ಸಿನಿಮಾ ಟಾಕ್ : ಕಳೆದ ಒಂದು ವಾರದಿಂದ ಗೂಗಲ್​ನಲ್ಲಿ ಅತೀ  ಹೆಚ್ಚು  ಸೆಲೆಬ್ರಿಟಿಗಳ ಸರ್ಚ್​ನಲ್ಲಿ   ನಟಿ ರಾಧಿಕಾ ಅವರದ್ದೇ ಟಾಪ್​. ವ್ಯಾಟ್ಸಪ್​, ಫೇಸ್​ಬುಕ್, ಟ್ವಿಟ್ಟರ್​ಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್​ ಆಗ್ತಿದ್ದಾರೆ ರಾಧಿಕಾ. ಅಷ್ಟಕ್ಕೂ ಚುನಾವಣೆಗೂ , ನಟಿ ರಾಧಿಕಾಗೂ ಎತ್ತಣ ಸಂಬಂಧ…? ಮುಂದೆ  ಓದಿ

ರಾಜ್ಯ ರಾಜಕೀಯ ಅತಂತ್ರ  ಸ್ಥಿತಿ ಆದಾಗಿನಿಂದ  ಸೋಶಿಯಲ್​  ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್​ಗಳಯ ಆರಂಭವಾದವು.   ಬಹುಮತ ಸಿಗದೇ ಬಿಜೆಪಿ ರಾಜೀನಾಮೆ ನೀಡಿದ್ದಾಯ್ತು. ಕುಮಾರಸ್ವಾಮಿ  ಸಿಎಂ ಪ್ರಮಾಣ ವಚನ ಸ್ವಿಕರಿಸಲು ವೇದಿಕೆ ಕೂಡ  ಸಿದ್ಧವಾಗಿದೆ. ಆದರೆ ನಟಿ ರಾಧಿಕಾ  ಅವರ  ಸರ್ಚ್​ ಆಗಲೀ, ಅವರ ಮೇಲಿನ ಟ್ರೋಲ್​ ಆಗಲೀ ಕಡಿಮೆಯಾಗಿಲ್ಲ.

ಚುನಾಣಾ  ಫಲಿತಾಂಶದ ನಂತರ    ರಾಧಿಕಾ ಬಗ್ಗೆ  ತಿಳಿದುಕೊಳ್ಳಲು  ಗೂಗಲ್​ ಮೊರೆ ಹೋಗಿದ್ದವರ ಸಂಖ್ಯೆ ಅತೀ ಹೆಚ್ಚು. ಈ ಹಿಂದೆ  ಹೆಚ್​ ಡಿ. ಕುಮಾರಸ್ವಾಮಿ ಮತ್ತು  ನಟಿ ರಾಧಿಕಾ   ಬಗ್ಗೆ  ಗಾಸಿಪ್​ಗಳು ಕೇಳಿ ಬಂದವು. ರಾಧಿಕಾರನ್ನು ಕುಮಾರಸ್ವಾಮಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ, ಅವರಿಗೊಂದು ಮಗು ಇದೆ ಎಂಬ  ಸ್ಫೋಟಕ ಮಾಹಿತಿ ಹೊರ ಬಂತು.  ಆದರೆ, ಇದೆಲ್ಲಾ ಹಳೆಯ ವಿಚಾರ. ಆದರೆ ಇದೀಗ ರಾಧಿಕಾ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ.  ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಚ್​ ಮಾಡುವುದಕ್ಕಿಂತ ರಾಧಿಕಾ ಅವರ ಸರ್ಚ್​ ಸಿಕ್ಕಾಪಟ್ಟೆ ಜಾಸ್ತಿಯಾಗುತ್ತಿದೆ. ಅವರನ್ನು ಲೇವಡಿ ಮಾಡುವವರ ಸಂಖ್ಯೆ  ಕೂಡ ವಿಪರೀತವಾಗುತ್ತಿದೆ. ಎಲ್ಲಿ ನೋಡಿದ್ರೂ ರಾಧಿಕಾ ಬಗ್ಗೆ  ಸುದ್ದಿಗಳು ಹಬ್ಬುತ್ತಿವೆ. ಇದರಿಂದಾಗಿ   ಗೂಗಲ್​ನಲ್ಲಿ ಅತೀ ಹೆಚ್ಚು ಟ್ರೋಲ್​ ಮತ್ತು  ಸರ್ಚ್​ಗೆ ಒಳಪಟ್ಟಿರುವ ಸೆಲೆಬ್ರಿಟಿಗಳಲ್ಲಿ ರಾಧಿಕಾ ಕೂಡ ಟಾಪ್​ನಲ್ಲೇ ಇದ್ದಾರೆ.

