ಕೋಲಾರ: ಕೋಲಾರದಿಂದ ಶ್ರೀನಿವಾಸಪುರ ಮಾರ್ಗವಾಗಿ ತಾಡಿಗೋಳು ಕ್ರಾಸ್ ವರೆಗೂ ನಾಲ್ಕುಪಥ ರಸ್ತೆ ನಿರ್ಮಾಣಕ್ಕೆ ಸ್ಪೀಕರ್ ರಮೇಶ್ ಕುಮಾರ್ ಚಿಂತನೆ ನಡೆಸಿ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟು ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ.

ಇದರೊಂದಿಗೆ, ಕೋಲಾರದಿಂದ ದೇವನಹಳ್ಳಿ ಹಾಗು ಚಿಂತಾಮಣಿಯಿಂದ ಬಾಗೇಪಲ್ಲಿ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನಾಗಿಸಲು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನೀತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ನೀಡಲಾಗಿರುತ್ತದೆ ಇದಕ್ಕೆ ಸಂಭಂದ ಪಟ್ಟಂತೆ ಕೇಂದ್ರ ಸಚಿವರನ್ನು ರಮೇಶ್ ಕುಮಾರ್ ಎರಡು ಬಾರಿ ಭೇಟಿ ಮಾಡಿ ಮಾತು ಕತೆ ನಡೆಸಿದ್ದು, ಇದಕ್ಕೆ ಕೇಂದ್ರ ಸಚಿವರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ತಿಳಿದು ಬಂದಿದೆ.

ಕೋಲಾರದಿಂದ ತಾಡಿಗೋಳು ಕ್ರಾಸ್​​​ವರಿಗೂ ಸಂಚಾರ ದಟ್ಟಣೆ ಹೆಚ್ಚಾಗಿದೆ, ಇದರೊಂದಿಗೆ ರಸ್ತೆ ಸಹ ಸಂಪೂರ್ಣವಾಗಿ ಹಾಳಾಗಿದ್ದು ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತಿತ್ತು. ಈ ಹಿನ್ನಲೆಯಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ರಸ್ತೆಯನ್ನು ಮೆಲ್ದರ್ಜೆಗೆ ಏರಿಸುವ ಪ್ರಯತ್ನವನ್ನು ಆಗ ಆರೋಗ್ಯ ಸಚಿವರಾಗಿದ್ದ ರಮೇಶಕುಮಾರ್ ಪ್ರಯತ್ನ ನಡೆಸಿದ್ದರು. ಚುನಾವಣೆಗಳು ಬಂದ ಹಿನ್ನಲೆಯಲ್ಲಿ ಪ್ರಯತ್ನ  ಸ್ಥಗಿತವಾಗಿತ್ತು.

ನಂತರದಲ್ಲಿ ಅವರೇ ಅಧಿಕಾರಕ್ಕೆ ಬಂದಿರುವ ಹಿನ್ನಲೆಯಲ್ಲಿ ಶ್ರೀನಿವಾಸಪುರ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಯತ್ನವಾಗಿ ಸುಮಾರು 36 ಕೀ.ಮಿ ರಸ್ತೆಯನ್ನು ಸುಮಾರು 200 ರಿಂದ 250 ಕೋಟಿ ವೆಚ್ಚದಲ್ಲಿ ನಾಲ್ಕು ಪಥ ರಸ್ತೆಯನ್ನಾಗಿಸಲು ಅಂದಾಜಿಸಲಾಗಿದ್ದು ಕೇಂದ್ರ ಹೆದ್ದಾರಿ ಇಲಾಖೆಯಿಂದಲೇ ಮಂಜೂರಾತಿ ಮಾಡಿಸಲು ಸ್ಪೀಕರ್ ಪ್ರಯತ್ನಿಸುತ್ತಿದ್ದಾರೆ.

ಈ ರಸ್ತೆ ನಿರ್ಮಾಣದಿಂದ ಕರ್ನಾಟಕ,ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗುತ್ತದೆ. ಆಂಧ್ರದ ಮದನಪಲ್ಲಿ ಪುಂಗನೂರು ಮತ್ತು ಬಿ.ಕೋತ್ತಕೋಟ ನಗರಗಳಿಂದ ತಮಿಳುನಾಡಿನ ಹೋಸೂರು ಸೇಲಂಗೆ ಹೋಗಲು ಈ ರಸ್ತೆ ಮಾರ್ಗ ಅನಕೂಲವಾಗಲಿದೆ.

ವರದಿ : ಚ.ಶ್ರೀನಿವಾಸಮೂರ್ತಿ

 

Please follow and like us:
0
http://bp9news.com/wp-content/uploads/2018/08/WhatsApp-Image-2018-08-11-at-2.55.55-PM-1024x768.jpeghttp://bp9news.com/wp-content/uploads/2018/08/WhatsApp-Image-2018-08-11-at-2.55.55-PM-150x150.jpegBP9 Bureauಕೋಲಾರಪ್ರಮುಖಕೋಲಾರ: ಕೋಲಾರದಿಂದ ಶ್ರೀನಿವಾಸಪುರ ಮಾರ್ಗವಾಗಿ ತಾಡಿಗೋಳು ಕ್ರಾಸ್ ವರೆಗೂ ನಾಲ್ಕುಪಥ ರಸ್ತೆ ನಿರ್ಮಾಣಕ್ಕೆ ಸ್ಪೀಕರ್ ರಮೇಶ್ ಕುಮಾರ್ ಚಿಂತನೆ ನಡೆಸಿ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟು ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ. ಇದರೊಂದಿಗೆ, ಕೋಲಾರದಿಂದ ದೇವನಹಳ್ಳಿ ಹಾಗು ಚಿಂತಾಮಣಿಯಿಂದ ಬಾಗೇಪಲ್ಲಿ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನಾಗಿಸಲು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನೀತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ನೀಡಲಾಗಿರುತ್ತದೆ ಇದಕ್ಕೆ ಸಂಭಂದ ಪಟ್ಟಂತೆ...Kannada News Portal