ಬೆಂಗಳೂರು: ಕಲ್ಲಡ್ಕದ ಖಾಸಗಿ ಶಾಲೆಗೆ ಮೂಕಾಂಬಿಕಾ ದೇವಾಲಯದ ಊಟವನ್ನು ಬಿಸಿಯೂಟಕ್ಕೆ ಸರಬರಾಜು ಮಾಡುವುದನ್ನು ತಡೆಹಿಡಿದ ಸರ್ಕಾರ ಇದೀಗ ತನ್ನ ಸಾಧನಾ ಸಮಾವೇಶಕ್ಕೆ ದೇವಾಲಯದ ಊಟ ತರಿಸಿಕೊಂಡಿದೆ. ಅಲ್ದೇ ಸರ್ಕಾರದ ಶಾಲೆಯಲ್ಲದ, ಆರ್ ಎಸ್ ಎಸ್ ಶಾಲೆ ಎಂದು ಗುರುತಿಸಿ ಕೊಂಡಿರುವಂತಹ ಶಾಲೆಗೆ ಸರ್ಕಾರದ ಬಿಸಿ ಊಟವೇಕೆ ಕೊಡಬೇಕು ಎಂದು ಪ್ರಶ್ನಿಸಿದ್ದರು ಸಿಎಂ.
ಈ ಹಿನ್ನಲೆಯಲ್ಲಿ ಸಾಧನಾ ಸಮಾವೇಶದಲ್ಲಿ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಬಿಸಿಯೂಟವನ್ನು ಪೂರೈಸಿ ಕೊಂಡಿರುವುದು ವಿವಾದಕ್ಕೆ ಗುರಿಯಾಗಿದೆ.

ಅಲ್ದೇ ಶಾಲೆಯ ಮಕ್ಕಳು ತಿನ್ನುವ ಊಟ ತಡೆಹಿಡಿದು, ತನ್ನ ಸಾಧನಾ ಸಮಾವೇಶಕ್ಕೆ ದೇವಾಲಯದ ಊಟ ತರಿಸಿಕೊಂಡಿದ್ದು ಸರಿಯೇ ಎಂಬುದು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಬಿಜೆಪಿ, ಹಿಂದೂ ಪರ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಊಟ ಸರಬರಾಜಾಗುತ್ತಿರುವ ಫೋಟೋಗಳನ್ನು ಪ್ರಕಟಿಸಿದೆ. ಆದರೆ ಮೂಕಾಂಬಿಕಾ ದೇವಾಲಯದ ಟ್ರಸ್ಟ್ ಅಧಿಕಾರಿಗಳು ಸರ್ಕಾರದ ಸಮಾವೇಶಕ್ಕೆ ದೇವಾಲಯದ ಊಟ ನೀಡಿದರೆ ತಪ್ಪಿಲ್ಲ. ಇದಕ್ಕಾಗಿ ದೇವಾಲಯಕ್ಕೆ 1 ಲಕ್ಷ ರೂ. ಪಾವತಿ ಮಾಡಲಾಗಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಿದ್ದರೂ ಇದು ವಿವಾದ ಸ್ವರೂಪ ಪಡೆದಿದೆ.

Please follow and like us:
0
http://bp9news.com/wp-content/uploads/2018/01/collage-2018-01-09-1.jpghttp://bp9news.com/wp-content/uploads/2018/01/collage-2018-01-09-1-150x150.jpgPolitical Bureauಚಿಕ್ಕಮಗಳೂರುಪ್ರಮುಖರಾಜಕೀಯಬೆಂಗಳೂರು: ಕಲ್ಲಡ್ಕದ ಖಾಸಗಿ ಶಾಲೆಗೆ ಮೂಕಾಂಬಿಕಾ ದೇವಾಲಯದ ಊಟವನ್ನು ಬಿಸಿಯೂಟಕ್ಕೆ ಸರಬರಾಜು ಮಾಡುವುದನ್ನು ತಡೆಹಿಡಿದ ಸರ್ಕಾರ ಇದೀಗ ತನ್ನ ಸಾಧನಾ ಸಮಾವೇಶಕ್ಕೆ ದೇವಾಲಯದ ಊಟ ತರಿಸಿಕೊಂಡಿದೆ. ಅಲ್ದೇ ಸರ್ಕಾರದ ಶಾಲೆಯಲ್ಲದ, ಆರ್ ಎಸ್ ಎಸ್ ಶಾಲೆ ಎಂದು ಗುರುತಿಸಿ ಕೊಂಡಿರುವಂತಹ ಶಾಲೆಗೆ ಸರ್ಕಾರದ ಬಿಸಿ ಊಟವೇಕೆ ಕೊಡಬೇಕು ಎಂದು ಪ್ರಶ್ನಿಸಿದ್ದರು ಸಿಎಂ. ಈ ಹಿನ್ನಲೆಯಲ್ಲಿ ಸಾಧನಾ ಸಮಾವೇಶದಲ್ಲಿ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಬಿಸಿಯೂಟವನ್ನು ಪೂರೈಸಿ ಕೊಂಡಿರುವುದು ವಿವಾದಕ್ಕೆ ಗುರಿಯಾಗಿದೆ. ಅಲ್ದೇ...Kannada News Portal