ಯಾದಗಿರಿ : ಯಾದಗಿರಿಯಲ್ಲಿ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರಾದ ಬಿ. ಎಸ್. ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಪ್ರಮಾಣವಚನ  ವೇಳೆ ದುಂದುವೆಚ್ಚ ವಿಚಾರವಾಗಿ ಮಾತನಾಡಿದ ಬಿಎಸ್​​ವೈ, ಸಿಎಂ ಆಡಂಬರದ ಖರ್ಚು ಮಾಡಬಾರದಿತ್ತು, ದುಂದುವೆಚ್ಚ ಮಾಡುವುದು ಸರಿಯಲ್ಲ,ಚುನಾವಣೆ ಪ್ರಣಾಳಿಕೆಯಲ್ಲಿ ಸಾಲಮನ್ನಾ ಹೇಳಿಕೆ ನೀಡಿದ ಈಗ ಸಿಎಂ ಅವರು ಈಗ ದುಡ್ಡಿನ ಗಿಡ ನೆಟ್ಟಿದ್ದೇನೆಯೇ ಎಂದಿರುವುದು ವಿಚಿತ್ರ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎನ್ನುವ ಹೇಳಿಕೆ ಊಹಾಪೋಹವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. 10 ಸಾವಿರ ಕೋಟಿ ಬಾಕಿ ಬಿಲ್ ಬಾಕಿ ಇದ್ದು, ಕೆಲಸ ಮಾಡಲು ಗುತ್ತಿಗೆದಾರರು  ಮುಂದೆ ಬರುತ್ತಿಲ್ಲ, 13 ಜಿಲ್ಲೆಗಳಲ್ಲಿ ಬರಗಾಲ ಆವರಿಸಿದೆ, ಸಿಎಂ ಹಾಗೂ ಕೃಷಿ ಸಚಿವರು ಪ್ರವಾಸ ಮಾಡುತ್ತಿಲ್ಲ ಎಂದು ಹೇಳಿದರು.

ಸರ್ಕಾರದಲ್ಲಿ ವರ್ಗಾವಣೆ ಒಂದು ದಂಧೆಯಾಗಿದೆ, ಜನ ಹಿತ ಮರೆತು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ, ಕಾಂಗ್ರೆಸ್, ಜೆಡಿಎಸ್ ಸ್ಥಾನಮಾನ ಪಡೆದುಕೊಳ್ಳಲು ತಲ್ಲೀನರಾಗಿ, ಅಭಿವೃದ್ಧಿ ಮರೆತಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಲೇವಡಿ ಮಾಡಿದರು.

Please follow and like us:
0
http://bp9news.com/wp-content/uploads/2018/08/bsy_mike.jpghttp://bp9news.com/wp-content/uploads/2018/08/bsy_mike-150x150.jpgBP9 Bureauಪ್ರಮುಖಯಾದಗಿರಿರಾಜಕೀಯಯಾದಗಿರಿ : ಯಾದಗಿರಿಯಲ್ಲಿ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರಾದ ಬಿ. ಎಸ್. ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಪ್ರಮಾಣವಚನ  ವೇಳೆ ದುಂದುವೆಚ್ಚ ವಿಚಾರವಾಗಿ ಮಾತನಾಡಿದ ಬಿಎಸ್​​ವೈ, ಸಿಎಂ ಆಡಂಬರದ ಖರ್ಚು ಮಾಡಬಾರದಿತ್ತು, ದುಂದುವೆಚ್ಚ ಮಾಡುವುದು ಸರಿಯಲ್ಲ,ಚುನಾವಣೆ ಪ್ರಣಾಳಿಕೆಯಲ್ಲಿ ಸಾಲಮನ್ನಾ ಹೇಳಿಕೆ ನೀಡಿದ ಈಗ ಸಿಎಂ ಅವರು ಈಗ ದುಡ್ಡಿನ ಗಿಡ ನೆಟ್ಟಿದ್ದೇನೆಯೇ ಎಂದಿರುವುದು ವಿಚಿತ್ರ ಎಂದು ವಾಗ್ದಾಳಿ...Kannada News Portal