ಕೋಲಾರ: ಶ್ರೀನಿವಾಸಪುರ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ರವರಿಗೆ ಈ ಚುನಾವಣೆಯಲ್ಲಿ ಮತದಾರರ ಒಲವು ಇರುವುದನ್ನು ಕಂಡು ಬೆಚ್ಚಿಬಿದ್ದಿರುವ ಕಾಂಗ್ರೆಸ್ ಮುಖಂಡರು ಶ್ರೀನಿವಾಸಪುರದಲ್ಲಿ ನಡೆಸಿದ ರೋಡ್ ಶೋಗೆ ನೆರೆಯ ಆಂಧ್ರಪ್ರದೇಶದಿಂದ ಮತ್ತು ಮುಳಬಾಗಿಲು ಹಾಗು ಇತರೆ ತಾಲೂಕುಗಳಿಂದ ಜನರನ್ನು ಶ್ರೀನಿವಾಸಪುರ ಪಟ್ಟಣಕ್ಕೆ ಕರೆತಂದು ಶಕ್ತಿ ಪ್ರದರ್ಶನ ಮಾಡಿರುವುದು ಕಾಂಗ್ರೆಸ್‍ನ ಅಭ್ಯರ್ಥಿ ಸಚಿವ  ರಮೇಶ್‍ಕುಮಾರ್ ಅವರಿಗೆ ಸೋಲಿನ ಭೀತಿ ಕಾಡಲು ಶುರುವಾಗಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದರು.

ಶ್ರೀನಿವಾಸಪುರ ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಮುಖಂಡ ಭೀಮಗುಂಟಪಲ್ಲಿಶಿವಾರೆಡ್ಡಿ ಕಳೆದ 40ವರ್ಷಗಳಿಂದ ಈ ಕ್ಷೇತ್ರದಲ್ಲಿ ಒಮ್ಮೆ ರೆಡ್ಡಿ ಮತ್ತೊಮ್ಮೆ ಸ್ವಾಮಿ ಎಂಬಂತೆ ಜನರು ತೀರ್ಮಾನಿಸಿದ್ದಾರೆ. ಈ ಭಾರಿ ನಡೆಯುತ್ತಿರುವ ಚುನಾವಣೆಯಲ್ಲಿ ರಾಜ್ಯಾಧ್ಯಂತ ಜೆಡಿಎಸ್ ಅಲೆ ಬೀಸುತ್ತಿದ್ದು ಶ್ರೀನಿವಾಸಪುರ ಕ್ಷೇತ್ರದಲ್ಲಿ ವೆಂಕಟಶಿವಾರೆಡ್ಡಿ ರವರ ಕೊರಳಿಗೆ ವಿಜಯಮಾಲೆ ಬೀಳುವ ಕಾಲ ಸನ್ನಿಹಿತವಾಗಿದೆ. ಇದುವರೆಗಿನ ದಾಖಲೆಗಳಿಂತ ಅತಿ ಹೆಚ್ಚು ಮತ ಪಡೆಯುವ ಮೂಲಕ ರೆಡ್ಡಿ ಹೊಸ ದಾಖಲೆಯನ್ನು ಬರೆಯಲಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಇತರೆ ಪಕ್ಷಗಳಿಂದ ನೂರಾರು ಮುಖಂಡರು ಸೇರ್ಪಡೆಯಾಗಿದ್ದಾರೆ. ಕೆಲುವು ಭಾಗಗಳಲ್ಲಿ ಇಡೀ ಗ್ರಾಮಗಳೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಒಂದು ಐತಿಹಾಸಿಕವಾಗಿ ನಿರ್ಣಯಕ್ಕೆ ದಾಖಲೆಯಾಗಲಿದೆ ಇದನ್ನು ಮನಗಂಡ ಕಾಂಗ್ರೆಸ್ ಅಭ್ಯರ್ಥಿ ಸಚಿವ ರಮೇಶ್‍ಕುಮಾರ್ ಮತ್ತು ಅವರ ಬೆಂಬಲಿಗರು ವಾಮ ಮಾರ್ಗದಿಂದಲಾದರೂ ಹಣ ನೀಡಿ ಅಪಾರ ಜನರನ್ನು ಪಟ್ಟಣಕ್ಕೆ ಕರೆತಂದು ರೋಡ್ ಶೋ ನಡೆಸುವುದರ ಮೂಲಕ ಜನರನ್ನು ಮರಳು ಮಾಡಿ ಜನಮನ್ನಣೆ ಗಳಿಸಬಹುದು  ಎಂಬುದು ಹಾಸ್ಯಾಸ್ಪದವಾಗಿದೆ ಎಂದರು.

