ಕೋಲಾರ:  ನನ್ನನ್ನು ಕ್ಷೇತ್ರದ ಜನತೆ ಸೋಲಿಸಲಿಲ್ಲ ಪರಿಸ್ಥಿತಿಯ ವ್ಯತ್ಯಾಸಗಳಿಂದ ಆದ ತಪ್ಪು ಕಲ್ಪನೆಗಳಿಂದಾಗಿ ನಾನು ಸೋಲಾಬೇಕಾಯಿತು ಆದರೂ ನಾನು ಪಕ್ಷದ ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ನಿರಂತರವಾಗಿ ಕ್ಷೇತ್ರದಲ್ಲಿ ಇರುತ್ತೇನೆ ಎಂದು ಮಾಜಿ ಶಾಸಕ ಹಾಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುತ್ತಾರೆ ಇದು ಜನಸ್ನೇಹಿ ಸರ್ಕಾರ ಜನರ ಹಿತ ಕಾಪಾಡುವ ಮುಖ್ಯಮಂತ್ರಿ ಅಧಿಕಾರದಲ್ಲಿದ್ದಾರೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪ್ರಣಾಳಿಕೆಯಂತೆ ಕೊಟ್ಟಿರುವ ಮಾತು ಸರ್ಕಾರ ಉಳಸಿಕೊಳ್ಳುತ್ತದೆ ಈ ಬಗ್ಗೆ ಯಾವುದೆ ಅನುಮಾನ ಬೇಡ ಎಂದ ಅವರು ಸಮ್ಮಿಶ್ರ ಸರ್ಕಾರವಾಗಿರುವ ಹಿನ್ನಲೆಯಲ್ಲಿ ಮಿತ್ರ ಪಕ್ಷದ ಸಹಕಾರ ಪಡೆದು ರೈತರ ಸಾಲಮನ್ನ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದರು.ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಬೆನ್ನಲುಬಾಗಿ ನಿಂತು ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತ ಪಕ್ಷ ಬಲಪಡಿಸುವುದಾಗಿ ಹೇಳಿದರು.

ರಾಜ್ಯದ ಹಾಗು ಜಿಲ್ಲೆಯ ಜಲ್ವಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಜೋತೆಗೆ ಶಾಶ್ವತ ನೀರಾವರಿ ಯೋಜನೆಗಳಾದ ಯರಗೋಳ್ ಯೋಜನೆ ಎತ್ತಿನ ಹೋಳೆ ಯೋಜನೆಗಳು ಶಿಘ್ರವಾಗಿ ಆಗಲು ಕುಮಾರಸ್ವಾಮಿ ಸರ್ಕಾರ ಪ್ರಯತ್ನಿಸುತ್ತದೆ ಈ ಬಗ್ಗೆ ವಿಶ್ವಾಸ ಇದೆ ಎಂದರು ಹಾಗೆ ಕೆಸಿ ವ್ಯಾಲಿ ಯೋಜನೆ ಕುರಿತಾಗಿ ಮೂರನೆ ಹಂತದ ಚಿಕಿತ್ಸಾತ್ಮಕ ಶುದ್ಧಿಕರಣವಾಗಬೇಕಿದೆ ಇದಕ್ಕೆ ಅವಶ್ಯ ತಂತ್ರಜ್ಞಾನಿಗಳ ಸಹಕಾರ ಪಡೆಯಲು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ: ಆಗ್ನೇಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಮೇಶಬಾಬು ಅವರನ್ನು ಗೆಲ್ಲಿಸುವಂತೆ ವೆಂಕಟಶಿವಾರೆಡ್ಡಿ ಕರೆ ಇತ್ತರು ಕುಮಾರಸ್ವಾಮಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿರುತ್ತಾರೆ ಶಿಕ್ಷಕರಿಗೆ ಇನ್ನು ಅನಕೂಲ ಸಹಕಾರ ಮುಖ್ಯಮಂತ್ರಿಗಳಿಂದ ಸಿಗುತ್ತದೆ ಇದಕ್ಕಾಗಿ ಜೆಡಿಎಸ್ ಅಭ್ಯರ್ಥಿ ರಮೇಶಬಾಬು ಅವರನ್ನು ಚುನಾಯಿಸುವಂತೆ ಮನವಿ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ ಹಿರಿಯ ಮುಖಂಡರ ಗೋಲಿಬಾರ್ ವೆಂಕಟರೆಡ್ಡಿ ವಕೀಲಶಿವಪ್ಪ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿನಾರಯಣಸ್ವಾಮಿ ನಂಜುಂಡಪ್ಪ ಸಹಕಾರಿ ದುರಿಣ ಕಾಡುದೇವಂಡಹಳ್ಳಿರಾಮಚಂದ್ರೇಗೌಡ ಆಟೋಯೂನಿಯನ್ ಜಗದೀಶ್,ಈ ನಾರಯಣಸ್ವಾಮಿ ಮೀಸಗಾನಹಳ್ಳಿವೆಂಕಟರೆಡ್ಡಿ ಮುಂತಾದವರು ಇದ್ದರು.

ವರದಿ:ಚ.ಶ್ರೀನಿವಾಸಮೂರ್ತಿ

 

Please follow and like us:
0
http://bp9news.com/wp-content/uploads/2018/06/4-1june18.jpghttp://bp9news.com/wp-content/uploads/2018/06/4-1june18-150x150.jpgBP9 Bureauಕೋಲಾರರಾಜಕೀಯಕೋಲಾರ:  ನನ್ನನ್ನು ಕ್ಷೇತ್ರದ ಜನತೆ ಸೋಲಿಸಲಿಲ್ಲ ಪರಿಸ್ಥಿತಿಯ ವ್ಯತ್ಯಾಸಗಳಿಂದ ಆದ ತಪ್ಪು ಕಲ್ಪನೆಗಳಿಂದಾಗಿ ನಾನು ಸೋಲಾಬೇಕಾಯಿತು ಆದರೂ ನಾನು ಪಕ್ಷದ ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ನಿರಂತರವಾಗಿ ಕ್ಷೇತ್ರದಲ್ಲಿ ಇರುತ್ತೇನೆ ಎಂದು ಮಾಜಿ ಶಾಸಕ ಹಾಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುತ್ತಾರೆ ಇದು...Kannada News Portal