ಕೋಲ್ಕತ:  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಸದ್ಯ ‘ನಟ ಸಾರ್ವಭೌಮ’ ಚಿತ್ರದಲ್ಲಿ ಬ್ಯೂಸಿಯಾಗಿದ್ದು ಈಗ ಕೊಲ್ಕತದಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಕೋಲ್ಕತಾದಲ್ಲಿ ಸಿನಿಮಾ ಚಿತ್ರಿಕರಣ ನಡೆಯುತ್ತಿದ್ದು, ಚಿತ್ರದಲ್ಲಿ  ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ  ಪುನೀತ್ ರಾಜ್ ಕುಮಾರ್  ಪತ್ರಕರ್ತ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ  ಚಿತ್ರದಲ್ಲಿ ಇಬ್ಬರು  ನಟಿಯರಿದ್ದು, ಸದ್ಯ ನಟಿ ಅನುಪಮ ಪರಮೇಶ್ವರನ್ ಹಾಗೂ ಇನ್ನಿತರರು ಕೋಲ್ಕತಾದಲ್ಲಿ ತಂಗಿದ್ದಾರೆ.


ಶೂಟಿಂಗ್  ಸಮಯದಲ್ಲಿ ಅನುಪಮ ಪರಮೇಶ್ವರನ್ ಪುನೀತ್ ಜೊತೆಗೆ ಸೆಲ್ಫಿ ತೆಗೆದುಕೊಂಡು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಮೂಲತಃ ಮಲಯಾಳಂನವರರಾದ ಅನುಪಮ ಪರಮೇಶ್ವರನ್  ಅವರ ಮೊದಲ ಕನ್ನಡ ಸಿನಿಮಾ ಇದಾಗಿದೆ. ಅಲ್ಲದೆ ಚಿತ್ರದಲ್ಲಿ  ಇನ್ನೋಬ್ಬ  ನಾಯಕಿಯಾಗಿ ರಚಿತಾ ರಾಮ್ ಪುನಿತ್ ಅವರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.


ಚಿತ್ರದ ಮೇಕಿಂಗ್ ಫೋಟೋಗಳನ್ನು ನಿರ್ದೇಶಕ ಪವನ್ ಒಡೆಯರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದರ ಜೋತೆಗೆ ಕೋಲ್ಕತಾದ ಕೆಲ ಸುಂದರ ಜಾಗಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದ್ದಾರೆ.

ಇತ್ತೀಚಿಗಷ್ಟೆ, ಚಿತ್ರದ ಹಾಡಿನ ರೆಕಾರ್ಡಿಂಗ್ ನಡೆದಿದ್ದು, ವಿಜಯ ಪ್ರಕಾಶ್ ಹಾಗೂ ಶ್ರೇಯಾ ಘೋಷಾಲ್ ಹಾಡಿಗೆ ಧ್ವನಿಯಾಗಿದ್ದಾರೆ. ಅಂದಹಾಗೆ, ರಾಕ್ ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/09/nsb-4.jpghttp://bp9news.com/wp-content/uploads/2018/09/nsb-4-150x150.jpgBP9 Bureauಪ್ರಮುಖಸಿನಿಮಾಕೋಲ್ಕತ:  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಸದ್ಯ 'ನಟ ಸಾರ್ವಭೌಮ' ಚಿತ್ರದಲ್ಲಿ ಬ್ಯೂಸಿಯಾಗಿದ್ದು ಈಗ ಕೊಲ್ಕತದಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಕೋಲ್ಕತಾದಲ್ಲಿ ಸಿನಿಮಾ ಚಿತ್ರಿಕರಣ ನಡೆಯುತ್ತಿದ್ದು, ಚಿತ್ರದಲ್ಲಿ  ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ  ಪುನೀತ್ ರಾಜ್ ಕುಮಾರ್  ಪತ್ರಕರ್ತ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ  ಚಿತ್ರದಲ್ಲಿ ಇಬ್ಬರು  ನಟಿಯರಿದ್ದು, ಸದ್ಯ ನಟಿ ಅನುಪಮ ಪರಮೇಶ್ವರನ್ ಹಾಗೂ ಇನ್ನಿತರರು ಕೋಲ್ಕತಾದಲ್ಲಿ ತಂಗಿದ್ದಾರೆ. ಶೂಟಿಂಗ್  ಸಮಯದಲ್ಲಿ ಅನುಪಮ ಪರಮೇಶ್ವರನ್ ಪುನೀತ್ ಜೊತೆಗೆ ಸೆಲ್ಫಿ ತೆಗೆದುಕೊಂಡು...Kannada News Portal