ಜೆಡಿಎಸ್ ಮುಖಂಡ ಇಂದಿರಾಭವನ್ ರಾಜಣ್ಣ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುವ ಸಂದರ್ಭದಲ್ಲಿ ರಮೇಶ್‍ಕುಮಾರ್ ಸೇರಿದಂತೆ ಮೂರು ಜನ ಮಾತ್ರ ತೆರಳಿ ನಾಮಪತ್ರ ಸಲ್ಲಿಸಿ ಇದನ್ನೆ ಬಂಡವಾಳವಾಗಿಸಿಕೊಂಡು ನಾನು ಸರಳ ಜೀವಿ ಎಂಬ ಸೋಗಲಾಡಿತನ ಪ್ರದರ್ಶನ ಮಾಡಿದ ವ್ಯಕ್ತಿ ನಿಜವಾದ ದರ್ಶನ ರೋಡ್ ಶೋ ನಲ್ಲಿ ಆಗಿದೆ ಎಂದರು. ಆಂದ್ರದ ಕೊತ್ತಕೋಟ, ಮುಳಬಾಗಿಲು ತಾಲೂಕಿನ ವಿವಿಧ ಭಾಗಗಳಿಂದ ಹಣ ಕೊಟ್ಟು ಜನರನ್ನು ಕರೆತಂದು ರೋಡ್ ಶೋ ನಡೆಸುವುದರ ಅಗತ್ಯತತೆ ಏನಿತ್ತು. ರಮೇಶ್‍ಕುಮಾರ್ ರವರ ರಾಜಕೀಯ ಜೀವನದಲ್ಲಿ ಅವರು ಎಂದೂ ನುಡಿದಂತೆ ನಡೆದವರಲ್ಲ. ಜನರ ಮುಂದೆ ಆಗಾಗ ಮೊಸಳೆ ಕಣ್ಣಿರು ಸುರಿಸಿ ಭಾವುಕತನ ಪ್ರದರ್ಶನ ಮಾಡುತ್ತ ಕ್ಷೇತ್ರದ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಮುಖಂಡ ವಕೀಲ ಕೆ.ಶಿವಪ್ಪ ಮಾತನಾಡಿ ಜೆಡಿಎಸ್ ಪಕ್ಷದ ಜನತೆಯ ಮನಸ್ಸನ್ನು ಅಧೈರ್ಯ ಪಡಿಸುವ ನಿಟ್ಟಿನಲ್ಲಿ ಸಚಿವ ರಮೇಶ್‍ಕುಮಾರ್ ಹೊರಗಡೆಯಿಂದ ಜನರನ್ನು ಕರೆತಂದು ಚುನಾವಣಾ  ಪ್ರಚಾರದಲ್ಲಿ ತಮ್ಮ ಜನ ಬಲವನ್ನು ಪ್ರದರ್ಶಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರ ಮಾಡುವುದು ಪ್ರತಿಯೊಬ್ಬರ ಹಕ್ಕು ಇದಕ್ಕೆ ಯಾವುದೆ ವಿರೋಧವಿಲ್ಲ. ಆದರೆ ನಿಮ್ಮ ರ್ಯಾಲಿಯಲ್ಲಿ ಜನ ಶಕ್ತಿಯನ್ನು ತೋರಿಸಲು ಮದನಪಲ್ಲಿ, ಮುಳಬಾಗಿಲಿನ ಒಡ್ಡಹಳ್ಳಿ, ಮೇಲಾಗಾಣಿ ಇನ್ನಿತರೆ ಭಾಗಗಳಿಂದ ಹಣ ನೀಡಿ ಸಂಖ್ಯಾಬಲವನ್ನು ತೋರಿಸಿಕೊಂಡು ಪ್ರಚಾರ ಮಾಡಿರುವುದು ಖಂಡನೀಯವಾಗಿದೆ. ಈ ಕ್ಷೇತ್ರದ ಮತದಾರರಲ್ಲದ ಜನರನ್ನು ಸಾವಿರಾರು ಸಂಖ್ಯೆಯಲ್ಲಿ ಯಾವ ಕಾರಣಕ್ಕೆ ಕರೆಸಿಕೊಂಡಿದ್ದೀರ ಎಂದು ಪ್ರೆಶ್ನಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಸೂರ್ಯನಾರಾಯಣ, ಜೆಡಿಎಸ್ ಮುಖಂಡರಾದ ಅಥಾವುಲ್ಲಾಖಾನ್, ಪೂಲು ಶಿವಾರೆಡ್ಡಿ, ಸಂತೋಷ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ವರದಿ:ಚ.ಶ್ರೀನಿವಾಸಮೂರ್ತಿ

 

Please follow and like us:
0
http://bp9news.com/wp-content/uploads/2018/05/10-2may18-1-1024x674.jpghttp://bp9news.com/wp-content/uploads/2018/05/10-2may18-1-150x150.jpgBP9 Bureauಕೋಲಾರಪ್ರಮುಖರಾಜಕೀಯಕೋಲಾರ: ಶ್ರೀನಿವಾಸಪುರ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ರವರಿಗೆ ಈ ಚುನಾವಣೆಯಲ್ಲಿ ಮತದಾರರ ಒಲವು ಇರುವುದನ್ನು ಕಂಡು ಬೆಚ್ಚಿಬಿದ್ದಿರುವ ಕಾಂಗ್ರೆಸ್ ಮುಖಂಡರು ಶ್ರೀನಿವಾಸಪುರದಲ್ಲಿ ನಡೆಸಿದ ರೋಡ್ ಶೋಗೆ ನೆರೆಯ ಆಂಧ್ರಪ್ರದೇಶದಿಂದ ಮತ್ತು ಮುಳಬಾಗಿಲು ಹಾಗು ಇತರೆ ತಾಲೂಕುಗಳಿಂದ ಜನರನ್ನು ಶ್ರೀನಿವಾಸಪುರ ಪಟ್ಟಣಕ್ಕೆ ಕರೆತಂದು ಶಕ್ತಿ ಪ್ರದರ್ಶನ ಮಾಡಿರುವುದು ಕಾಂಗ್ರೆಸ್‍ನ ಅಭ್ಯರ್ಥಿ ಸಚಿವ  ರಮೇಶ್‍ಕುಮಾರ್ ಅವರಿಗೆ ಸೋಲಿನ ಭೀತಿ ಕಾಡಲು ಶುರುವಾಗಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದರು. ಶ್ರೀನಿವಾಸಪುರ ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ...Kannada News Portal