ಕೋಲಾರ: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವಂತ  ಕರ್ನಾಟಕದ ಕೋಲಾರದ ಜಿಲ್ಲೆಯ ಜನತೆ ದೇವರ ಛಾಯಾ ಚಿತ್ರಗಳನ್ನು ನೋಡಿರದ ಕಾಲದಲ್ಲಿ ತೆಲುಗು ಮಾಹಾ ನಟ ರಾಮರಾವ್ ನಟಸಿರುವಂತ ದೇವರ ಚಿತ್ರಗಳಲ್ಲಿನ ಅವರ ಪಾತ್ರಗಳನ್ನು ನೋಡಿಕೊಂಡೆ ದೇವರನ್ನು ಉಹಿಸಿಕೊಂಡಿದ್ದರು, ಅಂತಹ ಮಹಾನ್ ನಟ N.T. ರಾಮರಾವ್ ಅವರ ಮಕ್ಕಳು ಸಹ ಉತ್ತಮ ನಟರಾಗಿ ಸಮಾಜಕ್ಕೆ ಉತ್ತಮ ಚಿತ್ರಗಳನ್ನು ನೀಡಿದ್ದಾರೆ ಎಂದು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲಆಶೋಕ್ ಹೇಳಿದರು. ಅವರು ಶ್ರೀನಿವಾಸಪುರ ಪಟ್ಟಣದ ಸಂಗೀತ ಚಿತ್ರಮಂದಿರದ ಆವರಣದಲ್ಲಿ ಇತ್ತೀಚೆಗೆ  ಅಪಘಾತದಲ್ಲಿ ಮೃತಪಟ್ಟ ಎನ್ ಟಿ ಆರ್ ಮಗ ಹರಿಕೃಷ್ಣ ಅವರಿಗೆ ಶ್ರೀನಿವಾಸಪುರ ತಾಲೂಕು ನಂದಮೂರಿ ಕುಟುಂಬದ ಅಭಿಮಾನಿಗಳು ಏರ್ಪಡಿಸಿದ್ದ ಅಶ್ರುತರ್ಪಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಂದಮೂರಿ ಕುಟುಂಬದ ಸದಸ್ಯರು ನಟಸಿರುವ ಚಿತ್ರಗಳಿಂದ ಪ್ರೇರಿತರಾಗಿ ಅದೇಷ್ಟೊ ಕುಟುಂಬಗಳು ಸಾಮಾಜಿಕವಾಗಿ ಆರ್ಥಿಕವಾಗಿ ಉತ್ತಮವಾಗಿ ಬಾಳ್ವೆ ನಡೆಸಲು ಸಹಕಾರಿಯಾಗಿದೆ ಎಂದರು ಆದರೆ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಹರಿಕೃಷ್ಣ ಸಾವು ನಂದಮೂರಿ ಕುಟುಂಬದ ಅಭಿಮಾನಿಗಳಿಗೆ ತಡೆಯಲಾರದ ನೋವು. ಈ ಅಪಘಾತದಿಂದ ಸಮಾಜಕ್ಕೆ ಮತ್ತೊಂದು ಸಂದೇಶ ಇದೆ ಯಾವುದೆ ಕಾರಣಕ್ಕೂ ಯಾರೇ ಆಗಲಿ ಅತಿಯಾದ ವೇಗದಿಂದ ವಾಹನ ಚಲಾಯಿಸಬಾರದು ಮತ್ತು ಸಾರಿಗೆ ಇಲಾಖೆ ನಿಯಮಾವಳಿಗಳಂತೆ ವಾಹನ ಚಲಾಯಿಸುವಾಗ ಸೀಟು ಬೆಲ್ಟ್ ಧರಿಸಬೇಕು, ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಾಗುತ್ತದೆ. ಇದರಿಂದಾಗಿ ಸವಾರರು ಸುರಕ್ಷಿತವಾಗಿ ತಲುಪಲು ಸಹಕಾರಿಯಾಗುತ್ತದೆ ಇದಕ್ಕಾಗಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ. ಇದಕ್ಕಾಗಿ ಸಾರ್ವಜನಿಕರು ಸರ್ಕಾರಿ ಅಧಿಕಾರಿಗಳ ನಿಯಾಮಾವಳಿಗಳಿಗೆ ಸ್ಪಂದಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ವೇಣು, ಶಿವರಾಜ್, ಪೊಲೀಸ್ ರಾಮಚಂದ್ರ, ರೋಣೂರುಚಂದ್ರು, ಆಂದ್ರಪ್ರದೇಶದ ಹೋಟೆಲ್ ಉದ್ಯಮಿ ಮದನ್, ಹರ್ಷಿಣೀ ಮೊಬಲ್ಸ್ ಮಂಜು, ದಿಂಬಾಲವೆಂಕಟಾದ್ರಿ ಸೋಮು,ಚಂದ್ರಾಚಾರಿ, ಹರಿಶ್ ಯಾದವ್, ಶೇಖರ್,ಟೈಲರ್ ವೇಣು,ವೇದಾಂತ್ ಶಾಸ್ತ್ರಿ ಮತ್ತು ಹಮಾಲಿ ಸಂಘದ ಮುಖಂಡ ಮೂರ್ತಿ ಮುಂತಾದವರು ಇದ್ದರು. ಇನ್ನು ಸಂದರ್ಭದಲ್ಲಿ ಅನ್ನದಾನ ಕೂಡ ಏರ್ಪಡಿಸಲಾಗಿತ್ತು.

ವರದಿ: ಚ.ಶ್ರೀನಿವಾಸಮೂರ್ತಿ

Please follow and like us:
0
http://bp9news.com/wp-content/uploads/2018/09/WhatsApp-Image-2018-09-08-at-3.31.01-PM.jpeghttp://bp9news.com/wp-content/uploads/2018/09/WhatsApp-Image-2018-09-08-at-3.31.01-PM-150x150.jpegBP9 Bureauಕೋಲಾರಪ್ರಮುಖಕೋಲಾರ: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವಂತ  ಕರ್ನಾಟಕದ ಕೋಲಾರದ ಜಿಲ್ಲೆಯ ಜನತೆ ದೇವರ ಛಾಯಾ ಚಿತ್ರಗಳನ್ನು ನೋಡಿರದ ಕಾಲದಲ್ಲಿ ತೆಲುಗು ಮಾಹಾ ನಟ ರಾಮರಾವ್ ನಟಸಿರುವಂತ ದೇವರ ಚಿತ್ರಗಳಲ್ಲಿನ ಅವರ ಪಾತ್ರಗಳನ್ನು ನೋಡಿಕೊಂಡೆ ದೇವರನ್ನು ಉಹಿಸಿಕೊಂಡಿದ್ದರು, ಅಂತಹ ಮಹಾನ್ ನಟ N.T. ರಾಮರಾವ್ ಅವರ ಮಕ್ಕಳು ಸಹ ಉತ್ತಮ ನಟರಾಗಿ ಸಮಾಜಕ್ಕೆ ಉತ್ತಮ ಚಿತ್ರಗಳನ್ನು ನೀಡಿದ್ದಾರೆ ಎಂದು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲಆಶೋಕ್ ಹೇಳಿದರು. ಅವರು ಶ್ರೀನಿವಾಸಪುರ...Kannada News Portal