ಕೋಲಾರ: 1994 ರಲ್ಲಿ ದೇವೇಗೌಡರು ಸಿಎಂ ಆಗಿದ್ದರು. ಅಂದು ವಿಧಾನಸೌಧದಲ್ಲಿ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಭಾಗ್ಯ  ಪ್ರತಿಭಾನ್ವಿತ ಶಾಸಕರದ್ದಾಗಿತ್ತು. ಈಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಿರುವ ಸಂದರ್ಭದಲ್ಲಿ ಅದೇ ಶಾಸಕರು ಸ್ಪೀಕರ್​​​ ಆಗಿ ಆಯ್ಕೆಯಾಗಿದ್ದಾರೆ. ಅವರು ಯಾರು ಗೊತ್ತಾ..?

ಅವರೇ ಶ್ರೀನಿವಾಸಪುರದ ಶಾಸಕ ರಮೇಶ್​​ ಕುಮಾರ್​. ಇದರಲ್ಲಿ ವಿಶೇಷ ಏನಪ್ಪಾ ಅಂದರೆ, ಅಂದು ದೇವೇಗೌಡರು ಮುಖ್ಯ ಮಂತ್ರಿಯಾಗಿದ್ದಾಗ ಸ್ಫೀಕರ್​​​ ಆದವರು ಇದೇ ರಮೇಶ್​​​ ಕುಮಾರ್​​,  ಸುಮಾರು ಎರಡು ದಶಕಗಳ ನಂತರ  ದೇವೇಗೌಡರ ಮಗ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗುತ್ತಿದ್ದು, ಸ್ಫೀಕರ್​​ ಆಗಿ ಅದೇ ರಮೇಶ್​​ ಕುಮಾರ್​​ ಆಯ್ಕೆ ಆಗಿರುವುದು ವಿಶೇಷವೇ ಸರಿ. ಅಂದು ಅಪ್ಪ ಇಂದು ಮಗ ಇರುವಾಗ ಸ್ಪೀಕರ್​​ ಆಗುವ ಹೆಗ್ಗಳಿಕೆ ಸರಳ ಸಜ್ಜನ ರಾಜಕಾರಣಿ  ರಮೇಶಕುಮಾರ್ ಅವರದ್ದಾಗಿದೆ.

ಇನ್ನು ದೇವೇಗೌಡರಿದ್ದಾಗ ರಮೇಶಕುಮಾರ್ ಸ್ಪೀಕರ್ ಆಗಿ ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಿದ್ದರು, ಈಗ ಮಗನ ಕಾಲದಲ್ಲಿ ಸ್ಪೀಕರ್ ಆಗಿ  ಆ ಸ್ಥಾನಕ್ಕೆ ಯಾವ ರೀತಿ ಶಕ್ತಿ ತುಂಬುತ್ತಾರೆ ಎಂಬುದನ್ನು ನೋಡಬೇಕಿದೆ.

ವರದಿ : ಚ.ಶ್ರೀನಿವಾಸಮೂರ್ತಿ

Please follow and like us:
0
http://bp9news.com/wp-content/uploads/2018/05/collage-47.jpghttp://bp9news.com/wp-content/uploads/2018/05/collage-47-150x150.jpgBP9 Bureauಕೋಲಾರಪ್ರಮುಖರಾಜಕೀಯಕೋಲಾರ: 1994 ರಲ್ಲಿ ದೇವೇಗೌಡರು ಸಿಎಂ ಆಗಿದ್ದರು. ಅಂದು ವಿಧಾನಸೌಧದಲ್ಲಿ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಭಾಗ್ಯ  ಪ್ರತಿಭಾನ್ವಿತ ಶಾಸಕರದ್ದಾಗಿತ್ತು. ಈಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಿರುವ ಸಂದರ್ಭದಲ್ಲಿ ಅದೇ ಶಾಸಕರು ಸ್ಪೀಕರ್​​​ ಆಗಿ ಆಯ್ಕೆಯಾಗಿದ್ದಾರೆ. ಅವರು ಯಾರು ಗೊತ್ತಾ..? ಅವರೇ ಶ್ರೀನಿವಾಸಪುರದ ಶಾಸಕ ರಮೇಶ್​​ ಕುಮಾರ್​. ಇದರಲ್ಲಿ ವಿಶೇಷ ಏನಪ್ಪಾ ಅಂದರೆ, ಅಂದು ದೇವೇಗೌಡರು ಮುಖ್ಯ ಮಂತ್ರಿಯಾಗಿದ್ದಾಗ ಸ್ಫೀಕರ್​​​ ಆದವರು ಇದೇ ರಮೇಶ್​​​ ಕುಮಾರ್​​,  ಸುಮಾರು ಎರಡು ದಶಕಗಳ ನಂತರ  ದೇವೇಗೌಡರ...Kannada News Portal