ಬೆಂಗಳೂರು: ಕಾರ್ಮಿಕ ಸಚಿವ ವೆಂಕಟರಮಣಪ್ಪ ಯಾರೂ ಅಂತ ಕಾರ್ಮಿಕ ಇಲಾಖೆಯ ಸಿಬ್ಬಂದಿಗೇ ಗೊತ್ತಿಲ್ಲವೇ, ಈ ವಿಷಯ ತಿಳಿದ ಸಚಿವ ವೆಂಕಟರಮಣಪ್ಪ ಅವರೇ ಕಕ್ಕಾಬಿಕ್ಕಿಯಾದ ಪ್ರಸಂಗ ಕಾರ್ಮಿಕ ಭವನದಲ್ಲಿ ಬುಧವಾರ ನಡೆದಿದೆ.

ಸಚಿವರು ಕಾರ್ಮಿಕ ಇಲಾಖೆಗೆ ಡಿಢೀರ್ ಭೇಟಿ ನೀಡಿದಾಗ ಅಲ್ಲಿ  ಅಧಿಕಾರಿಗಳೇ ಪತ್ತೆ ಇರಲಿಲ್ಲ. ಹೋದರೆ ಹೋಗಲಿ ಅತ್ತ ಹಾಜರಿ ಪುಸ್ತಕ ಕೊಡಿ ಅಂತ ಕೇಳಿದ್ರೆ ಹಾಜರಿ ಪುಸ್ತಕವೇ ಇರಲಿಲ್ಲ. ಕಾರ್ಮಿಕ ಆಯುಕ್ತರು ಎಲ್ಲೋ ಇದ್ದ ನಂತರ ಸಚಿವರ ಎದುರಿಗೆ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸದೆ ಕಕ್ಕಾಬಿಕ್ಕಿಯಾದರು. ಕೂಡಲೆ ಶೌಚಾಲಯಕ್ಕೆ ತೆರಳಿ ಅಲ್ಲಿನ ಅವ್ಯವಸ್ಥೆಯನ್ನ ಪರಿಶೀಲಿಸಿದಾಗ ಅಲ್ಲಿನ ಕೊಠಡಿ ಗಬ್ಬು ನಾರುತ್ತಿತ್ತು. ಇದರಿಂದಾಗಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನ ಸಚಿವರು ತರಾಟೆಗೆ ತೆಗೆದುಕೊಂಡರು.

ಕೂಡಲೆ ಎಲ್ಲಾ ಅವ್ಯವಸ್ಥೆಗಳನ್ನ ಸರಿಪಡಿಸಿದರೆ ಸರಿ ಇಲ್ಲದಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ ಅಲ್ಲಿಂದ ಸಚಿವರು ತೆರಳಿದರು.

 

Please follow and like us:
0
http://bp9news.com/wp-content/uploads/2018/06/venkataramanappa-1528532076.jpghttp://bp9news.com/wp-content/uploads/2018/06/venkataramanappa-1528532076-150x150.jpgBP9 Bureauಪ್ರಮುಖರಾಜಕೀಯLabor Minister's immediate visit: Ministers no one knows about staff !!!!!ಬೆಂಗಳೂರು: ಕಾರ್ಮಿಕ ಸಚಿವ ವೆಂಕಟರಮಣಪ್ಪ ಯಾರೂ ಅಂತ ಕಾರ್ಮಿಕ ಇಲಾಖೆಯ ಸಿಬ್ಬಂದಿಗೇ ಗೊತ್ತಿಲ್ಲವೇ, ಈ ವಿಷಯ ತಿಳಿದ ಸಚಿವ ವೆಂಕಟರಮಣಪ್ಪ ಅವರೇ ಕಕ್ಕಾಬಿಕ್ಕಿಯಾದ ಪ್ರಸಂಗ ಕಾರ್ಮಿಕ ಭವನದಲ್ಲಿ ಬುಧವಾರ ನಡೆದಿದೆ. ಸಚಿವರು ಕಾರ್ಮಿಕ ಇಲಾಖೆಗೆ ಡಿಢೀರ್ ಭೇಟಿ ನೀಡಿದಾಗ ಅಲ್ಲಿ  ಅಧಿಕಾರಿಗಳೇ ಪತ್ತೆ ಇರಲಿಲ್ಲ. ಹೋದರೆ ಹೋಗಲಿ ಅತ್ತ ಹಾಜರಿ ಪುಸ್ತಕ ಕೊಡಿ ಅಂತ ಕೇಳಿದ್ರೆ ಹಾಜರಿ ಪುಸ್ತಕವೇ ಇರಲಿಲ್ಲ. ಕಾರ್ಮಿಕ ಆಯುಕ್ತರು ಎಲ್ಲೋ ಇದ್ದ ನಂತರ ಸಚಿವರ ಎದುರಿಗೆ ಹಾಜರಾಗಿ...Kannada News Portal