮಾರ್, ಎಂ.ವಿ. ಮಂಜುನಾಥ್, ನಂದೀಶ್ ಗೌಡ, ಶ್ರೀನಿವಾಸ್, ಕೆ.ಆರ್.ಪುರ ಮಂಜುನಾಥ್, ಹರೀಷ್ ದಿನೇಶ್, ಆನೇಕಲ್ ಅಧ್ಯಕ್ಷ ಮಾದೇಶ್, ಶಂಕರ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ  ಗಿರೀಶ್ ಗೌಡ, ಯುವ ಘಟಕದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಚಂದ್ರಶೇಕರ್, ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ವಿಶ್ವನಾಥ್, ಕಾರ್ಯದರ್ಶಿ ಮನೋಜ್ ಕುಮಾರ್, ಸುಬ್ರಮಣಿ, ಸ್ಥಳೀಯ ಮುಖಂಡರಾದ ನಾರಾಯಣಸ್ವಾಮಿ ಮಂಜುನಾಥ್ ಗೌಡ, ವೆಂಕಟರೆಡ್ಡಿ ಮತ್ತಿತರರು ಹಾಜರಿದ್ದರು.

ವರದಿ: ಚ.ಶ್ರೀನಿವಾಸಮೂರ್ತಿ,ಕೋಲಾರ

Please follow and like us:
0
http://bp9news.com/wp-content/uploads/2018/08/WhatsApp-Image-2018-08-22-at-12.35.40-PM-1-1024x768.jpeghttp://bp9news.com/wp-content/uploads/2018/08/WhatsApp-Image-2018-08-22-at-12.35.40-PM-1-150x150.jpegBP9 Bureauಕೋಲಾರಪ್ರಮುಖಸಂಘಟನೆಕೋಲಾರ : ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸ್ಥಾನ ಕೇವಲ ವಿಸಿಟಿಂಗ್ ಕಾರ್ಡ್ ಗಳಿಗೆ ಸೀಮಿತವಾಗದೆ ಈ ನಾಡಿನ ಜ್ವಲಂತ ಸಮಸ್ಯೆಗಳ ನಿವಾರಣೆ ಮಾಡುವ  ನಿಟ್ಟಿನಲ್ಲಿ ಪದಾಧಿಕಾರಿಗಳು  ಹೆಚ್ಚು ಶ್ರಮ ವಹಿಸಬೇಕೆಂದು  ಕರ್ನಾಟಕ ಪ್ರಜಾ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಯತೀಶ್ ಗೌಡ  ಹೇಳಿದರು. ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಸಾಗರ  ಗ್ರಾಮದಲ್ಲಿ  ಕರ್ನಾಟಕ ಪ್ರಜಾ ರಕ್ಷಣಾ ಸೇನೆಯ  ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಹಲವು ತತ್ವ ಸಿದ್ದಾಂತಗಳ...Kannada News Portal