ಕೋಲಾರ:  ವಿಶ್ವದಲ್ಲಿ ಭಾರತೀಯ ಸಂಸ್ಕೃತಿ ಆಚಾರ ವಿಚಾರ ಪಸರಿಸುತ್ತಿದೆ ಇದಕ್ಕೆ ಕಾರಣ ಭಾರತೀಯರು ವಿಶ್ವದೆಲ್ಲೆಡೆ ನೆಲೆಸುತ್ತಿರುವುದೆ ಪ್ರಮುಖ ಕಾರಣವಾಗಿದೆ.  ಆಮೇರಿಕಾದಂತ ದೇಶದಲ್ಲೂ ಭಾರತೀಯರು ದೊಡ್ದ ಸಂಖ್ಯೆಯಲ್ಲಿ ನೆಲೆಸಿದ್ದಾರೆ ಅವರೆಲ್ಲರೂ ಭಾರತೀಯ ಸಂಸ್ಕೃತಿ ಪರಂಪರೆ ಆಚಾರವನ್ನು ತಪ್ಪದೆ ತಮ್ಮ ಮಕ್ಕಳಿಗೆ ಕಲಿಸುವ ಮೂಲಕ ಭಾರತೀಯತೆಯನ್ನು ಉಳಿಸಿ ವಿಶ್ವಾದ್ಯಂತ ಹರಡುತ್ತಿದ್ದಾರೆ ಎಂದು ಭಾರತೀಯ ಮೂಲದ ಆಮೇರಿಕಾ ದೇಶದ ನಿವಾಸಿಯಾದ ಮುರಳಿ ಭಟ್ಟರು ಹೇಳಿದ್ದಾರೆ.

ಅಮೇರಿಕಾದ ಮಿನ್ನಿಯಾಪೊಲೀಸ್ ನಗರದಲ್ಲಿ ಕಂಚಿ ಶ್ರೀ ವರದರಾಜಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾಗಿರುವಂತ ರೋಣೂರು ಮುರಳಿ ಭಟ್ಟರು ಅವರು ತಾಯಿನಾಡಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರ ಸ್ವಗ್ರಾಮವಾದ ರೋಣೂರಿನಲ್ಲಿ ಶ್ರೀನಿವಾಸಪುರದ ಮ್ಯಾಂಗೋಸ್ ಹೆವೆನ್ WATSSAP ತಂಡದ ಸದಸ್ಯರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಶ್ರೀನಿವಾಸಪುರ ತಾಲೂಕಿನ ರೋಣೂರಿನ ಸರ್ಕಾರಿ ಶಾಲೆಯಲ್ಲಿ 10 ನೇತರಗತಿ ವರಿಗೂ ಶ್ರೀನಿವಾಸಪುರದಲ್ಲಿ, ಪಿಯುಸಿ ಮುಗಿಸಿ ನಂತರ ಕೋಲಾರದಲ್ಲಿ ಪದವಿ ಮಾಡುವಾಗ ವೇದಭ್ಯಾಸದ ಬಗ್ಗೆ ಒಲವು ಬೆಳಸಿಕೊಂಡಿದ್ದ ಅವರು ರೋಣೂರಿನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಂಶಪಾರ್ಯಪರ್ಯವಾಗಿದ್ದ  ಅರ್ಚಕ ವೃತ್ತಿ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅಂಗ್ಲ ಪತ್ರಿಕೆಯೊಂದರಲ್ಲಿ  ಅಮೇರಿಕಾದಲ್ಲಿ ಸಹಾಯಕ ಅರ್ಚಕ ವೃತ್ತಿ ಕಾಲಿ ಇದೆ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂಬ ಪ್ರಕಟಣೆಯನ್ನು ನೋಡಿ ಅರ್ಜಿ ಸಲ್ಲಿಸಿದರು.  ನಂತರದಲ್ಲಿ ಅರ್ಜಿ ಸ್ವೀಕರಿಸಿರುವ ಬಗ್ಗೆ ಅಲ್ಲಿಂದ ಪತ್ರ ಬಂದು ಮುಂದಿನ ದಿನಗಳಲ್ಲಿ ನಿಮಗೆ ಮಾಹಿತಿ ತಿಳಿಸಲಾಗುವುದು ಎಂಬುದಾಗಿ ಬರದಿದ್ದು ನಂತರ ಒಂದು ವರ್ಷ ಆದ ಮೇಲೆ ಬಂದ ಕರೆಯ ಮೇರೆಗೆ ಅಮೇರಿಕಾಗೆ ತೆರಳಿದ ಅವರು ಅಲ್ಲಿಯೇ ಅರ್ಚಕ ವೃತ್ತಿ ಮಾಡಿಕೊಂಡು ಭಾರತೀಯ ಸಂಸ್ಕೃತಿ ಪರಂಪರೆ ಬಗ್ಗೆ ಹಾಗೂ ಸನಾತನ ಧರ್ಮದ ಬಗ್ಗೆ ಅಲ್ಲಿನ ಜನರಿಗೆ ಭೋದನೆ ಮಾಡಿಕೊಂದು ಇದ್ದಾರೆ.

