ಕೋಲಾರ: ಚುನಾವಣೆಗಳಲ್ಲಿ ಗೆಲ್ಲುವುದಕ್ಕಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನನಗೆ ಮತ ನೀಡಿನ ಜನರ ಋಣ ತಿರಿಸಲಿಕ್ಕೆ ನಾನು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರುತ್ತೇನೆ.  ನನ್ನ ಆರೋಗ್ಯ ಖಾತೆಯಿಂದ ರಾಜ್ಯದ ಬಡವರಿಗೆ ವೈಧ್ಯಕೀಯ ಸೇವೆ ಸಿಗುವಂತ ಕಾರ್ಯ ಮಾಡಿರುತ್ತೇನೆ ಎಂದು ಆರೋಗ್ಯ ಸಚಿವ ರಮೇಶಕುಮಾರ್ ಹೇಳಿದರು.

ಅವರು ಶ್ರೀನಿವಾಸಪುರ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದರು ರೈತರ ಮತ್ತು ಗ್ರಾಮೀಣ ಭಾಗದ ಜನರಿಗೆ ವಿಧ್ಯುತ್ ತೊಂದರೆಯಾಗದ ರೀತಿಯಲ್ಲಿ ಟ್ರಾನ್ಸ್‍ಫಾರ್ಮರ್ ಬ್ಯಾಂಕನ್ನು ಸ್ಥಾಪಿಸಲಾಗಿದೆ ಕ್ಷೇತ್ರದ ಗ್ರಾಮದಲ್ಲಿಯೂ ಯಾವುದೇ ಕೊರತೆ ಇಲ್ಲದಂತೆ ಆಯಾ ಗ್ರಾಮಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ನೀಡಿರುವಂತ ಸಲಹೆ ಸೂಚೆನಗಳನ್ನು ಅನ್ವಯ  ಕೊರತೆ ನೀಗಿಸುವಂತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಲಾಗಿದೆ ಯಾವತ್ತು ಜಾತಿ, ಮತ, ಕುಲ, ಪಕ್ಷ ಬೇದವಿಲ್ಲದಂತೆ ಎಲ್ಲರನ್ನೂ ಸಮಾನರಾಗಿ ನೊಡಿದ್ದೇನೆ ಎಂದರು.

ಶಾಶ್ವತ ನೀರಾವರಿ ಯೋಜನೆಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಜಿಲ್ಲೆಯ ಕೆರೆಗಳಿಗೆ ನೀರು ಬರುವುದು ಶತಸಿದ್ದ. ಕುಡಿಯುವ ನೀರನ್ನು ನೀಡುವ ನನ್ನ ಮಾತಿಗೆ ಯಾವತ್ತಿಗೂ ಬದ್ದನಾಗಿರುತ್ತೇನೆ. ಇನ್ನು ಎರಡು ವರ್ಷಗಳಲ್ಲಿ ಎತ್ತಿನ ಹೊಳೆ ನೀರು ಹರಿಯಲಿದೆ. ಪಟ್ಟಣದಲ್ಲಿ ಜೋಡಿ ರಸ್ತೆಗಳ ನಿರ್ಮಾಣದಿಂದ ಪಟ್ಟಣಕ್ಕೆ ಹೊಸ ಮೆರಗನ್ನು ಬಂದಿದೆ ಬಸ್‍ನಿಲ್ದಾಣದ ವೃತ್ತದಲ್ಲಿ ಬೃಹತ್ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸುಸಜ್ಜಿತ ಹೈಟೆಕ್ ಹೊಸ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಹಳೆ ಸರ್ಕಾರಿ ಆಸ್ಪತ್ರೆಯ ಜಾಗದಲ್ಲಿ ನೂತನ ಬೃಹತ್ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಶಾಲೆಗಳ ಅಭಿವೃದ್ದಿಯಿಂದ ಪಲಿತಾಂಶ ಹೆಚ್ಚಳ: ತಾಲೂಕಿನಾಧ್ಯಂತ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿ ಸುಸಜ್ಜಿತ ವಿಜ್ಞಾನ ಪ್ರಯೋಗ ಶಾಲೆಗಳ ನಿರ್ಮಾಣದಿಂದ 2018ನೇ ಸಾಲಿನ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಪಲಿತಾಂಶದಲ್ಲಿ ರಾಜ್ಯದಲ್ಲಿಯೇ 2ನೇ ಸ್ಥಾನವನ್ನು ಗಳಿಸಿರುವುದು ಶಿಕ್ಷಕರ ಶ್ರಮದಿಂದ ಸಾಧ್ಯವಾಗಿರುವುದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನರೇಗ ಮತ್ತು ಶಾಸಕರ ನಿಧಿಯಿಂದ ಎಲ್ಲಾ ಶಾಲೆಗಳಿಗೆ ಕಾಂಪೌಂಡ್ ಮತ್ತು ಇತರೆ ದುರಸ್ತಿ ಕೆಲಸಗಳನ್ನು ಮಾಡಿಸಿ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದರು.

