ಕೋಲಾರ: ಮುಸ್ಲಿಂ ಬಂಧುಗಳು ಯಾವುದೇ ಕಾರಣಕ್ಕೂ ಉಹಾಪೋಹಗಳಿಗೆ ಕಿವಿಗೋಡಬೇಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾನ್ಯತೆ ನೀಡಬೇಡಿ. ನಾವು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವುದಿಲ್ಲ ಎಂದು  ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.

ಶ್ರೀನಿವಾಸಪುರದಲ್ಲಿ ಜೆಡಿಎಸ್ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಹಾಗು ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ ಅವರು, ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೆಲ್ಲ ತಡೆಯುವುದು ನಮ್ಮ ಉದ್ದೇಶ ಎಂದರು.

ಶ್ರೀನಿವಾಸಪುರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುವ ಮಾವಿನ ಬೆಳೆಗೆ ನಷ್ಟ ಪರಿಹಾರ ಕಲ್ಪಿಸಲಾಗುವುದು, ಮಾವನ್ನು ವಿದೇಶಕ್ಕೆ ರವಾನಿಸಲು  ಅಗತ್ಯ ಸಹಕಾರ ಸರ್ಕಾರದ ವತಿಯಿಂದ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

1994ರಲ್ಲಿ ದೇವೇಗೌಡರು ಸಿಎಂ ಅಗಲು ವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ 10  ಶಾಸಕರನ್ನು ನೀಡಿದ್ದರಿ ಆ  ಇತಿಹಾಸ ಮತ್ತೆ ಸೃಷ್ಟಿಯಾಗಲು ಜಿಲ್ಲೆಯ ಜನತೆ ಶ್ರಮಿಸುವಂತೆ ಮನವಿ ಮಡಿದರು.

ಶ್ರೀನಿವಾಸಪುರದ ಹಾಲಿ ಶಾಸಕರು ಕಾಂಗ್ರೆಸ್ ಸರ್ಕಾರದ ಆರೋಗ್ಯ ಸಚಿವರು ಆದ  ರಮೇಶ್ ಕುಮಾರ್  ಆರೋಗ್ಯ ಇಲಾಖೆಯನ್ನು ಅನಾರೋಗ್ಯ ಇಲಾಖೆಯಾಗಿ ಮಾಡಿದ್ದಾರೆ.  ರಮೇಶ್ ಕುಮಾರ್ ಒಬ್ಬ ಕಪಟ ರಾಜಕಾರಣಿ ನೀವು ಮತ ಕೊಟ್ಟು ಕ್ಷೇತ್ರದ ಪ್ರತಿನಿಧಿಯಾಗಿ ಕಳಿಸಿದರೆ, ಅವರು ವಿಧಾಸಭೆಯಲ್ಲಿ ಪ್ರಜಾಪ್ರತಿನಿಧಿಗಳು ಲಂಚ ಪಡೆಯುವ ಪಾಠ ಮಾಡ್ತಾರೆ ಇಂತಹಾ ವ್ಯಕ್ತಿಯಿಂದ ಸಮಾಜದ ಉದ್ಧಾರದ ಮಾತು ಬಂದರೆ ಹೇಗೆ ನಂಬ ಬಹುದು ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅಮಾಯಕ ರಾಜಕಾರಣಿ. ಗೋಸುಂಬೆಯಲ್ಲ. ಕಪಟತನ ಗೊತ್ತಿಲ್ಲದ ವ್ಯಕ್ತಿ ಇಂತಹ ವ್ಯಕ್ತಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ ಎಂದರು.ಪಕ್ಷ ಕಟ್ಟಲು, ಸಿಎಂ ಅಗಬೇಕು ಅನ್ನೊ ಆಸೆಯಿಲ್ಲ. ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದಿಂದ ಹೊರ ಹಾಕಲು ಹೋರಾಟ ನಡೆಸುತ್ತಿದ್ದೇನೆ.  ವೆಂಕಟಶಿವಾರೆಡ್ಡಿ ಗೆ ಮತ ಹಾಕಿ ಗೆಲ್ಲಿಸಬೇಕು. 113 ರ ಸ್ಥಾನದಲ್ಲಿ ನಿಮ್ಮದು ಒಂದು ಸ್ಥಾನ ಅಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ ಕೋಲಾರ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸಗೌಡ, ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ಸಮೃದ್ಧಿಮಂಜುನಾಥ್, ಬಂಗಾಪೇಟೆ ಕ್ಷೇತ್ರದ BJP ಟಿಕೆಟ್ ವಂಚಿತ ನಾರಾಯಣಸ್ವಾಮಿ,  ಮಂಗಮ್ಮಮುನಿಸ್ವಾಮಿ ಜಿಲ್ಲಾಪಂಚಾಯಿತಿ, ಸದಸ್ಯ ಶ್ರೀನಿವಾಸ್ ಮಾಜಿ ಸದಸ್ಯ ರಾಜಣ್ಣ, ಮಾರುತಿರೆಡ್ಡಿ ಲಾಯರ್ ಶಿವಣ್ಣ ಗೋಲಿಬಾರ್ ವೆಂಕಟರೆಡ್ಡಿ, ಮುಂತಾದವರು ಇದ್ದರು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರು ವಕೀಲರ ವೃಂದ ಆಗಮಿಸಿತ್ತು. ಹೆಲಿಕ್ಯಾಪ್ಟರನಲ್ಲಿ ಆಗಮಿಸಿದ  ಕುಮಾರಸ್ವಾಮಿಗೆ ಚಿಂತಾಮಣಿ ವೃತ್ತದಲ್ಲಿ ಮಾವಿನ ಬೆಳೆಗಾರರು ಮಿಡಿಗಾಯಿ ಮಾವಿನ ಕಾಯಿ ಹಾರ ಹಾಕಿ ಸ್ವಾಗತಿಸಿದರು.

ವರದಿ: ಚ.ಶ್ರೀನಿವಾಸಮೂರ್ತಿ

Please follow and like us:
0
http://bp9news.com/wp-content/uploads/2018/05/WhatsApp-Image-2018-05-02-at-11.24.32-AM.jpeghttp://bp9news.com/wp-content/uploads/2018/05/WhatsApp-Image-2018-05-02-at-11.24.32-AM-150x150.jpegBP9 Bureauಕೋಲಾರಪ್ರಮುಖರಾಜಕೀಯಕೋಲಾರ: ಮುಸ್ಲಿಂ ಬಂಧುಗಳು ಯಾವುದೇ ಕಾರಣಕ್ಕೂ ಉಹಾಪೋಹಗಳಿಗೆ ಕಿವಿಗೋಡಬೇಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾನ್ಯತೆ ನೀಡಬೇಡಿ. ನಾವು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವುದಿಲ್ಲ ಎಂದು  ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು. ಶ್ರೀನಿವಾಸಪುರದಲ್ಲಿ ಜೆಡಿಎಸ್ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಹಾಗು ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ ಅವರು, ಕಾಂಗ್ರೆಸ್...Kannada News Portal