ಬೆಂಗಳೂರು:  ಈ ಫಲಿತಾಂಶ ನನಗೆ ಸಮಾಧಾನ ಇಲ್ಲ. ನಾಡಿನ ಜನತೆ ಈ ನಿರ್ಧಾರವನ್ನು ಒಪ್ಪಿಕೊಳ್ಳಲೇ ಬೇಕು. ಆದ್ರೆ ಈ ರೀತಿಯ ಫಲಿತಾಂಶ ಬರಲು ಜನತೆಯ ತಪ್ಪಿಲ್ಲ. ಜನರಿಗೆ ನಮ್ಮ ಪಕ್ಷದ ಮೇಲೆ ಅಪನಂಬಿಕೆ ಬರುವಂತಾ ಮಾತುಗಳನ್ನಾಡಿದ್ದರು. ಆ ಕಾರಣವಾಗಿ ಸೆಕ್ಯುಲರ್ ವೋಟ್ ಡಿವೈಡ್ ಆಗಿ ಈ ಫಲಿತಾಂಶ ಹೊರ ಬಿದ್ದಿದೆ.

ನಮ್ಮ ಈ ಪರಿಸ್ಥಿತಿಗೆ ಯಾರು ಕಾರಣವಾಗಿದ್ದರೋ ಅವರಿಗೆ ಇದೀಗ ತಪ್ಪಿನ ಅರಿವಾಗಿದೆ ಎಂದು ಭಾವಿಸುತ್ತೇನೆ. ಅವರ ತಪ್ಪು ಸಂದೇಶಗಳಿಂದ ಇವತ್ತು ಬಿಜೆಪಿಗೆ 104 ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ ಮೋದಿ ಅಲೆ ಮತ್ತು ಬಿಜೆಪಿ ವರ್ಚಸ್ ಗೆ ದೊರೆತ ಸ್ಥಾನ ಇದು ಎಂದು ನೈತಿಕತೆ ಉಳ್ಳ ರಾಜಕೀಯ ವಿಮರ್ಶಾತ್ಮರಕ ಹೇಳಲು ಸಾಧ್ಯವೇ ಇಲ್ಲ ಎಂದು ಕೈ ಪಾಳಯಕ್ಕೆ ಮಾರ್ಮಿಕವಾಗಿ ಬಿಸಿ ಮುಟ್ಟಿಸಿದರು.