ಸನ್ಮಾನ ಸಭೆಯಲ್ಲಿ ಮಾತನಾಡಿದ ಅವರು,  ಶಿಸ್ತುಬದ್ಧ ವ್ಯವಸ್ಥೆಯಲ್ಲಿ ಜನಸಾಮನ್ಯರು ಪ್ರಾಮಾಣಿಕವಾಗಿ ಜೀವನ ಮಾಡಬಹುದಾಗಿದ್ದು,  ಅಮೇರಿಕಾದಲ್ಲಿ ಸರ್ಕಾರದ ವತಿಯಿಂದ ಜನಸಾಮನ್ಯರಿಗೆ ಆಗಬೇಕಾದಂತ ಕೆಲಸ ಕಾರ್ಯಗಳಿಗೆ ಯಾವ ಶಿಫಾರಸ್ಸು ಅಥಾವ ಇನ್ಯಾವುದೇ ಒತ್ತಡ ಇರುವುದಿಲ್ಲ. ಅವರ ಅರ್ಹತೆ ಮತ್ತು ಆದ್ಯತೆಯ ಆಧಾರದ ಮೇಲೆ ಕೆಲಸ ಕಾರ್ಯಗಳನ್ನು ಮಾಡಿಕೊಡಲಾಗುತ್ತದೆ ಎಂದು ಅಮೇರಿಕಾದ ಆಡಳಿತ ವ್ಯವಸ್ಥೆ ಬಗ್ಗೆ ತಿಳಿಸಿಕೊಟ್ಟರು.

ನಾನು 25 ವರ್ಷಗಳ ಹಿಂದೆ ಅಮೇರಿಕಾಗೆ ಹೋದರು ನಾನು ಶ್ರೀನಿವಾಸಪುರದ ಮ್ಯಾಂಗೋಸ್ ಹೆವೆನ್ WATSAP ತಂಡದ ಸದಸ್ಯನಾಗಿ ಇಲ್ಲಿನ ವಿಚಾರಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ, ಇಂದು ತಂಡದಸ ಸದಸ್ಯರು ನನ್ನನ್ನು ಗುರುತಿಸಿ ಗೌರವ ಸನ್ಮಾನ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ ಎಂದರು. ಮ್ಯಾಂಗೋಸ್ ಹೆವನ್ ಗ್ರೂಪ್​​​ನಲ್ಲಿ ಕರ್ನಾಟಕದ ಸುದ್ದಿಗಳನ್ನು ಪಡೆಯಲು BP9 NEWS ಮತ್ತು ಇತರ ಮೂಲಗಳು ಸಹಕಾರಿಯಾಗಿವೆ ಎಂದರು.

