ಮುಖ್ಯಮಂತ್ರಿ  ಕುಮಾರಸ್ವಾಮಿ ಅವರು ನಾಳೆ ಮಂಡ್ಯ ಜಿಲ್ಲೆಯಲ್ಲಿ ನಾಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ನಾಟಿ ಮಾಡುವುದಷ್ಟೇ ಅಲ್ಲಾ…ಕೋಳಿಯೊಂದಿಗೆ ಹೋಗಿ ಮೊಟ್ಟೆಗೆ ಕಾವು ಕೊಡುವುದು ಹೇಗೆ ಎಂದು ಬೇಕಾದರೂ  ಹೇಳಿಕೊಡುತ್ತಾರೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಮಂಡ್ಯಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಐದು ಎಕರೆ ಜಮೀನಿಗೆ  ತಾವೇ ಖುದ್ದು ರೈತರೊಟ್ಟಿಗೆ ನಾಟಿ ಮಾಡುವುದರ  ಮೂಲಕ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆ ನಂತರ ಗದ್ದೆಯೊಳಗೆ ನಿಂತು ಭಾಷಣ ಮಾಡಲು ಈಗಾಗಲೇ ವೇದಿಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 100 ಹೆಣ್ಣಾಳು ಮತ್ತು 80 ಗಂಡಾಳುಗಳನ್ನು ನಾಟಿ ಮಾಡಲು ನೇಮಿಸಲಾಗಿದೆ.

ಮೊದಲು ಸಾಲ ಮನ್ನಾ ಮಾಡಿ ಎಂದರೆ  ಕಾರ್ಯಕ್ರಮದ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅಲ್ಲದೇ ಮಂಡ್ಯ ಜನತೆ ದಡ್ಡರಲ್ಲ, ನೀವು ಮುಚ್ಚಿ ಹೋಗಿರುವ ಸಕ್ಕರೆ ಕಾರ್ಖಾನೆಗಳನ್ನು  ತೆಗೆಸಿ, ಅದೂ ಬಿಟ್ಟು ನಾಟಿ ಮಾಡುವ ಕಾರ್ಯ ನಮಗೆ ಹೇಳಿ ಕೊಡಬೇಡಿ ಎಂದು  ಜಿಲ್ಲೆಯ ಬಿಜೆಪಿಯ ಕೆಲ ಮುಖಂಡರು  ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ  ಮಾತನಾಡಿದ ಈಶ್ವರಪ್ಪನವರು  ಸನ್ಮಾನ್ಯ ಮುಖ್ಯ ಮಂತ್ರಿಗಳು ಅಲ್ಲಿರುವ ರೈತರಿಗೆ ನಾಟಿ ಮಾಡುವುದನ್ನು ಹೇಳಿ ಕೊಡುತ್ತಾರೆ ಅಂದ್ರೆ ಏನ್ರೀ..ಮಾಡುವ ಕೆಲಸ ಬಿಟ್ಟು ಕಾರ್ಯಕ್ರಮ ಹಮ್ಮಿಕೊಂಡರೆ ತಾವು ಕೊಟ್ಟ ಮಾತನ್ನ ಮರೆತಂತೇ ತಾನೆ. ಇದೆಲ್ಲಾ ಬಣ್ಣವಿಲ್ಲದ ನಾಟಕವೆಂದಿದ್ದಾರೆ.

Please follow and like us:
0
http://bp9news.com/wp-content/uploads/2018/08/ishwarappa.jpghttp://bp9news.com/wp-content/uploads/2018/08/ishwarappa-150x150.jpgBP9 Bureauಪ್ರಮುಖಸಿನಿಮಾಮುಖ್ಯಮಂತ್ರಿ  ಕುಮಾರಸ್ವಾಮಿ ಅವರು ನಾಳೆ ಮಂಡ್ಯ ಜಿಲ್ಲೆಯಲ್ಲಿ ನಾಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ನಾಟಿ ಮಾಡುವುದಷ್ಟೇ ಅಲ್ಲಾ...ಕೋಳಿಯೊಂದಿಗೆ ಹೋಗಿ ಮೊಟ್ಟೆಗೆ ಕಾವು ಕೊಡುವುದು ಹೇಗೆ ಎಂದು ಬೇಕಾದರೂ  ಹೇಳಿಕೊಡುತ್ತಾರೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal