ಕೋಲಾರ :  ಸಹಕಾರ ಬ್ಯಾಂಕನ್ನು ಮುಚ್ಚಬೇಕು ಎಂದು ಕೆಲವರು ಚುನಾವಣೆ ಸಂದರ್ಭದಲ್ಲಿ ಹೊರಟಿದ್ದವರಿಗೆ ಚುನಾವಣೆಯಲ್ಲಿ ಮಹಿಳಾ ಸ್ವಸಾಹಾಯ ಸಂಘದ ಸದಸ್ಯರು ಉತ್ತಮ ನಿರ್ಧಾರ ಕೈಗೊಂಡು ಸರಿಯಾದ ಪಾಠ ಕಲಿಸಿದ್ದೀರಾ ಎಂದು ವಿಧಾನಸಭಾ ಅಧ್ಯಕ್ಷ ರಮೇಶಕುಮಾರ್ ಹೇಳಿದರು.  ಅವರು ಇಂದು ಶ್ರೀನಿವಾಸಪುರದಲ್ಲಿ ಕೋಲಾರ-ಚಿಕ್ಕಬಳ್ಳಾಪುರ  ಜಿಲ್ಲಾ ಸಹಕಾರ ಬ್ಯಾಂಕಿನ ವತಿಯಿಂದ ಮಹಿಳಾ ಸ್ವಸಾಹಾಯ ಸಂಘಗಳಿಗೆ ಎರಡನೆ ಹಂತದ ಸಾಲ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳಾ ಸಂಘಗಳ ಸದಸ್ಯರಿಗೆ ಸಾಲ ನೀಡುವಾಗ ಪಕ್ಷ, ಜಾತಿ ಮತ್ತು ಧರ್ಮ ಊರು ನೋಡಿ ಸಾಲ ಕೊಡಲಿಲ್ಲ ಹಾಗೆ ನೀವು ನನ್ನನ್ನು ಚುನಾವಣೆಯಲ್ಲಿ ನನಗೆ ತಾಯಿಯಾಗಿ ಸಹೋದರಿಯರಾಗಿ ಮಗಳಾಗಿ ಮತ್ತೊಮ್ಮೆ ಅಧಿಕಾರ ಕೊಡುತ್ತೀರಾ…?  ಇದುವರೆಗೂ ಕೇವಲ 50 ಸಾವಿರ ಸಾಲ ನೀಡುತ್ತಿದ್ದ ನಿಮಗೆ 1 ಲಕ್ಷದವರಿಗೂ ಸಾಲ ನೀಡುವಷ್ಟು ಶಕ್ತಿ ತುಂಬಿದ್ದೀರಾ   ಎಂದ ಅವರು ಈಗ ಯಾವುದೇ ಚುನಾವಣೆಗಳು ಇಲ್ಲ ಆದರೂ ಪ್ರಕಟಿಸುತ್ತಿದ್ದೇನೆ.  ಮುಂದಿನ ದಿನಗಳಲ್ಲಿ ಯಾವುದೆ ಬಡ್ಡಿ ಇಲ್ಲದೆ 1 ಲಕ್ಷದವರಿಗೂ ಸಾಲ ನೀಡುತ್ತೇವೆ ಎಂದರು.ಇದರ ಜೊತೆಗೆ ಸಣ್ಣಪುಟ್ಟ ವ್ಯಾಪಾರ ಮಾಡುವಂತ ಬೀದಿ ಬದಿ ಹಾಗು ಸಂತೆಗಳಲ್ಲಿ ಹಾಗು ತರಕಾರಿ ಹೂವು ಹಣ್ಣು ಅಂಗಡಿ ಇಟ್ಟುಕೊಂಡು ವ್ಯಾಪಾರ  ಮಾಡುವಂತ ಮತ್ತು ವಿಕಲ ಚೇತನ ವ್ಯಾಪರಸ್ಥರಿಗೂ ಸಣ್ಣಮಟ್ಟದ ಸಾಲ ನೀಡುವ ಬಗ್ಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರ ಬಳಿ ಚರ್ಚಿಸಿರುವುದಾಗಿ ಹೇಳಿದರು.

