ಕೋಲಾರ :ಕಾಂಗ್ರೆಸ್​ನ ಸಚಿವ ರಮೇಶ್ ಕುಮಾರ್ ಪರಮಾಪ್ತ ಇಮರಕುಂಟೆ ಮಾರುತಿರೆಡ್ಡಿ ಜೆಡಿಎಸ್​​​ ಸೇರ್ಪಡೆಗೊಂಡಿದ್ದಾರೆ.

ಶ್ರೀನಿವಾಸಪುರ ತಾಲೂಕಿನ  ಕಾಂಗ್ರೆಸ್ ಪಕ್ಷದ ಯುವಮುಖಂಡ, ಹೈಕೋರ್ಟ್ ವಕೀಲ, ಸಚಿವ ರಮೇಶ್ ಕುಮಾರ್ ಪರಮಾಪ್ತ ಇಮರಕುಂಟೆ ಮಾರುತಿರೆಡ್ಡಿ ಕಾಂಗ್ರೆಸ್ ತೋರೆದು JDS ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆಗೊಂಡರು.

ನಂತರ ಮಾತನಾಡಿದ ಮಾರುತಿರೆಡ್ಡಿ, ಹಲವಾರು ವರ್ಷಗಳಿಂದ ರಮೇಶ್ ಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದೆ, ಅಲ್ಲಿ ಎಲ್ಲವೂ ಸರಿ ಇಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದಿರುವುದಾಗಿ ಹೇಳಿದರು.  ರಾಜ್ಯ ರಾಜಕೀಯದಲ್ಲಿ ಹೊಸ ಬದಲಾವಣೆ ಕಾಣಬೇಕಾದರೆ ಕುಮಾರಸ್ವಾಮಿ ಮುಖ್ಯ ಮಂತ್ರಿ ಯಾಗಲೇ ಬೇಕು ಎಂದು ಹೇಳಿದರು. ಇನ್ನು ಮಾರುತಿರೆಡ್ಡಿ JDS ಸೇರ್ಪಡೆಯಾದ ಬೆನ್ನಲ್ಲೇ ಅವರನ್ನು ರಾಜ್ಯ JDS ಕಾನೂನು ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಿ ಪಕ್ಷ ಆದೇಶ ನೀಡಿದೆ.

Please follow and like us:
0
http://bp9news.com/wp-content/uploads/2018/04/WhatsApp-Image-2018-04-30-at-11.19.02-AM-576x1024.jpeghttp://bp9news.com/wp-content/uploads/2018/04/WhatsApp-Image-2018-04-30-at-11.19.02-AM-e1525074627218-150x150.jpegBP9 Bureauಕೋಲಾರರಾಜಕೀಯಕೋಲಾರ :ಕಾಂಗ್ರೆಸ್​ನ ಸಚಿವ ರಮೇಶ್ ಕುಮಾರ್ ಪರಮಾಪ್ತ ಇಮರಕುಂಟೆ ಮಾರುತಿರೆಡ್ಡಿ ಜೆಡಿಎಸ್​​​ ಸೇರ್ಪಡೆಗೊಂಡಿದ್ದಾರೆ. ಶ್ರೀನಿವಾಸಪುರ ತಾಲೂಕಿನ  ಕಾಂಗ್ರೆಸ್ ಪಕ್ಷದ ಯುವಮುಖಂಡ, ಹೈಕೋರ್ಟ್ ವಕೀಲ, ಸಚಿವ ರಮೇಶ್ ಕುಮಾರ್ ಪರಮಾಪ್ತ ಇಮರಕುಂಟೆ ಮಾರುತಿರೆಡ್ಡಿ ಕಾಂಗ್ರೆಸ್ ತೋರೆದು JDS ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆಗೊಂಡರು. ನಂತರ ಮಾತನಾಡಿದ ಮಾರುತಿರೆಡ್ಡಿ, ಹಲವಾರು ವರ್ಷಗಳಿಂದ ರಮೇಶ್ ಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದೆ, ಅಲ್ಲಿ ಎಲ್ಲವೂ...Kannada News Portal