ಶ್ರೀನಿವಾಸಪುರ: ಶ್ರೀನಿವಾಸಪುರ ರಾಜಕೀಯ ಇತಿಹಾಸದಲ್ಲಿ ಹೊಸಶಕೆಗೆ ಮುನ್ನುಡಿ ಬರೆದ 2018 ರ ಚುನಾವಣೆ, ಇಲ್ಲಿನ ರಾಜಕೀಯ ಇತಿಹಾಸದಲ್ಲಿ ಒಮ್ಮೆ ಆಯ್ಕೆಯಾದವರು ಮತ್ತೊಂದು ಬಾರಿಗೆ ಚುನಾಯಿತರಾದ ದಾಖಲೆ ಇಲ್ಲ ಅಂತಹ ರಾಜಕೀಯ ಲೆಕ್ಕಾಚಾರದಲ್ಲಿ ರಮೇಶಕುಮಾರ್ ಎರಡನೇ ಬಾರಿಗೆ ಆಯ್ಕೆಮಾಡುವ ಮೂಲಕ ಸಂಪ್ರದಾಯ ಬದಿಗೊತ್ತಿ ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ  ಶ್ರೀನಿವಾಸಪುರದ ಮತದಾರರು.

ಹಳೆಯ ದಾಖಲೆ ಮುರಿಯಬೇಕೆಂಬ ಲೆಕ್ಕಾಚಾರದಲ್ಲಿ ಶಾಸಕ ರಮೇಶಕುಮಾರ್ ನಿರಂತರವಾಗಿ ಕ್ಷೇತ್ರದಲ್ಲಿ ಉಳಿದುಕೊಂಡು ಮತದಾರನ ಮನವೊಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚುನಾವಣೆಯಲ್ಲಿ ತಮ್ಮ ಸಂಪ್ರದಾಯ ರಾಜಕೀಯ ಲೆಕ್ಕಾಚಾರವನ್ನು ಬದಿಗಿಟ್ಟ ಅವರು ಅಭಿವೃದ್ಧಿ ಹೆಸರಿನಲ್ಲಿ ಪ್ರತಿ ಗ್ರಾಮದ ಜನರ ನೇರ ಸಂಪರ್ಕಕದಲ್ಲಿದ್ದರು.

ಹಲವಾರು ಬಾರಿ ಅಭಿವೃದ್ಧಿ ಕಾರ್ಯಕ್ರಮಗಳು ಫಲಾನುಭವಿಗೆ ಸೇರಿರುವ ಬಗ್ಗೆ ತಾವೆ ಸ್ವತಃ ಕ್ರಾಸ್ ಚೆಕ್ ಮಾಡುವತ್ತ ಸಹ ಮುಂದಾಗಿದ್ದರು. ಗ್ರಾಮಗಳ ಜನರನ್ನು ಆತ್ಮೀಯವಾಗಿ ಮಾತನಾಡಿಸುತ್ತ ಜನಸಾಮನ್ಯರಿಗೆ ತೀರ ಹತ್ತಿರವಾಗತೊಡಗಿದ್ದರು. ಜೊತೆಗೆ ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಅದರ ಅಧ್ಯಕ್ಷ ಗೋವಿಂದಗೌಡರ ಸಹಕಾರ ಪಡೆದ ಅವರು ಸ್ತ್ರೀಶಕ್ತಿ ಸಂಘಗಳನ್ನು ಸಂಘಟಿಸುತ್ತ ಬ್ಯಾಂಕ್ ಮೂಲಕ ಸ್ವಸಹಾಯ ಗುಂಪುಗಳಿಗೆ ಸಾಲ ಮೇಳ ಮಾಡಿ ಸಾಲ ವಿತರಣೆ ಮಾಡಿದ್ದು ದಾಖಲೆಯಲ್ಲಿ ಉಳಿದು ಹೋಯಿತು.

ಈ ಮೂಲಕ ಸ್ವಸಹಾಯ ಗುಂಪುಗಳ ಮಹಿಳೆಯರು ರಮೇಶಕುಮಾರ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಸಾಲ ನೀಡುವ ಮಹತ್ತರ ಕಾರ್ಯದ ಫಲ ಕ್ಷೇತ್ರದಲ್ಲಿ ಬಹುತೇಕ ನಿಷ್ಕ್ರಿಯವಾಗಿದ್ದ ಸ್ವಸಹಾಯ ಸಂಘಗಳನ್ನು ಬಲ ಗೊಳಿಸಿಕೊಂಡ ಮಹಿಳಾ ಸಂಘಗಳ ಸದಸ್ಯರು ಸಾಮಾಜಿಕವಾಗಿ ಜಾಗೃತವಾಗತೊಡಗಿದರು. ಇದರೊಟ್ಟಿಗೆ ಆರ್ಥಿಕವಾಗಿ ಪ್ರಭುದ್ದರಾದರು ಸಾಲದ ಜವಾಬ್ದಾರಿ ಪಡೆದ ಮಹಿಳಾ ಸ್ವಸಹಾಯ ಸದಸ್ಯರು ಹಸು ಸಾಕಾಣಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡು ಕುಟುಂಬದ ನೊಗಹೊತ್ತರು. ಇದರಿಂದ  ಹಲವರ ಕುಟುಂಬದ ದಾರಿ ದೀಪಕ್ಕೆ ರಮೇಶಕುಮಾರ್ ಅವರ ಶ್ರಮವೆ ಕಾರಣ ಎಂದು ಮಹಿಳಾ ಸದಸ್ಯರು ಒಪ್ಪಿಕೊಂಡು ಅವರ ಬೆಂಬಲಕ್ಕೆ ನಿಂತರು.