ಇನ್ನು ರೋಣೂರು ಮುರಳಿಭಟ್ಟರೊಂದಿಗೆ ಅವರ ಶ್ರೀಮತಿ ನಾಗಲತ ಹಾಗು ಅವರ ಪುತ್ರ ಶಶಾಂಕ್,  ಪುತ್ರಿ ಅರ್ಶಿತಾ ಇದ್ದರು. ಮ್ಯಾಂಗೋಸ್ ಹೆವೆನ್ WATSAP ತಂಡದ ಆಡ್ಮಿನ್ ಚ.ಶ್ರೀನಿವಾಸ ಮೂರ್ತಿ, ಸದಸ್ಯರಾದ ಕಂಠೀರವ ಸ್ಟೂಡಿಯೋ ನಿರ್ದೇಶಕರೂ ಆದ  ಪೆದ್ದರೆಡ್ಡಿರಾಜೇಂದ್ರಪ್ರಸಾದ್, ಬೆಂಗಳೂರಿನ ಆರ್ಕಿಟೆಕ್ಟರ್ ಲಕ್ಷ್ಮೀಸಾಗರರಘು, ಸಿ.ಡಿ.ಪಿ.ಒ ಇಲಾಖೆಯ ನವೀನ್, ಭೂಮಂಜೂರಾತಿ ಸಮಿತಿ ಸದಸ್ಯ ರಮೇಶಬಾಬು,ವ್ಯಾಪರಸ್ಥ ಶ್ರೀರಾಮ್,ಅರ್ಚಕ ಶ್ರೀನಾಥಾಚಾರ್,ಉಪಾಧ್ಯಾಯ ರೋಣೂರಿನರೆಡ್ದಿ, ನಾಗದೇನಹಳ್ಳಿಚಂದ್ರ, ಮುಂತಾದವರು ಇದ್ದರು.

Please follow and like us:
0
http://bp9news.com/wp-content/uploads/2018/08/WhatsApp-Image-2018-08-08-at-2.36.39-PM-1024x487.jpeghttp://bp9news.com/wp-content/uploads/2018/08/WhatsApp-Image-2018-08-08-at-2.36.39-PM-150x150.jpegBP9 Bureauಕೋಲಾರಪ್ರಮುಖಕೋಲಾರ:  ವಿಶ್ವದಲ್ಲಿ ಭಾರತೀಯ ಸಂಸ್ಕೃತಿ ಆಚಾರ ವಿಚಾರ ಪಸರಿಸುತ್ತಿದೆ ಇದಕ್ಕೆ ಕಾರಣ ಭಾರತೀಯರು ವಿಶ್ವದೆಲ್ಲೆಡೆ ನೆಲೆಸುತ್ತಿರುವುದೆ ಪ್ರಮುಖ ಕಾರಣವಾಗಿದೆ.  ಆಮೇರಿಕಾದಂತ ದೇಶದಲ್ಲೂ ಭಾರತೀಯರು ದೊಡ್ದ ಸಂಖ್ಯೆಯಲ್ಲಿ ನೆಲೆಸಿದ್ದಾರೆ ಅವರೆಲ್ಲರೂ ಭಾರತೀಯ ಸಂಸ್ಕೃತಿ ಪರಂಪರೆ ಆಚಾರವನ್ನು ತಪ್ಪದೆ ತಮ್ಮ ಮಕ್ಕಳಿಗೆ ಕಲಿಸುವ ಮೂಲಕ ಭಾರತೀಯತೆಯನ್ನು ಉಳಿಸಿ ವಿಶ್ವಾದ್ಯಂತ ಹರಡುತ್ತಿದ್ದಾರೆ ಎಂದು ಭಾರತೀಯ ಮೂಲದ ಆಮೇರಿಕಾ ದೇಶದ ನಿವಾಸಿಯಾದ ಮುರಳಿ ಭಟ್ಟರು ಹೇಳಿದ್ದಾರೆ. var domain = (window.location != window.parent.location)? document.referrer...Kannada News Portal