ಶ್ರೀನಿವಾಸಪುರ : ಬಯಲುಸೀಮೆ ಜಿಲ್ಲೆಗಳಿಗೆ ನೀರುಣಿಸುವ ಯೋಜನೆಯ ಪೂರ್ವಬಾವಿಯಾಗಿ ಸಿದ್ದಪಡಿಸಿದ, ಕೋರಮಂಗಲ-ಚಲ್ಲಘಟ್ಟ ಕೆರೆಗಳ ನೀರನ್ನು ಶುದ್ಧಿಕರಿಸಿ  ಕೆಸಿ ವ್ಯಾಲಿ ಯೋಜನೆ ಹೆಸರಿನಲ್ಲಿ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಲ ಕೆರೆಗಳಿಗೆ ನೀರು ಹರಿಸುವ ಯೋಜನೆಯಾಗಿದ್ದು, ಯೋಜನೆ ಹಲವಾರು ಎಡರು ತೊಡರುಗಳನ್ನು ಮೆಟ್ಟಿ ಕೋಲಾರ ತಾಲೂಕಿನ ನರಸಾಪುರ ಬಳಿಯ ಲಕ್ಷ್ಮೀಸಾಗರ ಕೆರೆಗೆ ಇಂದು ಶನಿವಾರ ನೀರು ಹರಿದು ಬಂದಿದೆ.

ಹಿಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಹಾಲಿ ಸರ್ಕಾರದ ವಿಧಾನಸಭಾಧ್ಯಕ್ಷರಾದ ರಮೇಶಕುಮಾರ್ ಹಠಕ್ಕೆ ಬಿದ್ದವರಂತೆ ಕೋಲಾರ ಜಿಲ್ಲೆಯ ಬತ್ತಿದ ಕೆರೆಗಳನ್ನು ತುಂಬಿಸುವ ಕಾರ್ಯದ ವಿಚಾರದಲ್ಲಿ ಸದನದಲ್ಲಿ ಸತತ ಹೋರಾಟಮಾಡಿದ ಅವರು ಬಯಲು ಸೀಮೆ ಜನರ ಬದುಕಿನ ಸತ್ಯಾ ಸತ್ಯತೆಯನ್ನು ಬಿಡಿ ಬಿಡಿಯಾಗಿ ಸರ್ಕಾರದ ಮುಂದೆ ಬಿಡಿಸಿಟ್ಟ  ಸರ್ಕಾರ  ಕೆಸಿ ವ್ಯಾಲಿ ಯೋಜನೆ ಮೂಲಕ ನೀರು ಕೊಡಲು ಒಪ್ಪಿಕೊಂಡು ಯೋಜನೆ ಚಾಲನೆ ಗೊಳ್ಳಲು ಅನವು ಮಾಡಿಕೊಟ್ಟಿತು. ಇದರ ಫಲ 2016 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀದಿದ್ದರು. 12 ಸಾವಿರ ಕೋಟಿ ವೆಚ್ಚದ ಈ ಯೋಜನೆಯಲ್ಲಿ ಸುಮಾರು 126 ಕೆರೆಗಳಿಗೆ ನೀರು ಹರಿಸಲಾಗುತ್ತದೆ.

ಈ ತಿಂಗಳ 7 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕೆಸಿ ವ್ಯಾಲಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ವಿಧಾನಸಭಾಧ್ಯಕ್ಷ ರಮೇಶಕುಮಾರ್ ತಿಳಿಸಿದರು. ಇಂದಿನ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿರುವ ಎರಡು ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಚುನಾವಣೆ ಸಮಯದಲ್ಲಿ ಕೆಸಿ ವ್ಯಾಲಿ ಯೋಜನೆ ಕುರಿತು ಮಾತಿನ ಯುದ್ದವೆ ನಡೆದಿತ್ತು. ಹಾಲಿ ಸಿ ಎಂ ಕುಮಾರಸ್ವಾಮಿ ಕೆಸಿ ವ್ಯಾಲಿ ಯೋಜನೆಯ ಕೊಳಕು ನೀರು ಕೋಲಾರ ಜಿಲ್ಲೆಗೆ ಬೇಡ ಎಂದಿದ್ದರು. ಹಾಲಿ ವಿಧಾನಸಭಾಧ್ಯಕ್ಷರು ಕೆಸಿ ವ್ಯಾಲಿ ಯೋಜನೆ ನನ್ನ ಶ್ರಮ ನೀರು ತಂದು ಹರಿಸುವುದಾಗಿ ಚುನಾವಣೆಯನ್ನೆ ಸವಾಲಾಗಿ ಸ್ವೀಕರಿಸಿದ್ದರು. ಚುನಾವಣೆ ನಡೆದು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೆಸಿ ವ್ಯಾಲಿ ಜಿಲ್ಲೆಗೆ ಹರಿದು ಬಂದಿದೆ. ಮುಂದಾದರು ಬಯಲುಸೀಮೆ ಜಿಲ್ಲೆಗಳಲ್ಲಿ ಒಂದಾದ ಕೋಲಾರ ಜಿಲ್ಲೆಯ ರೈತನ ಬದಕು ಇನ್ನಷ್ಟು ಹಸನಾಗಬಹುದಾ ಎಂದು ಕಾದು ನೋಡಬೇಕಾಗಿದೆ.

ವರದಿ:ಚ.ಶ್ರೀನಿವಾಸಮೂರ್ತಿ

Please follow and like us:
0
http://bp9news.com/wp-content/uploads/2018/06/collage-2-2.jpghttp://bp9news.com/wp-content/uploads/2018/06/collage-2-2-150x150.jpgBP9 Bureauಕೋಲಾರಪ್ರಮುಖಶ್ರೀನಿವಾಸಪುರ : ಬಯಲುಸೀಮೆ ಜಿಲ್ಲೆಗಳಿಗೆ ನೀರುಣಿಸುವ ಯೋಜನೆಯ ಪೂರ್ವಬಾವಿಯಾಗಿ ಸಿದ್ದಪಡಿಸಿದ, ಕೋರಮಂಗಲ-ಚಲ್ಲಘಟ್ಟ ಕೆರೆಗಳ ನೀರನ್ನು ಶುದ್ಧಿಕರಿಸಿ  ಕೆಸಿ ವ್ಯಾಲಿ ಯೋಜನೆ ಹೆಸರಿನಲ್ಲಿ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಲ ಕೆರೆಗಳಿಗೆ ನೀರು ಹರಿಸುವ ಯೋಜನೆಯಾಗಿದ್ದು, ಯೋಜನೆ ಹಲವಾರು ಎಡರು ತೊಡರುಗಳನ್ನು ಮೆಟ್ಟಿ ಕೋಲಾರ ತಾಲೂಕಿನ ನರಸಾಪುರ ಬಳಿಯ ಲಕ್ಷ್ಮೀಸಾಗರ ಕೆರೆಗೆ ಇಂದು ಶನಿವಾರ ನೀರು ಹರಿದು ಬಂದಿದೆ. ಹಿಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಹಾಲಿ ಸರ್ಕಾರದ...Kannada News Portal