ನನ್ನ ಅಭಿವೃದ್ಧಿಯ ಬಗ್ಗೆ ಚರ್ಚಿಸಿದವರಿಗೆ ಈಗಾಗಲೆ ಉತ್ತರ ಸಿಕ್ಕಿದೆ ಆದರು ನಿಮ್ಮ ಆಶೀರ್ವಾದದಿಂದ ಚುನಾಯಿತನಾದ ನಾನು ಕೆಲವೊಂದು ನಿಮ್ಮ ಮುಂದೆ ಹೇಳಲೆಬೇಕಾದ ಅನಿವಾರ್ಯತೆ ಇದೆ ಎಂದ ಅವರು ನಾನು ಆರೋಗ್ಯ ಮಂತ್ರಿಯಾಗಿದ್ದಾಗ ಜಾರಿಗೆ ತರಲು ಯತ್ನಿಸಿದ ಆರೋಗ್ಯ ವಿಮೆ ಯೋಜನೆಯನ್ನು ಕೇಂದ್ರದ ಮೋದಿ ಸರ್ಕಾರದ ಮಂತ್ರಿಗಳು ಹಾಗು ಅಧಿಕಾರಿಗಳೇ ಹೊಗಳಿದ್ದಾರೆ.  ಇದಕ್ಕೆ ಇಲ್ಲಿನ ಜನತೆ ನಾನಾ ರೀತಿಯಾಗಿ ಅಡ್ಡಿ ಪಡಿಸಿದರು. ಇನ್ನೂ ನೀರು ತರಲು ಹೋರಟರೆ ಸತ್ತ ಹಾವು ಕಪ್ಪೆಗಳನ್ನು ಕೆ.ಸಿ ವ್ಯಾಲಿ ಕಾಲುವೆಯಲ್ಲಿ ಹಾಕಿ ಅದಕ್ಕೂ ಅಡ್ಡಿಪಡಿಸಲು ಯತ್ನಿಸಿದರಲ್ಲದೆ ಜನರನ್ನು ಗೊಂದಲಕ್ಕೆ ಈಡು ಮಾಡಿದರು ಎಂದು ಆಕ್ರೋಶಬರಿತರಾಗಿ ನುಡಿದ ಅವರು ನಾನು ನನ್ನ ಸ್ವಂತ ಪ್ರಯೋಜನಕ್ಕೆ ನೀರು ತರಲಿಲ್ಲ, ಕ್ಷೇತ್ರದ ಜನರಿಗೆ ಮನೆಗಳನ್ನು ತಂದಾಗಲು ಇಂತಹದೆ ಗೊಂದಲ ಸೃಷ್ಠಿಸಿದರು, ಮಹಿಳಾ ಸ್ವಸಾಹಾಯ ಸಂಘದ ಸದಸ್ಯರಿಗೆ ಸಾಲ ಕಟ್ಟಬೇಡಿ ಎಂದು ದಾರಿತಪ್ಪಿಸಿವ ಜನರು ಸರ್ವ ನಾಶ ಆಗಿಹೋಗುತ್ತಾರೆ ಎಂದು ಸಭೆಯಲ್ಲಿ ಶಾಪ ಹಾಕಿದರು.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ ಮಹಿಳಾ ಸಂಘದ ಸದಸ್ಯರಿಗೆ ಸಾಲ ನೀಡುವುದೇ  ಅಪರಾಧ ಎಂದು ಎನ್ನುವರು ಇಂದು ಏನಾಗಿದ್ದಾರೆ,  ನನ್ನ ಹಾಗು ಬ್ಯಾಂಕಿನ ವಿರುದ್ದ ಆರೋಪ ಮಾಡಿದಲ್ಲದೆ ಸರ್ಕಾರದ ಮಟ್ಟದಲ್ಲಿ ಅರ್ಜಿಗಳನ್ನು ಕೊಟ್ಟವರ ಪರಿಸ್ಥಿತಿ ಏನಾಗಿದೆ ಇದರ ಅರಿವು ಅವರಿಗಿದಿಯಾ ಎಂದರು.  