ಬೆಂಗಳೂರು : ಕೊತ್ತನೂರು ಮಂಜುನಾಥ್​ ನಾಮಪತ್ರ ತಿರಸ್ಕೃತಗೊಂಡಿದ್ದು, ಈಗ ಕಣದಲ್ಲಿ ನಂದಿನಿ ಕಾಂಗ್ರೆಸ್​​​ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ.

ಮುಳಬಾಗಲು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಕೊತ್ತನೂರು ಮಂಜುನಾಥ್ ನಾಮಪತ್ರಸ ಲ್ಲಿಸದ್ದರು, ಆದರೆ ನಕಲಿ ಜಾತಿ ಪ್ರಮಾಣ ಪತ್ರ ಎಂದು ಚುನಾವಣಾಧಿಕಾರಿಗಳಿಗೆ  ದೃಢಪಟ್ಟ ಹಿನ್ನಲೆಯಲ್ಲಿ ನಾಮಪತ್ರ ತಿರಸ್ಕೃತ ಗೊಂಡಿತು. ಆಚ್ಚರಿಯ ಸಂಗತಿ ಎಂದರೆ ಅಲ್ಲಿ ಕಾಂಗ್ರೆಸ್​​ ಸಂಸದ ಮುನಿಯಪ್ಪ ಅವರ ಪುತ್ರಿ ನಂದಿನಿ ಪಕ್ಷೇತರಾಗಿ ನಾಮಪತ್ರ ಸಲ್ಲಿದ್ದರು. ಮಂಜುನಾಥ್​ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ನಂದಿನಿ ಅವರೆ  ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ.​​​

ಮುನಿಯಪ್ಪ ಅವರ ಇನ್ನೊಬ್ಬ ಪುತ್ರಿ ರೂಪಾ ಶಶಿಧರ ಕೂಡಾ ಕೆಜಿಎಫ್​​ನಿಂದ ಕಾಂಗ್ರೆಸ್​​ನ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದರಿಂದಾಗಿ ಮುನಿಯಪ್ಪ ಅವರ ಇಬ್ಬರು ಪುತ್ರಿಯರು ಚುನಾವಣಾ ಅಖಾಡದಲ್ಲಿ ಇದ್ದಾರೆ.

ಮಕ್ಕಳನ್ನ ರಾಜಕೀಯ ಕಣಕ್ಕಿಳಿಸಿರುವ ಸಂಸದ ಮುನಿಯಪ್ಪ ರಾಜಕೀಯ ತಂತ್ರವನ್ನು ಹಣೆದು ಈ ಎಲ್ಲಾ ಕಾರ್ಯಗಳನ್ನ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ ಎಂದು ರಾಜಕೀಯ ವಲಯದ ಚರ್ಚೆಯಾಗಿದೆ.

 

 

 

 

 

Please follow and like us:
0
http://bp9news.com/wp-content/uploads/2018/04/collage-7-11.jpghttp://bp9news.com/wp-content/uploads/2018/04/collage-7-11-150x150.jpgBP9 Bureauಕೋಲಾರಪ್ರಮುಖರಾಜಕೀಯಬೆಂಗಳೂರು : ಕೊತ್ತನೂರು ಮಂಜುನಾಥ್​ ನಾಮಪತ್ರ ತಿರಸ್ಕೃತಗೊಂಡಿದ್ದು, ಈಗ ಕಣದಲ್ಲಿ ನಂದಿನಿ ಕಾಂಗ್ರೆಸ್​​​ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಮುಳಬಾಗಲು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಕೊತ್ತನೂರು ಮಂಜುನಾಥ್ ನಾಮಪತ್ರಸ ಲ್ಲಿಸದ್ದರು, ಆದರೆ ನಕಲಿ ಜಾತಿ ಪ್ರಮಾಣ ಪತ್ರ ಎಂದು ಚುನಾವಣಾಧಿಕಾರಿಗಳಿಗೆ  ದೃಢಪಟ್ಟ ಹಿನ್ನಲೆಯಲ್ಲಿ ನಾಮಪತ್ರ ತಿರಸ್ಕೃತ ಗೊಂಡಿತು. ಆಚ್ಚರಿಯ ಸಂಗತಿ ಎಂದರೆ ಅಲ್ಲಿ ಕಾಂಗ್ರೆಸ್​​ ಸಂಸದ ಮುನಿಯಪ್ಪ ಅವರ ಪುತ್ರಿ ನಂದಿನಿ ಪಕ್ಷೇತರಾಗಿ ನಾಮಪತ್ರ ಸಲ್ಲಿದ್ದರು. ಮಂಜುನಾಥ್​ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ನಂದಿನಿ...Kannada News Portal