ಕಾಂಗ್ರೆಸ್ ನಮಗೆ ಬೆಂಬಲ ಸೂಚಿಸಿರುವುದಕ್ಕೆ ಕೃತಜ್ಞತೆಗಳು. ಬಿಜೆಪಿಯವರು ಪೂರ್ಣ ಬಹುಮತ ಇಲ್ಲದಿದ್ದರೂ ವಾಮಮಾರ್ಗವನ್ನು ಹುಡುಕುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ಬಿಡುತ್ತಿಲ್ಲ. ಬಿಜೆಪಿ ನಾಯಕರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಮೇಘಾಲಯ, ಗೋವಾ, ನಾಗಾಲ್ಯಾಂಡ್, ಜಮ್ಮಕಾಶ್ಮೀರ ಮತ್ತು ಬಿಹಾರಗಳಲ್ಲಿ ಮೈತ್ರಿ ಮಾಡಿಕೊಂಡು ಅಲ್ಲಿ ಹೆಚ್ಚು ಶಾಸಕರ ಬಲಹೊಂದಿದ್ದ ಪಕ್ಷವನ್ನು ಅಧಿಕಾರದಿಂದ ದೂರ ಉಳಿಸಿರುವ ಬಿಜೆಪಿಯವರು, ಈಗ ಕರ್ನಾಟಕದಲ್ಲಿ ನೈತಿಕತೆ ಮಾತುಗಳನ್ನು ಹಾಡುತ್ತಿದ್ದಾರೆ. ಇದು ಹಾಸ್ಯಾಸ್ಪದ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇನ್ನು ಆಪರೇಷನ್ ಕಮಲ ಮಾಡಲು ಬಿಜೆಪಿ ಮುಂದಾಗಿದೆ ಇದು ಪ್ರಜಾಪ್ರಭುತ್ವ ಉಳಿಸುವ ಮಾರ್ಗವೇ ಎಂದು ಮೋದಿಯನ್ನು ಪ್ರಶ್ನಿಸಿದ ಎಚ್ಡಿಕೆ, ನಾನು ಸಿಎಂ ಆಗಲು ಈ ಪರಿಸ್ಥಿತಿ ನಿರ್ಮಾಣವಾಗಿದ್ದು ನನಗೆ ನೋವು ಇದೆ. ರಾಜ್ಯದ ಆರುವರೆ ಕೋಟಿ ಜನರು ಒಪ್ಪಿಗೆ ನೀಡಿ ಸಿಎಂ ಆಗುತ್ತಿಲ್ಲ. ಆದರೆ ರಾಜ್ಯವನ್ನು ಉಳಿಸುವ ದೃಷ್ಠಿಯಿಂದ ಒಬೊಬ್ಬರು ಒಂದೊಂದು ದೃಷ್ಠಿಯಿಂದ ಒಂದೊಂದು ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಈ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅಧಿಕಾರಕ್ಕಾಗಿಯೇ ನಾನು ಈ ಮೈತ್ರಿಗೆ ಒಪ್ಪಿಗೆ ನೀಡುತ್ತಿಲ್ಲ. ರಾಜ್ಯದಲ್ಲಿ ಒಂದು ಉತ್ತಮ ಸರ್ಕಾರ ರಚಿಸಲು ಈ ನಿರ್ಧಾರವನ್ನು ತೆಗೆದು ಕೊಂಡಿದ್ದೇನೆ. ಅದೂ ನಮ್ಮ ಎಲ್ಲಾ ಶಾಸಕರ ಜೊತೆ ಚರ್ಚೆ ಮಾಡಿಯೇ ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.

Please follow and like us:
0
http://bp9news.com/wp-content/uploads/2018/05/370cc1159c3515ccdc6cc19b65a49aa4.jpghttp://bp9news.com/wp-content/uploads/2018/05/370cc1159c3515ccdc6cc19b65a49aa4-150x150.jpgPolitical Bureauಪ್ರಮುಖರಾಜಕೀಯಬೆಂಗಳೂರು:  ಈ ಫಲಿತಾಂಶ ನನಗೆ ಸಮಾಧಾನ ಇಲ್ಲ. ನಾಡಿನ ಜನತೆ ಈ ನಿರ್ಧಾರವನ್ನು ಒಪ್ಪಿಕೊಳ್ಳಲೇ ಬೇಕು. ಆದ್ರೆ ಈ ರೀತಿಯ ಫಲಿತಾಂಶ ಬರಲು ಜನತೆಯ ತಪ್ಪಿಲ್ಲ. ಜನರಿಗೆ ನಮ್ಮ ಪಕ್ಷದ ಮೇಲೆ ಅಪನಂಬಿಕೆ ಬರುವಂತಾ ಮಾತುಗಳನ್ನಾಡಿದ್ದರು. ಆ ಕಾರಣವಾಗಿ ಸೆಕ್ಯುಲರ್ ವೋಟ್ ಡಿವೈಡ್ ಆಗಿ ಈ ಫಲಿತಾಂಶ ಹೊರ ಬಿದ್ದಿದೆ. ನಮ್ಮ ಈ ಪರಿಸ್ಥಿತಿಗೆ ಯಾರು ಕಾರಣವಾಗಿದ್ದರೋ ಅವರಿಗೆ ಇದೀಗ ತಪ್ಪಿನ ಅರಿವಾಗಿದೆ ಎಂದು ಭಾವಿಸುತ್ತೇನೆ. ಅವರ ತಪ್ಪು ಸಂದೇಶಗಳಿಂದ...Kannada News Portal