ಮುಖ್ಯಮಂತ್ರಿಗಳ ಹೆಸರಿಗೆ ಕರಿ ಮಸಿ

ರಾಧಿಕಾ ಅವರ ವಿಚಾರವನ್ನಿಟ್ಟುಕೊಂಡು ಕೆಲ ಕಿಡಿಗೇಡಿಗಳು ಆನ್ ಲೈನ್ ನಲ್ಲಿ ಮುಖ್ಯಮಂತ್ರಿಗಳ ಹೆಸರಿಗೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು. ಅಲ್ಲದೇ ಇದೆಲ್ಲಾ   ಸುಳ್ಳು  ಅವರ ರಾಜಕೀಯ ಜೀವನಕ್ಕೆ ಮಸಿ ಬಳಿಯಲು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ.

ಇನ್ನು ನಟಿ ರಾಧಿಕಾ ಅಭಮಾನಿಗಳು ನಟಿಯ ವೈಯಕ್ತಿಕ ಜೀವನಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದು, ಒಬ್ಬ ಪ್ರತಿಭಾವಂತ ನಟಿಯನ್ನು ರೀತಿ ಟ್ರೋಲ್​ ಮಾಡಿ ಅಪಹಾಸ್ಯಕ್ಕೆ  ಗುರಿ ಮಾಡುತ್ತಿರುವುದು  ಖಂಡನೀಯ ಎಂದಿದ್ದಾರೆ.

 

Please follow and like us:
0
http://bp9news.com/wp-content/uploads/2018/05/22-1458648132-radhika-kumarswamy-actress-wallpaper-1024x683.jpghttp://bp9news.com/wp-content/uploads/2018/05/22-1458648132-radhika-kumarswamy-actress-wallpaper-150x150.jpgBP9 Bureauಸಿನಿಮಾಸಿನಿಮಾ ಟಾಕ್ : ಕಳೆದ ಒಂದು ವಾರದಿಂದ ಗೂಗಲ್​ನಲ್ಲಿ ಅತೀ  ಹೆಚ್ಚು  ಸೆಲೆಬ್ರಿಟಿಗಳ ಸರ್ಚ್​ನಲ್ಲಿ   ನಟಿ ರಾಧಿಕಾ ಅವರದ್ದೇ ಟಾಪ್​. ವ್ಯಾಟ್ಸಪ್​, ಫೇಸ್​ಬುಕ್, ಟ್ವಿಟ್ಟರ್​ಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್​ ಆಗ್ತಿದ್ದಾರೆ ರಾಧಿಕಾ. ಅಷ್ಟಕ್ಕೂ ಚುನಾವಣೆಗೂ , ನಟಿ ರಾಧಿಕಾಗೂ ಎತ್ತಣ ಸಂಬಂಧ...? ಮುಂದೆ  ಓದಿ ರಾಜ್ಯ ರಾಜಕೀಯ ಅತಂತ್ರ  ಸ್ಥಿತಿ ಆದಾಗಿನಿಂದ  ಸೋಶಿಯಲ್​  ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್​ಗಳಯ ಆರಂಭವಾದವು.   ಬಹುಮತ ಸಿಗದೇ ಬಿಜೆಪಿ ರಾಜೀನಾಮೆ ನೀಡಿದ್ದಾಯ್ತು. ಕುಮಾರಸ್ವಾಮಿ  ಸಿಎಂ ಪ್ರಮಾಣ ವಚನ ಸ್ವಿಕರಿಸಲು...Kannada News Portal