ಸಹಕಾರ ಬ್ಯಾಂಕ್ ಬಡವರ ಬ್ಯಾಂಕ್ ಇಲ್ಲಿ ಸಾಲ ಪಡಿಯುತ್ತಿರುವರೆಲ್ಲ ಬಡವರೆ ಇವತ್ತು ಬ್ಯಾಂಕ್ ಇಷ್ಟೆಲ್ಲಾ ವ್ಯವಹಾರ ನಡಸುತ್ತಿದೆ ಎಂದರೆ ಅದಕ್ಕೆ ಸ್ಪೀಕರ್ ರಮೇಶಕುಮಾರ್ ಅವರೆ ಕಾರಣ. ರಮೇಶ್​  ಕುಮಾರ್​  ಅವರು ಶಕ್ತಿ ತುಂಬಿ ಸಹಾಯ ಮತ್ತು ಸಹಕಾರ ದಿಂದ ಬ್ಯಾಂಕಿನ ವ್ಯವಹಾರ ನಡೆಯುತ್ತಿದೆ. ಇನ್ನಷ್ಟು ಉತ್ತಮವಾಗಿ ಬ್ಯಾಂಕ್ ಬೆಳೆಯಲು ಸಾಲ ಪಡೆದಿರುವಂತ ಮಹಿಳಾ ಸಂಘದ ಸದಸ್ಯರು ಸಹಕಾರ ನೀಡುವಂತೆ ಕರೆ ಇತ್ತರು. ಕಾರ್ಯಕ್ರಮದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಮಣಿಗಾನಹಳ್ಳಿ ವೆಂಕಟರೆಡ್ಡಿ,ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್,ಪೆದ್ದರೆಡ್ಡಿರಾಜೇಂದ್ರಪ್ರಸಾದ್,ಕಲ್ಲೂರುಮಂಜು ರೋಣೂರುಚಂದ್ರು, ಕುಂಬಾರವೇಣು,ಕಲ್ಲೂರುಬೈರೆಡ್ಡಿ ಮುಂತಾದವರು ಇದ್ದರು.

Please follow and like us:
0
http://bp9news.com/wp-content/uploads/2018/09/WhatsApp-Image-2018-09-17-at-4.15.47-PM-1024x473.jpeghttp://bp9news.com/wp-content/uploads/2018/09/WhatsApp-Image-2018-09-17-at-4.15.47-PM-150x150.jpegBP9 Bureauಕೋಲಾರಪ್ರಮುಖರಾಜಕೀಯಕೋಲಾರ :  ಸಹಕಾರ ಬ್ಯಾಂಕನ್ನು ಮುಚ್ಚಬೇಕು ಎಂದು ಕೆಲವರು ಚುನಾವಣೆ ಸಂದರ್ಭದಲ್ಲಿ ಹೊರಟಿದ್ದವರಿಗೆ ಚುನಾವಣೆಯಲ್ಲಿ ಮಹಿಳಾ ಸ್ವಸಾಹಾಯ ಸಂಘದ ಸದಸ್ಯರು ಉತ್ತಮ ನಿರ್ಧಾರ ಕೈಗೊಂಡು ಸರಿಯಾದ ಪಾಠ ಕಲಿಸಿದ್ದೀರಾ ಎಂದು ವಿಧಾನಸಭಾ ಅಧ್ಯಕ್ಷ ರಮೇಶಕುಮಾರ್ ಹೇಳಿದರು.  ಅವರು ಇಂದು ಶ್ರೀನಿವಾಸಪುರದಲ್ಲಿ ಕೋಲಾರ-ಚಿಕ್ಕಬಳ್ಳಾಪುರ  ಜಿಲ್ಲಾ ಸಹಕಾರ ಬ್ಯಾಂಕಿನ ವತಿಯಿಂದ ಮಹಿಳಾ ಸ್ವಸಾಹಾಯ ಸಂಘಗಳಿಗೆ ಎರಡನೆ ಹಂತದ ಸಾಲ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳಾ ಸಂಘಗಳ ಸದಸ್ಯರಿಗೆ ಸಾಲ ನೀಡುವಾಗ...Kannada News Portal