ಹರಿದು ಬಂದ ಜನಸಾಗರ: ಇಂದಿನ ರೋಡ್ ಶೋಗೆ ಬಾರಿ ಸಂಖ್ಯೆಯಲ್ಲಿ ಜನರ ಸೇರಿದ್ದು ಬಹುಶಃ ಶ್ರೀನಿವಾಸಪುರದಲ್ಲಿ  ಎಂದೂ ಕಂಡರಿಯದರಿತಿಯಲ್ಲಿತ್ತು   ರಮೇಶ್‍ಕುಮಾರ್ ರವರಿಗೆ ರಾಜ್ಯದ ಅಥವಾ ರಾಷ್ಟ್ರದ ಯಾವುದೇ ತಾರಾ ಪ್ರಚಾರಕರ ಇಲ್ಲದೆ ಜನ ಸಾಗರ ಇದದ್ದು ರಾಜಕೀಯ ವಲಯದಲ್ಲಿ ದೊಡ್ಡ ಸಚಿವ ರಮೇಶ್‍ಕುಮಾರ್ ದೊಡ್ದ ಆಕರ್ಷಣೆ ಅದರಲ್ಲೂ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದುದು ವಿಶೇಷವಾಗಿತ್ತು  ಬಾರಿ ಶಬ್ದದ ಸೌಂಡ್ ಸಿಸ್ಟಂ ಅಳವಡಿಕೆಯಿಂದ ಯುವಕರು ಹಾಡಿಗೆ ಹುಚ್ಚೆದ್ದು ಕುಣಿಯುತ್ತಿದ್ದರು   ಈ ಕಾರ್ಯಕ್ರಮಕ್ಕೆ ಸಂಸದ ಕೆ.ಹೆಚ್.ಮುನಿಯಪ್ಪ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಮಾಜಿಸದಸ್ಯ ನಜೀರ್‍ಅಹಮದ್ ಮತ್ತಿತರರು ಇದ್ದರು. ರೋಡ್ ಶೋ ಸಂದರ್ಭದಲ್ಲಿ ರಮೇಶ್ ಕುಮಾರ್ ಜೋತೆಗೆ ಸಂಪೂರ್ಣವಾಗಿ ಮುಳಬಾಗಿಲು ಶಾಸಕ ಕೊತ್ತೂರುಮಂಜು ಜೊತೆಯಾಗಿದ್ದು ವಿಶೇಷವಾಗಿತ್ತು.

ಕೊತ್ತೂರು ಮಂಜು ಶ್ರೀನಿವಾಸಪುರ ರಾಜಕೀಯಕ್ಕೆ ವಾರಸ್ದಾರ: ಕಾಂಗ್ರೆಸ್ ಪಕ್ಷದ ರೋಡ್ ಶೋ ಕಾರ್ಯಕ್ರಮದಲ್ಲಿ ರಮೇಶಕುಮಾರ್ ಅವರೊಂದಿಗೆ ತೆರೆದ ವಾಹನದಲ್ಲಿ ಸಂಪೂರ್ಣವಾಗಿ ಜೊತೆಗಿದ್ದ ಮುಳಬಾಗಿಲು ಶಾಸಕ ಕೊತ್ತೂರುಮಂಜುನಾಥ್ ಮುಂದಿನ ಚುನಾವಣೆಯಲ್ಲಿ ಶ್ರೀನಿವಾಸಪುರದ ಕ್ಷೇತ್ರದ ಅಬ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ ಇದರ ಮುನ್ಸೂಚನೆಯಂತೆ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕ್ಷೇತ್ರಕ್ಕೆ ಕಾಲಿಟ್ಟಿರುವುದಾಗೆ ಮಾತುಗಳು ಕೇಳಿಬರುತ್ತಿದೆ.

ವರದಿ: ಚ.ಶ್ರೀನಿವಾಸಮೂರ್ತಿ

 

 

Please follow and like us:
0
http://bp9news.com/wp-content/uploads/2018/05/10-1may18.jpghttp://bp9news.com/wp-content/uploads/2018/05/10-1may18-150x150.jpgBP9 Bureauಕೋಲಾರರಾಜಕೀಯಕೋಲಾರ: ಚುನಾವಣೆಗಳಲ್ಲಿ ಗೆಲ್ಲುವುದಕ್ಕಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನನಗೆ ಮತ ನೀಡಿನ ಜನರ ಋಣ ತಿರಿಸಲಿಕ್ಕೆ ನಾನು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರುತ್ತೇನೆ.  ನನ್ನ ಆರೋಗ್ಯ ಖಾತೆಯಿಂದ ರಾಜ್ಯದ ಬಡವರಿಗೆ ವೈಧ್ಯಕೀಯ ಸೇವೆ ಸಿಗುವಂತ ಕಾರ್ಯ ಮಾಡಿರುತ್ತೇನೆ ಎಂದು ಆರೋಗ್ಯ ಸಚಿವ ರಮೇಶಕುಮಾರ್ ಹೇಳಿದರು. ಅವರು ಶ್ರೀನಿವಾಸಪುರ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದರು ರೈತರ ಮತ್ತು ಗ್ರಾಮೀಣ ಭಾಗದ ಜನರಿಗೆ ವಿಧ್ಯುತ್ ತೊಂದರೆಯಾಗದ ರೀತಿಯಲ್ಲಿ ಟ್ರಾನ್ಸ್‍ಫಾರ್ಮರ್ ಬ್ಯಾಂಕನ್ನು...Kannada News Portal