ಇನ್ನು ಸರ್ವರಿಗೂ ಸೂರು ಯೋಜನೆಯ ಅನುಷ್ಠಾನದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದರು. ಈ ಎಲ್ಲಾ ಬೆಳವಣೆಗೆಯಿಂದ ಕ್ಷೇತ್ರದ ಬಹುತೇಕ ಮಹಿಳೆಯರಲ್ಲಿ ರಮೇಶಕುಮಾರ್ ಮಹಾನ್ ವ್ಯಕ್ತಿಯಾಗಿ ರೂಪಗೊಂಡರು. ಅಲ್ಲದೆ ಬತ್ತಿದ ಕೆರೆಗಳನ್ನು ತುಂಬಿಸುವ ಕಾರ್ಯದ ವಿಚಾರದಲ್ಲಿ, ಬಯಲುಸೀಮೆ ಜನರ ಬದುಕಿನ ಸತ್ಯಾ ಸತ್ಯತೆಯನ್ನ  ಸದನದ ಎದುರಿಗಿಟ್ಟ ಪರಿಣಾಮ ಸರ್ಕಾರ ನೀರು ಕೊಡಲು ಒಪ್ಪಿಕೊಂಡಿತು. ಈ ಎಲ್ಲಾ ಕಾರ್ಯಗಳು ಜಾರಿಯಾಗುವ ಹಂತದಲ್ಲೆ ಅಭಿವೃದ್ಧಿಯ ಹರಿಕಾರ ಎನ್ನುವ ಅಸ್ತ್ರ ಬೆನ್ನಿಗಿಟ್ಟುಕೊಂಡ ರಮೇಶಕುಮಾರ್ ಆರೋಗ್ಯ ಸಚಿವರಾಗಿ ಕ್ಷೇತ್ರದ ಜನರ ಋಣವನ್ನು ಶಾಶ್ವತವಾಗಿ  ತೀರಿಸಬೇಕೆಂಬ ಹಠಕ್ಕೆ ಬಿದ್ದರು.  ಅವರು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಹಾಗು ಟಾಟಾ ಟ್ರಸ್ಟ್ ಸಹಯೋಗದೊಂದಿಗೆ ಕ್ಯಾನ್ಸರ್ ಆಸ್ಪತ್ರೆಗಳನ್ನು ತಾಲೂಕಿಗೆ ತಂದಿರುವುದು ದೊಡ್ಡ ಮಟ್ಟದಲ್ಲಿ ಅವರ ಗೆಲುವಿಗೆ ಸಹಕಾರ ನೀಡಿತು. ಕಾರ್ಯಕ್ರಮಗಳನ್ನು ತಂದಿರುವ ಬಗ್ಗೆ ಅವರ ಅನುಯಾಯಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡಿದ್ದು ಒಂದಷ್ಟು ಪ್ಲಸ್​​​​ ಆಗಿದ್ದು, ಚುನಾವಣಾ ಸಂದರ್ಭದಲ್ಲೂ ಅಬ್ಬರದ ಪ್ರಚಾರಕ್ಕೆ ಜೋತೂ ಬಿಳದೆ ವಿಷಯವಾರು ಪ್ರಚಾರ ಮಾಡಿದರು. ಈ ಎಲ್ಲಾ ತಂತ್ರಗಳು ಮತದಾರನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಎರಡನೇ ಬಾರಿ ರಮೇಶಕುಮಾರ್ ಗೆಲುವಿನ ನಗೆ ಬಿರಿದರು.
ವರದಿ : ಚ.ಶ್ರೀನಿವಾಸಮೂರ್ತಿ

Please follow and like us:
0
http://bp9news.com/wp-content/uploads/2018/05/21-1may2018-1.jpghttp://bp9news.com/wp-content/uploads/2018/05/21-1may2018-1-150x150.jpgBP9 Bureauಕೋಲಾರಪ್ರಮುಖರಾಜಕೀಯಶ್ರೀನಿವಾಸಪುರ: ಶ್ರೀನಿವಾಸಪುರ ರಾಜಕೀಯ ಇತಿಹಾಸದಲ್ಲಿ ಹೊಸಶಕೆಗೆ ಮುನ್ನುಡಿ ಬರೆದ 2018 ರ ಚುನಾವಣೆ, ಇಲ್ಲಿನ ರಾಜಕೀಯ ಇತಿಹಾಸದಲ್ಲಿ ಒಮ್ಮೆ ಆಯ್ಕೆಯಾದವರು ಮತ್ತೊಂದು ಬಾರಿಗೆ ಚುನಾಯಿತರಾದ ದಾಖಲೆ ಇಲ್ಲ ಅಂತಹ ರಾಜಕೀಯ ಲೆಕ್ಕಾಚಾರದಲ್ಲಿ ರಮೇಶಕುಮಾರ್ ಎರಡನೇ ಬಾರಿಗೆ ಆಯ್ಕೆಮಾಡುವ ಮೂಲಕ ಸಂಪ್ರದಾಯ ಬದಿಗೊತ್ತಿ ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ  ಶ್ರೀನಿವಾಸಪುರದ ಮತದಾರರು. ಹಳೆಯ ದಾಖಲೆ ಮುರಿಯಬೇಕೆಂಬ ಲೆಕ್ಕಾಚಾರದಲ್ಲಿ ಶಾಸಕ ರಮೇಶಕುಮಾರ್ ನಿರಂತರವಾಗಿ ಕ್ಷೇತ್ರದಲ್ಲಿ ಉಳಿದುಕೊಂಡು ಮತದಾರನ ಮನವೊಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚುನಾವಣೆಯಲ್ಲಿ ತಮ್ಮ...Kannada News Portal